-->
ಶ್ರೀನಿವಾಸ್ ವಿಶ್ವವಿದ್ಯಾಲಯದ ಡಾ. ಸಂಧ್ಯಾ ಶೆಣೈಗೆ ಪ್ರತಿಷ್ಠಿತ NASI ಯುವ ವಿಜ್ಞಾನಿ ಪ್ರಶಸ್ತಿ

ಶ್ರೀನಿವಾಸ್ ವಿಶ್ವವಿದ್ಯಾಲಯದ ಡಾ. ಸಂಧ್ಯಾ ಶೆಣೈಗೆ ಪ್ರತಿಷ್ಠಿತ NASI ಯುವ ವಿಜ್ಞಾನಿ ಪ್ರಶಸ್ತಿ



ಮುಕ್ಕದ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಅಭಿಯಾಂತ್ರಿಕ ಮತ್ತು ತಾಂತ್ರಿಕ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿಯಾದ ಡಾ. ಸಂಧ್ಯಾ ಶೆಣೈ ಅವರು 2021 ನೇ ಸಾಲಿನ ಪ್ರತಿಷ್ಠಿತ NASI- ಯುವ ವಿಜ್ಞಾನಿ ಪ್ಲಾಟಿನಂ ಜುಬಿಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಉತ್ತರ ಪ್ರದೇಶದ ಪ್ರಯಾಗರಾಜ್‌ (ಅಲಹಾಬಾದ್) ನಲ್ಲಿರುವ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಇಂಡಿಯಾ, ಭಾರತದ ಮೊದಲ ವಿಜ್ಞಾನ ಅಕಾಡೆಮಿಯಾಗಿದ್ದು, ಯುವ ವಿಜ್ಞಾನಿಗಳಲ್ಲಿ ಭರವಸೆ, ಸೃಜನಶೀಲತೆ ಮತ್ತು ಶ್ರೇಷ್ಠತೆಯನ್ನು ಗುರುತಿಸಲು ಪ್ರಶಸ್ತಿಯನ್ನು ಸ್ಥಾಪಿಸಿದೆ. ಯಾವುದೇ ವರ್ಷದಲ್ಲಿ ಪ್ರಶಸ್ತಿಗಳ ಸಂಖ್ಯೆಯು ಐದಕ್ಕೆ ಸೀಮಿತವಾಗಿರುತ್ತದೆ ಮತ್ತು ಭಾರತದಲ್ಲಿ ನಡೆಸಿದ ಸಂಶೋಧನಾ ಕಾರ್ಯವನ್ನು ಆಧರಿಸಿದೆ. ಡಾ. ಸಂಧ್ಯಾ ಅವರಿಗೆ ಥರ್ಮೋಎಲೆಕ್ಟ್ರಿಕ್ ಮತ್ತು ಫೋಟೊಕ್ಯಾಟಲಿಟಿಕ್ ವಸ್ತುಗಳನ್ನು ಒಳಗೊಂಡಿರುವ ಶಕ್ತಿ ಮತ್ತು ಪರಿಸರ ಅನ್ವಯಗಳ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಕೊಡುಗೆಗಳಿಗಾಗಿ ಪ್ರಶಸ್ತಿಯನ್ನು ಆದಿತ್ಯವಾರ ನೀಡಲಾಯಿತು.

 ಪ್ರಶಸ್ತಿಯು ಪ್ರಶಸ್ತಿ ಪತ್ರ, ಪದಕ ಮತ್ತು ನಗದು ಬಹುಮಾನವನ್ನು ಒಳಗೊಂಡಿದೆ.
ವೈಜ್ಞಾನಿಕ ಪ್ರಬಂಧಗಳಿಗೆ ಇತರ ಸಂಶೋಧಕರಿಂದ ಸಿಗುವ ಉಲ್ಲೇಖಗಳನ್ನಾಧರಿಸಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಲಂಡನ್ ಅವರು ತಯಾರಿಸಿದ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕೂಡ ಡಾ. ಸಂಧ್ಯಾ ಶೆಣೈರವರು ಸ್ಥಾನ ಪಡೆದುಕೊಂಡಿದ್ದಾರೆ. ವಸ್ತು ವಿಜ್ಞಾನ ಮತ್ತು ರಸಾಯನ ಶಾಸ್ತ್ರ ಕ್ಷೇತ್ರಗಳಲ್ಲಿ ಮಾಡಿದ ಉನ್ನತ ಮಟ್ಟದ ಸಂಶೋಧನಾ ಕಾರ್ಯಗಳಿಗಾಗಿ ಇವರಿಗೆ ಈ ಗೌರವ ಸಂದಿದೆ. ಅವರ ಸಂಶೊಧನಾ ಲೇಖನವೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಉನ್ನತ 100 ಲೇಖನಗಳಲ್ಲಿ ಒಂದಾಗಿದೆ ಎಂದು ರೋಯಲ್ ಸೊಸೈಟಿ ಕೆಮಿಸ್ಟ್ರಿಯವರು ಪ್ರಕಟಿಸಿದ್ದಾರೆ. 

ಇವರ ಥರ್ಮೋಇಲೆಕ್ಟ್ರಿಕ್ ಮತ್ತು ಫೋಟೊ ಕ್ಯಾಟಲಿಟಿಕ್ ವಸ್ತುಗಳ ಮೇಲಿನ ಸಂಶೋಧನಾ ಲೇಖನಗಳಿಗೆ ಅತ್ಯಂತ ಜನಪ್ರಿಯ ಹಾಗೂ ಅತ್ಯಾಧುನಿಕ (ಹಾಟ್) ಸಂಶೋಧನೆಗಳೆಂದು ಪರಿಗಣಿಸಿದ್ದಾರೆ.

ಈ ಸಾಧನೆಯನ್ನು ಶ್ರೀನಿವಾಸ್ ವಿಶ್ವ ವಿದ್ಯಾ ಲಯದ ಕುಲಾಧಿಪತಿ ಡಾ. ಶ್ರೀ ಸಿಎ. ಎ ರಾಘವೇಂದ್ರ ರಾವ್ ರವರು ಹಾಗೂ ಸಹಕುಲಾಧಿಪತಿ ಡಾ.ಎ ಶ್ರಿನಿವಾಸ್ ರಾವ್ ರವರು ಶ್ಲಾಘಿಸಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99