UDUPI : ಕಡಲ ತಡಿಯಲ್ಲಿ ಭರ್ಜರಿ ಬೂತಾಯಿ ಮೀನು
Saturday, October 29, 2022
ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳ ಬಲೆಗೆ ಬಿದ್ದಿದ್ದು, ಮತ್ಸ್ಯ ಪ್ರೀಯರು ಸಖತ್ ಖುಷಿಯಾಗಿದ್ದಾರೆ.
ಸ್ಥಳೀಯ ಭಾಷೆಯಲ್ಲಿ ಬೈಗೆ ಮೀನು ಎಂದು ಕರೆಯಲ್ಪಡುವ ಬೂತಾಯಿ, ಸ್ಥಳೀಯ ಮೀನುಗಾರರು ಬೀಸಿದ ಕೈರಂಪಣಿ ಬಲೆಗೆ ಬಿದ್ದಿದೆ. ಅಷ್ಟೇ ಅಲ್ಲದೆ ಸಮುದ್ರ ದಡಕ್ಕೂ ಯಥೇಚ್ಛವಾಗಿ ಬರುತ್ತಿವೆ. ವಿಷಯ ತಿಳಿದು ಸ್ಥಳೀಯರು ಪಾತ್ರೆ ಪಡಗೆಗಳನ್ನು ಹಿಡಿದು ಕಡಲ ಕಿನಾರೆಯತ್ತ ಬರುತ್ತಿದ್ದಾರೆ.