ಸಿರಿಕನ್ನಡ ಚಾನೆಲ್ ನಲ್ಲಿ ಮತ್ತೆ ಮಾಯಾಮೃಗ- ಮೊದಲ ದಿನವೆ ಅಭಿಮಾನಿಗಳ ಮನಗೆದ್ದ ಧಾರವಾಹಿ
Monday, October 31, 2022
ಟಿ ಎನ್ ಸೀತಾರಾಮ್ ಅವರ ಮತ್ತೆ ಮಾಯಾಮೃಗ ಧಾರಾವಾಹಿ ಇಂದಿನಿಂದ ಸಿರಿ ಕನ್ನಡ ಚಾನೆಲ್ ನಲ್ಲಿ ಆರಂಭವಾಗಿದ್ದು ಮೊದಲ ದಿನವೆ ಅಭಿಮಾನಿಗಳ ಮನಗೆದ್ದಿದೆ.
ಮಾಯಮೃಗ ಧಾರಾವಾಹಿ ಮೊದಲ ಬಾರಿಗೆ 1998 ರಲ್ಲಿ ಡಿಡಿ ಚಂದನ ಟಿವಿ ವಾಹಿನಿಯಲ್ಲಿ ಪ್ರಸಾರ ಮಾಡಲಾಯಿತು. ಮತ್ತು ಇದು ಮಾರ್ಚ್ 10, 2014 ರಂದು Zee ಕನ್ನಡ ದೂರದರ್ಶನ ವಾಹಿನಿಯಲ್ಲಿ ಮತ್ತೆ ಪ್ರಸಾರವಾಗಿತ್ತು
ಎರಡು ದಶಕಗಳ ಹಿಂದೆ ಪ್ರಸಾರವಾಗಿದ್ದ ಮಾಯಮೃಗದ ಮುಂದುವರಿದ ರೂಪವಾಗಿರುವ ಮತ್ತೆ ಮನ್ವಂತರ ಸಿರಿ ಕನ್ನಡ ಚಾನೆಲ್ ನಲ್ಲಿ ಇಂದಿನಿಂದ ಪ್ರಸಾರವಾಗಿದೆ.
ಮೊದಲ ಕಂತಿನಲ್ಲಿ ಮೊದಲ ಪ್ರೇಮ್ ನಲ್ಲಿ ಕಾಣಿಸಿಕೊಂಡದ್ದು ಮಾಳವಿಕ ಅವಿನಾಶ್. ಈ ಧಾರಾವಾಹಿ ಆರಂಭವಾಗುತ್ತಲೆ ಪಾತ್ರಧಾರಿಗಳ ಮುಖಾಂತರ ಇದು ಹದಿನಾಲ್ಕು ವರ್ಷಗಳ ಹಿಂದೆ ನಿಂತ ಕಥೆಯನ್ನು ಮತ್ತೆ ತರಲಾಗುತ್ತಿದೆ ಎಂಬುದನ್ನು ಸೂಚ್ಯವಾಗಿ ಹೇಳಲಾಗಿದೆ.
ಟಿ ಎನ್ ಸೀತಾರಾಂ ಅವರ ಧಾರವಾಹಿಯಲ್ಲಿ ಅವರ ತಂಡದಲ್ಲಿ ನ ಕೆಲವು ಕಲಾವಿದರ ಮುಖದರ್ಶನ ಮೊದಲ ಕಂತಿನಲ್ಲಿ ಆಗಿದೆ. ಟಿ ಎನ್ ಸೀತಾರಾಮ್ ಅವರ ಧಾರಾವಾಹಿ ಆರಂಭವಾಗುವ ಸಂದರ್ಭದಲ್ಲಿ ಇರುವ ವಾತವರಣ ಈ ಧಾರವಾಹಿ ಸೃಷ್ಟಿಸಲಿದೆ. ಹಳೆಯ ಮಾಯಾಮೃಗ ನೋಡದವರಿಗೆ ಅದನ್ನು ನೋಡದೆ ಇರುವ ಕೊರತೆ ಬಾರದಂತೆ ಜಾಣ್ಮೆ ಟಿ ಎನ್ ಸೀತಾರಾಮ್ ಅವರಲ್ಲಿ ಇರುವುದರಿಂದ ಹೊಸ ವೀಕ್ಷಕರಿಗೆ ಮತ್ತೆ ಮಾಯಾಮೃಗ ಹಳೆಯ ಕಥೆ ನೋಡದ ಕೊರತೆಯನ್ನು ಮೂಡಿಸದು.
ಇನ್ನೂ ಮೊದಲ ಕಂತಿನಲ್ಲಿ ಸಿ ಎಸ್ ಪಿ ಯ ದರ್ಶನವಾಗಿಲ್ಲ.ಟೈಟಲ್ ಸಾಂಗ್ ಅಂತು ಅದ್ಭುತ.