-->

 ಶರಣ್ ಪಂಪ್ವೆಲ್, ದುರ್ಗಾ ವಾಹಿನಿ ಯುವತಿಯರ ಬಗ್ಗೆ ಅಪಪ್ರಚಾರ- ನಾಲ್ವರ ಬಂಧನ

ಶರಣ್ ಪಂಪ್ವೆಲ್, ದುರ್ಗಾ ವಾಹಿನಿ ಯುವತಿಯರ ಬಗ್ಗೆ ಅಪಪ್ರಚಾರ- ನಾಲ್ವರ ಬಂಧನ




ಮಂಗಳೂರು: ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಗ್ಗೆ ಅಪಪ್ರಚಾರದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.


ಸುಳ್ಯ ತಾಲೂಕಿನ ಕಸಬಾದ ಭವಾನಿ ಶಂಕರ್ (32), ಮಂಗಳೂರಿನ ಬಜಾಲ್ ನ ನೌಶಾದ್ (27), ಕಾವೂರಿನ ರವಿ ಯಾನೆ ಟೆಕ್ಕಿ ರವಿ (38), ಮೂಡಬಿದ್ರೆ ಧರೆಗುಡ್ಡೆಯ ಜಯಕುಮಾರ್ (33) ಬಂಧಿತರು.






ಘಟನೆ ಹಿನ್ನೆಲೆ: ಇತ್ತೀಚೆಗೆ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶರಣ್ ಪಂಪ್ ವೆಲ್ ಅವರು ಯುವತಿಯೊಂದಿಗೆ ಚಾಟ್ ಮಾಡಿದ್ದರು ಎಂಬಂತೆ ಇರುವ ವಾಟ್ಸಪ್ ಚಾಟ್ ನ ಸ್ಕ್ರೀನ್ ಶಾಟ್ ವೊಂದು ಹರಿದಾಡುತ್ತಿತ್ತು. ಯುವತಿ ಜೊತೆಗೆ ಚಾಟ್ ಮಾಡುತ್ತಾ ಆಕೆಯನ್ನು ಲಾಡ್ಜ್ ಗೆ ಕರೆಯುವುದು , ಹಣ ಕೊಡ್ತೇನೆ ಎನ್ನುವುದು ಜೊತೆಗೆ ದುರ್ಗಾವಾಹಿನಿ ಯುವತಿಯರಿಗೂ ಈ ರೀತಿ ಮಾಡಿದ್ದೇನೆ ಎಂಬಂತೆ ಚಾಟ್ ಮಾಡಲಾಗಿತ್ತು. ಇದನ್ನು ಶರಣ್ ಪಂಪ್ ವೆಲ್ ತೇಜೋವಧೆ ಮಾಡಲು ಸೃಷ್ಟಿಸಲಾಗಿದ್ದು ಈ ಬಗ್ಗೆ ವಿಹಿಂಪ ಮಂಗಳೂರು ನಗರ ಪೊಲೀಸ್ ಕಮೀಷನರ್ ಗೆ ದೂರು ನೀಡಿ ಫೇಕ್ ಮೆಸೆಜ್ ಸೃಷ್ಟಿಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಶರಣ್ ಪಂಪ್ ವೆಲ್ ಬಗ್ಗೆ ಅಪಪ್ರಚಾರದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ನಾಲ್ವರನ್ನು ಬಂಧಿಸಿದ್ದಾರೆ



ಇದನ್ನು ಓದಿ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99