
ಮತ್ತೆ ಮಾಯಾಮೃಗ ಭಾಗ 3- ಪತ್ತೆಯಾಗದ ಶಾಸ್ತ್ರಿಗಳು, ಅಮೇರಿಕಾದಿಂದ ಬಂದ ಮಗ ಸೊಸೆ ಮೇಲೆ ಅನುಮಾನ!
Wednesday, November 2, 2022
ಟಿ ಎನ್ ಸೀತಾರಾಮ್ ಅವರ ಮತ್ತೆ ಮಾಯಾಮೃಗದ ಮೂರನೇ ಭಾಗ ನಾಪತ್ತೆಯಾದ ಶಾಸ್ತ್ರೀಗಳ ಮನೆಯ ದೃಶ್ಯ ದೊಂದಿಗೆ ಆರಂಭವಾಗಿದೆ. ಮನೆಗೆ ಬಂದ ಹಾಲಿನವನೊಂದಿಗೂ ಶಾಸ್ತ್ರೀಗಳು ಸಿಕ್ಕರೆ ಮನೆಗೆ ಬರಲು ತಿಳಿಸಲು ಶಾಸ್ತ್ರೀ ಪತ್ನಿ ವಿನಂತಿಸಿದ್ದಾರೆ.ಇನ್ನೂ ಶಾಸ್ತ್ರಿಗಳ ಮನೆಗೆ ದೇವಸ್ಥಾನದ ಟ್ರಸ್ಟಿ ಬಂದು ವಿಚಾರಿಸಿ ಶಾಸ್ತ್ರಿಗಳು ಬಂದರೆ ದೇವಾಲಯ ಕ್ಕೆ ಬರಲು ತಿಳಿಸಿದ್ದಾರೆ. ಶಾಸ್ತ್ರೀಗಳ ಪತ್ನಿ ಮುಡಿಪು ಕಟ್ಟಿ ಇಟ್ಟು ದೇವರ ಮುಂದೆ ಪ್ರಾರ್ಥಿಸಿದ್ದಾರೆ.
ಇನ್ನೂ ಮನೆಗೆ ಅಮೇರಿಕಾದಿಂದ ಬಂದ ಮಗ ಹೆಂಡತಿಯೊಂದಿಗೆ ಸಡನ್ ಬಂದದ್ದು ತಂದೆ ತಾಯಿಗೆ ಅಚ್ಚರಿ ಮೂಡಿಸಿದೆ. ಮಗ ಸೊಸೆ ಯಾವುದೇ ಹುನ್ನಾರ ಇಟ್ಟುಕೊಂಡು ಬಂದಿದ್ದಾರೆ ಎಂದು ತಂದೆಗೆ ಅನುಮಾನ ಶುರುವಾಗಿದೆ. ಸೊಸೆ ಹೇಳಿದ ಮದುವೆ ಸುಳ್ಳೆಂಬುದು ಗೊತ್ತಾಗಿದೆ.
ಪೂರ್ವಿ ತನ್ನ ತಾತನ ಜೊತೆಗೆ ಮಾಡಿದ ನಿರ್ಲಕ್ಷ್ಯ ದ ಬಗ್ಗೆ ತಾಯಿ ಮಾಳವಿಕ ವಿಚಾರಿಸಿದಾಗ ತಾಯಿಗೆ ನೀಡಿದ ಚಿತ್ರಹಿಂಸೆ ಬಗ್ಗೆ ತನಗೆ ಗೊತ್ತು ಎಂಬುದನ್ನು ತಿಳಿಸಿದ್ದಾಳೆ. ನಾನು ಅವರನ್ನು ಕ್ಷಮಿಸಿದ್ದೇನೆ. ನೀನು ಕ್ಷಮಿಸಿ ಬಿಡು ಎಂದು ಮಗಳಿಗೆ ಬುದ್ದಿವಾದ ಹೇಳಿದ್ದಾಳೇ.
ಮೂರನೇ ಭಾಗದಲ್ಲಿಯೂ ಸಿಎಸ್ ಪಿ ಕಾಣಲೆ ಇಲ್ಲ!