27 ವರ್ಷದ ಯುವನಟಿ, ಯೂಟ್ಯೂಬರ್ ಶ್ರೇಯಾಗೆ ಹೃದಯಾಘಾತ
Wednesday, December 8, 2021
ಟಾಲಿವುಡ್‌ನ ಯುವ ನಟಿ, ಯೂಟ್ಯೂಬರ್ ಶ್ರೇಯಾ ಮುರಳಿಧರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೈದರಾಬಾದ್‌ವರಾದ 27ರ ಹರೆಯದ ಶ್ರೇಯಾ ಮುರಳಿಧರ್ ಆಕೆಯ ಯೂಟ್ಯೂಬ್ ಚಾನಲ್‌ನಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಳು. ಯೂಟ್ಯೂಬರ್ ಆಗಿ, ಕಿರುತೆರೆಯಲ್ಲಿ ಹೆಸರು ಮಾಡಿ, ಅಂದು ಕೊಂಡದ್ದನ್ನು ಸಾಧಿಸಿ, ಭರವಸೆಯ ನಟಿಯಾಗಿ ಬೆಳೆಯುತ್ತಿದ್ದ ಶ್ರೇಯಾ ‘ಪೆಲ್ಲಿ ಚೂಪುಲು’ ರಿಯಾಲಿಟಿ ಶೋ ದಲ್ಲೂ ಶ್ರೇಯಾ ಭಾಗಿಯಾಗಿ ಗಮನ ಸೆಳೆದಿದ್ದರು.
ಯುವತಾರೆಯ ಸಾವಿಗೆ ಸಂತಾಪಗಳ ಮಹಾಪೂರವೇ ಹರಿದುಬರುತ್ತಿದ್ದು, ಅವರ ಸಾವು ಅವರ ಅಭಿಮಾನಿ ಸಮುದಾಯಕ್ಕೆ ಆಘಾತವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವು ನೆಟ್ಟಿಗರು ದುಃಖ
ವ್ಯಕ್ತಪಡಿಸುತ್ತಿದ್ದಾರೆ.