-->

Mangalore- ಹೆರಿಗೆಗಾಗಿ ಕೋವಿಡ್ ಸೋಂಕಿತ ಮಹಿಳೆಯ ನರಕಯಾತನೆ- ಮನಕಲುಕುತಿದೆ ದೂರಿನಲ್ಲಿರುವ ಅಂಶ

Mangalore- ಹೆರಿಗೆಗಾಗಿ ಕೋವಿಡ್ ಸೋಂಕಿತ ಮಹಿಳೆಯ ನರಕಯಾತನೆ- ಮನಕಲುಕುತಿದೆ ದೂರಿನಲ್ಲಿರುವ ಅಂಶ




ಮಂಗಳೂರು; ಇತ್ತೀಚೆಗೆ ಫಳ್ನೀರ್ ನ ಯುನಿಟಿ ಆಸ್ಪತ್ರೆ ವೈದ್ಯ ಜಯಪ್ರಕಾಶ್ ಅವರ ಮೇಲೆ‌ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಬ್ಬರನ್ನು ಮಂಗಳೂರು ಪೊಲೀಸರು ‌ಬಂಧಿಸಿದ್ದರು.  ಈ ಹಲ್ಲೆ ಪ್ರಕರಣದ ಹಿಂದಿನ ನೋವಿನ ಕಥೆಯನ್ನು ಮಂಗಳೂರಿನ ಗರ್ಭಿಣಿಯೊಬ್ಬರು ತೆರೆದಿಟ್ಟಿದ್ದಾರೆ. ಮಹಿಳಾ ವೈದ್ಯೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಕೊರೊನಾ ಪಾಸಿಟಿವ್ ಕಾರಣಕ್ಕೆ ಆಕೆಯನ್ನು ಗೋಳು ಹೊಯ್ದುಕೊಂಡ ಬಗ್ಗೆ ಆಕೆ ಪೊಲೀಸ್ ದೂರು ನೀಡಿದ್ದಾರೆ.   ಗರ್ಭಿಣಿ ಮಹಿಳೆ ನೀಡಿರುವ ದೂರಿನ ಯಥಾವತ್ ಪ್ರತಿ ಇಲ್ಲಿದೆ....

*ತುಂಬು ಗರ್ಭಿಣಿ ಖತೀಜಾ ಜಾಸ್ಮಿನ್ ಅನುಭವಿಸಿದ ಯಾತನಾಮಯ ಸನ್ನಿವೇಶಗಳನ್ನು  ಸ್ವತ ಅವರೇ ವಿವರಿಸುತ್ತಾರೆ...*

 ತುಂಬು ಗರ್ಭಿಣಿ ಆಗಿದ್ದ ನನಗೆ ಕೋವಿಡ್ ಕಾಯಿಲೆ ಬಂದು ಆ ಬಳಿಕ ತುರ್ತು ಚಿಕಿತ್ಸೆಗಾಗಿ ಆರೋಪಿಗಳನ್ನು ಭೇಟಿಯಾಗಿದ್ದ ಸಮಯ ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ್ದು, ಒಂದನೇ ಆರೋಪಿಯು ತನ್ನ ಹಣ, ರಾಜಕೀಯ ಬಲದಿಂದ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡದಂತೆ ಇತರರ ಮೇಲೆ ಪ್ರಭಾವ ಬೀರಿ ಎರಡನೇ ಆರೋಪಿಯ ಮುಖಾಂತರ ಕೊಲೆ ಮಾಡಲು ಯತ್ನಿಸಿದ್ದು, ತುರ್ತು ಚಿಕಿತ್ಸೆಯ ಅಗತ್ಯತೆಯ ಸಮಯದಲ್ಲಿ ಎಲ್ಲೂ ಚಿಕಿತ್ಸೆ ನೀಡದಂತೆ ವ್ಯವಸ್ಥೆ ಮಾಡಿ ನನ್ನನ್ನು ಮತ್ತು ಇಡೀ ಕುಟುಂಬವನ್ನು ತೀವ್ರ ಆತಂಕಕ್ಕೆ ಒಳಪಡಿಸಿರುವ ಬಗ್ಗೆ ದೂರು ಅರ್ಜಿ.

1. 'ನಾನು ಗಲ್ಫ್ ರಾಷ್ಟ್ರದಲ್ಲಿ ನನ್ನ ಪತಿಯೊಂದಿಗೆ ವಾಸ ಮಾಡಿಕೊಂಡು ಬರುತ್ತಿದ್ದೇನೆ. ನಾನು ಮೂಲತಃ ಮಂಗಳೂರಿನ ವಳಾಗಿರುತ್ತೇನೆ, ಮದುವೆಯಾದ ತರುವಾಯ ನಾನು ಎರಡು ಮಕ್ಕಳಿಗೆ ಜನ್ಮವಿತ್ತಿದ್ದೇನೆ. ಅವರಿಗೆ ಈಗ 8 ವರ್ಷ ಮತ್ತು 4 ವರ್ಷವಾಗಿರುತ್ತದೆ. ಸದರಿ ಎರಡೂ ಮಕ್ಕಳ ಹೆರಿಗೆ ಪೂರ್ವದಲ್ಲಿ ಮತ್ತು ಬಳಿಕ ಒಂದನೇ ಆರೋಪಿ ಡಾಕ್ಟರ್ ಪ್ರಿಯಾ ಬಳ್ಳಾಲ್ ಇವರು ನನಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಿರುತ್ತಾರೆ.

2. ಸದರಿ ಡಾಕ್ಟರ್ ಪ್ರಿಯಾ ಬಳ್ಳಾಲ್ ನನ್ನ ತಂದೆ ಹಾಗೂ ಅವರ ಸಂಪೂರ್ಣ ಕುಟುಂಬದವರಿಗೆಲ್ಲರಿಗೂ 2005 ರಿಂದ ಚಿರ ಪರಿಚಿತರಾಗಿರುತ್ತಾರೆ. ನಮ್ಮ ಕುಟುಂಬದಲ್ಲಿ ನನ್ನ ಚಿಕ್ಕಪ್ಪ, ಸಂಶೀರ್ ಆಲಿ ಎಂಬವರ ಹೆಂಡತಿ ಮುಮ್ತಾಜ್ ಎಂಬವರು ಪ್ರಪ್ರಥಮವಾಗಿ ತನ್ನ ಪ್ರಥಮ ಹೆರಿಗೆಯ ಸಮಯದಲ್ಲಿ 2005 ನೆ ಇಸವಿಯಲ್ಲಿ ಭೇಟಿ ಯಾಗಿದ್ದು ಸದರಿ ಮುಮ್ತಾಜ್ ರ ಹೆರಿಗೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಕಾರಣ ನಮ್ಮ ಕುಟುಂಬದ ಉಳಿದ ಮಹಿಳೆಯರು ತಾವು ಗರ್ಭಾವತಿಯಾಗಿದ್ದಾಗ ಮತ್ತು ಮಹಿಳೆಯರ ಇತರ ಕಾಯಿಲೆಗಳಿಗೆ ಡಾಕ್ಟರ್ ಪ್ರಿಯಾ ಬಳ್ಳಾಲ್ ಇವರನ್ನು ವೈದ್ಯಕೀಯ ನೆರವಿಗಾಗಿ ಸಂಪರ್ಕಿಸಲು ಪ್ರಾರಂಭಿಸಿದ್ದರು. ನಮ್ಮ ಕುಟುಂಬದಲ್ಲಿ ಸದರಿ ಮುಮ್ತಾಜ್ ಮತ್ತು ತಂಜೀಲಾ ಇವರುಗಳು ಡಾಕ್ಟರ್ ಪ್ರಿಯ ಬಳ್ಳಾಲ್ ಇವರ ವಯಕ್ತಿಕ ಸಂಪರ್ಕದಲ್ಲಿದ್ದರು. ಸದರಿಯವವ ಮೂಲಕ 2005 ನೇ ಇಸವಿಯಿಂದ ಈವರೆಗೆ 60ಕ್ಕಿಂತಲೂ ಹೆಚ್ಚು ಹೆರಿಗೆಯನ್ನು ಡಾಕ್ಟರ್ ಪ್ರಿಯಾ ಬಳ್ಳಾರ ಕೂಡ ಮಾಡುತ್ತಾರೆ. ಡಾಕ್ಟರ್ ಪ್ರಿಯಾ ಬಳ್ಳಾರ ಎಂದರೆ ನಮ್ಮ ಇಡೀ ಕುಲಕ್ಕೆ ನಮ್ಮದೇ ವೈದ್ಯರು ಎಂಬು ಅಭಿಮಾನ ಕೂಡ ಇತ್ತು

3, ಇತ್ತೀಚೆಗೆ ಗಲ್ಫ್ ರಾಷ್ಟ್ರದಲ್ಲಿ ಇದ್ದಾಗ ನಾನು ಮೂರನೇ ಮಗುವಿಗೆ ಗರ್ಭವತಿಯಾಗಿ ಈ ಹಿನ್ನಲೆಯಲ್ಲಿ ನಾನು ಎಂದಿನಂತೆ ಡಾಕ್ಟರ್ ಪ್ರಿಯಾ ಬಳ್ಳಾಲರ ವೈದ್ಯಕೀಯ ಸಲಹೆಯನ್ನು ಪಡೆದುಕೊಂಡು ಮುಂದುವರೆದು ಮೂರು ತಿಂಗಳ ಹಿಂದೆ ಮರಳಿರುತ್ತೇನೆ. ಊರಿಗೆ ಮರಳಿದ ಬಳಿಕ ನಾನು ಡಾಕ್ಟರ್ ಪ್ರಿಯಾ ಬಳ್ಳಾರ್‌ರವರನ್ನು ಆಗಾಗ ಭೇಟಿಯಾಗಿ ಅವರ ವೈದ್ಯಕೀಯ ಸಲಹೆಯಂತೆ ನಡೆದುಕೊಳ್ಳುತ್ತಿದ್ದೆ.

4. ಕಳೆದ ದಿನಾಂಕ 17-05-2021 ರಂದು ನನಗೆ ಸ್ವಲ್ಪ ಶೀತ ಮತ್ತು ಜ್ವರ ಉಂಟಾದ ಹಾಗೆ ಅನುಭವವಾಯಿತು. ಹಾಗಾಗಿ ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರಿಗೆ ಫೋನ್ ಮಾಡಿ ನನ್ನ ಆರೋಗ್ಯದ ಬದಲಾವಣೆ ಬಗ್ಗೆ ತಿಳಿಸಿದ್ದು, ಅದಕ್ಕೆ ಉತ್ತರವಾಗಿ ಸದರಿ ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರು ಮನೆಯಲ್ಲೇ ಇದ್ದು ಶೀತ ಮತ್ತು ಜ್ವರಕ್ಕೆ ಸಂಬಂದಪಟ್ಟ ಮಾತ್ರೆಯನ್ನು ತೆಗೆದುಕೊಂಡು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಸದರಿ ಶೀತವು ನನಗೆ ಕಡಿಮೆಯಾಗದಿದ್ದ ಕಾರಣ ಮತ್ತು ಮೈ ಕಯ್ಯಲ್ಲಿ ಸ್ವಲ್ಪ ನೋವುಗಳಿದ್ದ ಕಾರಣ ಪ್ರಿಯಾ ಬಳ್ಳಾಲ್ ರವರನ್ನು ಸಂಪರ್ಕಿಸಿದಾಗ ಒಮ್ಮೆ ಕೋಡ್ ಟೆಸ್ಟ್ ಮಾಡಿಸಿ ಬನ್ನಿ ಎಂದು ಸಲಹೆ ನೀಡಿದ್ದರು. ಹೀಗಾಗಿ ದಿನಾಂಕ 19-05-2021 ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಹೋಗಿ ಕೋವಿಡ್ ಕಾಯಿಲೆಗೆ ಪರೀಕ್ಷೆ ಮಾಡಿಸಿಕೊಂಡನು. ಸದರಿ ಆಸ್ಪತ್ರೆಯಿಂದ ಸಂಜೆಯ ಹೊತ್ತಿಗೆ ಪರೀಕ್ಷಾ ವರದಿಯನ್ನು ನನ್ನ ಚಿಕ್ಕಪ್ಪರಾದ ಸಂಶೀರ್ ಅಲಿಯವರು ಪಡೆದುಕೊಂಡು ಬಂದಿದ್ದರು. ಸದರಿ ವರದಿಯಲ್ಲಿ ನನಗೆ ಕೋವಿಡ್ ಪಾಸಿಟಿವ್ ಎಂಬ ವರದಿ ಬಂದಿದ್ದರೂ ನಾನು ಭಯಪಡುತ್ತೇನೆ ಎಂಬ ಕಾರಣದಿಂದ ನನ್ನಿಂದ ಮುಚ್ಚಿಟ್ಟಿದ್ದರು. ನನಗೆ ಕೋವಿಡ್ ಕಾಯಿಲೆ ಇರುವ ವಿಚಾರ ಮರುದಿವಸ ತಿಳಿದು ಬಂತು. ಸದರಿ ದಿನ ದಿನಾಂಕ 19-05 2021 ರಂದು ರಾತ್ರಿ ಹೊತ್ತಿಗೆ ನನಗೆ ಹೊಟ್ಟೆ ಮತ್ತು ಬೆನ್ನಿನ ಭಾಗಗಳಲ್ಲಿ ತೀವ್ರ ನೋವಿನ ಅನುಭವವಾಗಿತ್ತು. ಸದರಿ ಸಮಯ ನನಗೆ 8 ತಿಂಗಳು ಪೂರ್ಣವಾಗಿತ್ತು. ಸದರಿ ನನ್ನ ಕೋವಿಡ್ ವರದಿ ಬಂದ ಬಳಿಕ ಸದರಿ ದಿನ ನನ್ನ ಚಿಕ್ಕಪ್ಪ ಮತ್ತು ಮನೆಯವರು ಡಾಕ್ಟರ್ ಪ್ರಿಯಾ ಬಳ್ಳಾಲ್ ಇವರಿಗೆ ಸದರಿ ವರದಿಯ ವಿಚಾರವಾಗಿ ತಿಳಿಸಿದ್ದರು. ಆದರೆ ಸದರಿ ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರು ಯಾವುದೇ ಆತಂಕಪಡುವುದು ಬೇಡವೆಂದೂ ಮನೆಯಲ್ಲಿಯೇ ಇರು ಎಂದು ತಿಳಿಸಿದ್ದರು. ಸದರಿ ರಾತ್ರಿ ನೋವು ತೀವ್ರವಾದಾಗ ನನ್ನ ಮನೆಯವರು, ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರನ್ನು ಸಂಪರ್ಕಿಸಿ ಏನಾದರೂ ಚಿಕಿತ್ಸೆಗಾಗಿ ಕರೆದುಕೊಂಡು ಬರಬೇಕೇ ಎಂದು ಕೇಳಿದಾಗ ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರು ನಾನು ಕೊರೋನ ಗುಣಮುಖರಾಗದೇ ಚಿಕಿಸ್ತೆ ನೀಡಲಾಗುವುದಿಲ್ಲವೆಂದು ನನ್ನ  ಕುಟುಂಬದವರಲ್ಲಿ ತಿಳಿಸಿದ್ದರು. ಹೀಗಾಗಿ ನನಗೆ ನೋವಿನ ತೀವ್ರತೆ ಜಾಸ್ತಿ ಇದ್ದ ಕಾರಣ ನಾನು ಮತ್ತು ನನ್ನ ಕುಟುಂಬಸ್ತರು ಮಂಗಳೂರಿನ ಸಿಟಿ ಆಸ್ಪತ್ರೆಗೆ ರಾತ್ರಿ 10-30 ರಿಂದ 11 ಗಂಟೆ ಹೊತ್ತಿಗೆ ಹೋಗಿದ್ದನು. ಸದರಿ ಆಸ್ಪತ್ರೆಯಲ್ಲಿ ಡಾಕ್ಟರ್ ವೀಣಾ ಭಟ್ ಎಂಬವರು ನನ್ನನ್ನು ಪರೀಕ್ಷಿಸಿ ನನ್ನ ದೇಹ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚನೆ ನೀಡಿದ್ದರು. ನಾನು ಹಿಂದೆ ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರಲ್ಲಿ ಪಡೆದುಕೊಳ್ಳುತ್ತಿದ್ದ ವೈದ್ಯಕೀಯ ಚಿಕಿತ್ಸಾ ಚೀಟಿಗಳನ್ನು ಪರೀಕ್ಷಿಸಿದ ಡಾಕ್ಟರ್ ವೀಣಾರವರು ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರಲ್ಲಿ ಫೋನ್ ಮುಖಾಂತರ ಮಾತನಾಡಿದರು. ಸದರಿಯವರಲ್ಲಿ ಮಾತನಾಡಿದ ಬಳಿಕ ಸದರಿ ವೀಣಾ ಭಟ್‌ರವರು ತಾನು ನೀಡಿದ ಸಲಹೆಯನ್ನು ಬದಲಾಯಿಸಿ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುವಂತೆ ಹೇಳಿ ಕಳುಹಿಸಿದರು.

5, ದಿನಾಂಕ: 20-05-2021 ರಂದು ಮಧ್ಯಾಹ್ನದ ಹೊತ್ತಿಗೆ ನನಗೆ ಹೊಟ್ಟೆಯ ಭಾಗದಲ್ಲಿ ನೋವು ಉಂಟಾದ ಕಾರಣ ಮತ್ತೊಮ್ಮೆ ಡಾಕ್ಟರ್ ಪ್ರಿಯಾ ಬಳ್ಳಾಲ್ ಇವರನ್ನು ಸಂಪರ್ಕಿಸಿ ಚಿಕಿತ್ಸೆಗಾಗಿ ಬರಬಹುದೇ ಎಂದು ಕೇಳಿಕೊಂಡವು. ಆದರೆ ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರು ಬರುವುದು ಬೇಡ ಎಂದು ತಿಳಿಸಿದರು. ಆದರೆ ನನಗೆ ಹೊಟ್ಟೆಯಲ್ಲಿ ಉಂಟಾಗುವ ನೋವು ಏನು ಎಂಬುದನ್ನು ಪರೀಕ್ಷಿಸಿಕೊಳ್ಳುವ ಉದ್ದೇಶದಿಂದ ನಾನು ಮತ್ತು ನನ್ನ ಚಿಕ್ಕಪ್ಪ ಐಲ್ಯಾಂಡ್ ಆಸ್ಪತ್ರೆ ಫಲ್ನೀರ್ ಇಲ್ಲಿಗೆ ದಿನಾಂಕ 20-05-2021 ರಂದು 3 ಗಂಟೆಗೆ ಹೋಗಿದ್ದೆವು. ನನಗೆ ಹೊಟ್ಟೆಯ ನೋವಿನ ಹೊರತಾಗಿ ಉಳಿದಂತೆ ಸಮಸ್ಯೆಗಳೂ ಉಂಟಾಗಿರಲಿಲ್ಲ. ಸದರಿ ಆಸ್ಪತ್ರೆಯಲ್ಲಿ ನನ್ನನ್ನು ಕ್ಯಾಶುವಾಲಿಟಿಯಲ್ಲಿ ಪರೀಕ್ಷಿಸಿ ನನ್ನ ದೇಹ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ನನಗೆ ಆಕ್ಸಿಜನ್ ಅನ್ನು ಇಟ್ಟು ಬಳಿಕ ಸದರಿ ನನ್ನ ವೈದ್ಯಕೀಯ ಪತ್ರದಲ್ಲಿದ್ದ ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರ ಹೆಸರನ್ನು ನೋಡಿ ಅವರಿಗೆ ಫೋನ್ ಮುಖಾಂತರ ಸಂಪರ್ಕಿಸಿದರು. ಬಳಿಕ ಏನೋ ಒಂದು ಕಾರಣವನ್ನು ಹೇಳಿ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿ ಕಳುಹಿಸಿದರು. ಸದರಿ ಆಸ್ಪತ್ರೆಯಲ್ಲಿ ನನ್ನ ದೇಹ ಸ್ಥಿತಿ ಗಂಭೀರ ಇದೆ. ಎಂದು ಹೇಳಿದ್ದ ಕಾರಣ ನನ್ನನ್ನು ಆಂಬುಲೆನ್ಸ್‌ನಲ್ಲಿ ತೀವ್ರ ನಿಗಾದಲ್ಲಿಟ್ಟು ಸಂಜೆ ಸುಮಾರು 4 ಗಂಟೆ 40 ನಿಮಿಷಕ್ಕೆ ಅತ್ತಾವರದ ಕೆ.ಎಂ. ಸಿ ಆಸ್ಪತ್ರೆಗೆ ನನ್ನ 4 ಕುಟುಂಬದವರು ಕರೆದುಕೊಂಡು ಬಂದರು, ಸದರಿ ಆಸ್ಪತ್ರೆಯಲ್ಲಿ 2 ಗಂಟೆಗಳ ಕಾಲ ಕ್ಯಾಶುವಾಲಿಟಿ ಕೇಂದ್ರದಲ್ಲಿಟ್ಟಿದ್ದರು. ಅಲ್ಲಿದ್ದ ವೈದ್ಯರು ನನ್ನ ವೈದ್ಯಕೀಯ ದಾಖಲೆಗಳ ಆಧಾರದಲ್ಲಿ ಡಾಕ್ಟರ್' ಪ್ರಿಯಾ ಬಳ್ಳಾಲ್ ಇವರನ್ನು ಸಂಪರ್ಕಿಸಿದ್ದರು. ಅವರನ್ನು ಸಂಪರ್ಕಿಸಿದ ಬಳಿಕ ಸದರಿ  ಕ್ಯಾಶುವಾಲಿಟಿಯಲ್ಲಿನ ಡಾಕ್ಟರ್‌ರವರು ನನ್ನ ಸ್ಥಿತಿ ಗಂಭೀರವಿದೆ' ಎಂದೂ ಆದರೆ ಸದರಿ ಆಸ್ಪತ್ರೆಯಲ್ಲಿ ನನ್ನನ್ನು ಚಿಕಿತ್ಸೆ ಮಾಡಲು ವ್ಯವಸ್ಥೆ
ಇಲ್ಲವೆಂದೂ ಬೇರೆ ಎಲ್ಲಾದರೂ ಕರೆದುಕೊಂಡು ಹೋಗಿ ಎಂದು ತಿಳಿಸಿದರು. ಇದನ್ನು ಕೇಳಿದ ನಮ್ಮ ಕುಟುಂಬಸ್ಥರು ಗಾಭರಿಗೊಂಡು ಕಂಗಾಲಾದರು. ನನ್ನನ್ನು ಆಂಬುಲೆನ್ಸ್‌ನಲ್ಲಿ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಗೆ ಸದರಿ ದಿನಾಂಕದಂದು ಸಂಜೆ 7:43 ಗೆ ಕರೆದುಕೊಂಡು ಬಂದರು. ಸದರಿ ಆಸ್ಪತ್ರೆಯಲ್ಲಿ ಇಬ್ಬರು ಯುವ ವೈದ್ಯರು ನನ್ನನ್ನು ಪರೀಕ್ಷಿಸಿ ನನಗೆ ಸಿಝೇರಿಯನ್ ಮಾಡುವಂತಹ ಅವಶ್ಯಕತೆ ಇದೆ ಎಂದೂ ಆ ಬಗ್ಗೆ ಅಲ್ಲಿಯೇ ಇರುವ ಕಿರಿಯ ವೈದ್ಯರಾದ ಡಾಕ್ಟರ್‌ ವಿಜಯ್‌ರವರನ್ನು ತೋರಿಸಿ ಅವರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದರು. ನನ್ನ ಕುಟುಂಬದವರು ಸದರಿ ಡಾಕ್ಟರ್ ವಿಜಯ್‌ರವರನ್ನು ಭೇಟಿ ಮಾಡಿ ನನ್ನ ಹಿಂದಿನ ವೈದ್ಯಕೀಯ ದಾಖಲೆ ಪತ್ರಗಳನ್ನು ಹಾಜರುಪಡಿಸಿ ನನಗೆ ಚಿಕಿತ್ಸೆ ನೀಡುವಂತೆ ವಿನಂತಿಸಿಕೊಂಡರು. ಸದರಿಯವರು ಡಾಕ್ಟರ್ ಪ್ರಿಯಾ ಬಳ್ಳಾಲ್ ಇವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಮಾತುಕತೆ ನಡೆಸಿದರು. ಬಳಿಕ ನನ್ನ ಚಿಕ್ಕಪ್ಪ ಸಂಶೀರ್ ಆಲಿ ಮತ್ತು ಇತರ ಕುಟುಂಬದವರನ್ನು ಕರೆದು ಇಲ್ಲಿ ಯಾವುದೇ ಇವಳ ಸ್ಥಿತಿ ಗಂಭೀರವಾಗಿದೆ. ಏನು ಮಾಡುತ್ತೀರ್.? ಸರಕಾರಿ ಆಸ್ಪತ್ರೆ ಅಂದರೆ ನಿಮಗೆ ಗೊತ್ತಲ್ಲಾ, ಏನು ಮಾಡುತ್ತಿಲ್ಲ. ಇಲ್ಲಿ ಯಾವುದೇ ವೆಂಟಿಲೇಟರ್‌ ಇಲ್ಲಿ ಏನು ಮಾಡುತ್ತೀರಿ? ಇಲ್ಲಿ ಯಾವುದೇ ಮೆಡಿಸಿನ್‌ಗಳೂ ಇಲ್ಲಿ ಏನು ಮಾಡುತ್ತೀರಿ?

ಇಲ್ಲಿ ಯಾವುದೇ ಸವಲತ್ತುಗಳೂ ಇಲ್ಲಿ ಏನು ಮಾಡುತ್ತೀರಿ? ನೀವು ಬೇರೆ ಕಡೆ ಕೊಂಡು ಹೋಗುವುದು ಒಳ್ಳೆಯದಲ್ಲವೇ?” ಎಂದು ನಮ್ಮ ಕುಟುಂಬದವರನ್ನೇ ಪ್ರಶ್ನಿಸತೊಡಗಿದ್ದರು. ಸದರಿ ಆಸ್ಪತ್ರೆಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಇದ್ದೆವು. ಬಳಿಕ ಅಲ್ಲಿಂದ ಆಂಬುಲೆನ್ಸ್ ನಲ್ಲಿ ಅಥೆನಾ ಆಸ್ಪತ್ರೆಗೆ ಕರೆದುಕೊಂಡು ಬಂದರು. ನನ್ನನ್ನು ಆಂಬುಲೆನ್ಸ್ ನಲ್ಲೇ ಇಟ್ಟು ನನ್ನ ಕುಟುಂಬದವರು ಅಥೆನಾ ಆಸ್ಪತ್ರೆಯ  ಕ್ಯಾಶುವಾಲಿಟಿಯಲ್ಲಿರುವ ವೈದ್ಯರಿಗೆ ನನ್ನ ವೈದ್ಯಕೀಯ ಪತ್ರಗಳನ್ನು ತೋರಿಸಿ ನನ್ನನ್ನು 
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಕೋರಿಕೋಡರು. ಸದರಿ ಆಸ್ಪತ್ರೆಯಲ್ಲಿ ಡಾಕ್ಟರ್ ಪ್ರಿಯಾ ಬಳ್ಳಾಲ್ ರವರಲ್ಲಿ ಮಾತನಾಡಿದ ಬಳಿಕ ನನ್ನನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲು ಯಾವುದೇ ಸವಲತ್ತುಗಳು ಇಲ್ಲ ಎಂದು ಕಾರಣ ನೀಡಿ ಬೇರೆ ಆಸ್ಪತ್ರೆಗೆ ಕೊಂಡುಹೋಗುವಂತೆ ಸಲಹೆ ನೀಡಿ ಕಳುಹಿಸಿಕೊಟ್ಟರು. ಸದರಿ ಅಥೇನಾ ಆಸ್ಪತ್ರೆಯಲ್ಲಿ ಅರ್ಧ ಗಂಟೆಗಳ ಕಾಲ ಇದ್ದೆವು. ಅಲ್ಲಿಂದ ನೇರವಾಗಿ ನನ್ನನ್ನು ಮಂಗಳೂರಿನ ಮಂಗಳಾ ಆಸ್ಪತ್ರೆಗೆ ಕರೆದುಕೊಡು ಬಂದಿದ್ದು ಆಗ ಸುಮಾರು ರಾತ್ರಿ 9 ಗಂಟೆ ಆಗಿದ್ದಿರಬಹುದು. ಸದರಿ ಆಸ್ಪತ್ರೆಯಲ್ಲಿ ಡಾಕ್ಟರ್ ಜಯಪ್ರಕಾಶ್ ಎಂಬವರು ನನ್ನನ್ನು ಪರೀಕ್ಷಿಸಿದ್ದರು. ಕೂಡಲೇ ಅವರು ಕೆಲವು ಔಷಧಿಗಳನ್ನು ಬರೆದುಕೊಟ್ಟು ನಮ್ಮ ಕುಟುಂಬಸ್ಥರ ಮೂಲಕ ಖರೀದಿಸಿ ನನಗೆ ಯಾವುದೋ ಇಂಜಕ್ಷನ್ ಅನ್ನು ಕೊಟ್ಟರು. ಅದೇ ಹೊತ್ತಿಗೆ ಡಾಕ್ಟರ್ ಪ್ರಿಯಾ ಬಳ್ಳಾಲ್ ಇವರಿಗೆ ಸದರಿ, ಡಕ್ಟರ್ ಜಯಪ್ರಕಾಶ್‌ರವರು ಮೊಬೈಲ್ ಮೂಲಕ ಮಾತುಕತೆ ನಡೆಸಿದರು. ಸದರಿಯವರು ಇಂಜಕ್ಷನ್ ಕೊಡುವ ತನಕ ನನಗೆ ಸಾಧಾರಣ ಹೊಟ್ಟೆ ನೋವಿನ ಹೊತರಾಗಿ ಉಳಿದಂತೆ ಆರಾಮ್ವಾಗಿದ್ದೆ. ಆದರೆ ಇಂಜಕ್ಷನ್ ಕೊಟ್ಟ ಬಳಿಕ ಸ್ಥಿತಿ ಗಂಭೀರವಾಗಿ ನೋವು ಸಹಿಸಿಕೊಳ್ಳಲಾಗದೇ ಹೊರಳಾಡಿದೆ. ಇದನ್ನು ಗಮನಿಸಿದ ನಮ್ಮ ಕುಟುಂಬಸ್ಥರು ತೀರಾ ಆತಂಕಕ್ಕೀಡಾದರು. ಡಾಕ್ಟರ್ 
ಜಯಪ್ರಕಾಶ್‌ರವರು ನನ್ನ ಕುಟುಂಬಸ್ಥರನ್ನು ಕರೆದು "ಇವರ ಹೊಟ್ಟೆಯಲ್ಲಿದ್ದ ಮಗು ಸತ್ತಿದೆ ಇವರು ಕೂಡ ಇನ್ನು ಅರ್ಧ ಗಂಟೆಯಲ್ಲಿ ಸಾಯುತ್ತಾಳೆ ನಿಮ್ಮ ಕುಟುಂಬದವರು ಯಾರಾದರೂ ಇದ್ದರೆ ಕರೆಯಿರಿ, ಇನ್ನು ಹೆಚ್ಚು ಬದುಕುವುದಿಲ್ಲ" ಎಂದು ಹೇಳಿದರು. ಇದರಿಂದ ಗಾಭರಿಗೊಂಡು ನನ್ನ ಕುಟುಂಬದವರು ಎಲ್ಲರನ್ನೂ ಆಸ್ಪತ್ರೆಗೆ ಕರೆಯಿಸಿಕೊಂಡರು. ಅವರೆಲ್ಲರೂ ಕೂಡ ಸದರಿ ಡಾಕ್ಟರ್ ಜಯಪ್ರಕಾಶ್ ಹೇಳಿದಂತೆ ನನ್ನ ಜೀವನದ ಕೊನೆಯ ಕ್ಷಣ ಎಂದು ತೀರ್ಮಾನಕ್ಕೆ ಬಂದು ದೇವರಲ್ಲಿ ಪ್ರಾರ್ಥಿಸತೊಡಗಿದರು. ಈ ಸಂದರ್ಭದಲ್ಲಿ ನಮ್ಮ ಕುಟುಂಬಸ್ಥರೊಬ್ಬರು ಅವರಿಗೆ ಪರಿಚಿತವಾಗಿರುವ ಮತ್ತು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಹಾಗೂ ಸಂಘಟನೆಗಳಲ್ಲೂ ಗುರುತಿಸಿಕೊಡಿರುವ ಚೊಕ್ಕಬೆಟ್ಟಿನ ಮೊಹಮ್ಮದ್ ಆಸಿಫ್ ಎಂಬವರಿಗೆ ಫೋನ್ ಮಾಡಿ ವಿಚಾರ ತಿಳಿಸಿ ಯಾವುದಾದದರೂ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ವ್ಯವಸ್ಥೆಗೊಳಿಸಭುದೇ ಎಂದು ಬೇಡಿಕೊಂದರು. ಸದರಿ ಮೊಹಮ್ಮದ್ ಅಸಿಫ್ ರವರು ಕೂಡಲೇ ಸ್ಪಂದಿಸಿ ವೆನ್‌ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯವರನ್ನು ಸಂಪರ್ಕಿಸಿ ಆಸ್ಪತ್ರೆಗೆ ಓಡಿ ಬ೦ದರು. ಸದರಿ ವೆನ್ ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯಾದಂತಹ ಕಿಶೋರ್ ಕುಮಾರ್ ರವರು ಲೇಡಿಘೋಶನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆಗೊಳಿಸಿ ಡಾಕ್ಟರ್‌ ಜಯಪ್ರಕಾರ್‌ರವರಿಗೆ ಕೂಡಲೇ ನನ್ನನ್ನು ಲೇಡಿಪೋಶನ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸ್ವತಹ ಫೋನ್ ಮಾಡಿ ತಿಳಿಸಿದರು. ಸದರಿ ಮೊಹಮ್ಮದ್ ಆಸಿಫ್‌ರವರ ಮತ್ತು ಡಿ ಎಚ್ ಓ ರವರ ಸಹಕಾರದಿಂದ ನನ್ನನ್ನು ಅದೇ ದಿನ ಮಧ್ಯ ರಾತ್ರಿ ಅಂದರೆ ಸುಮಾರು 12:45 ರ ಹೊತ್ತಿಗೆ ಲೇಡಿಗೋಷನ್ ಆಸ್ಪತ್ರೆಗೆ ತಂದು ದಾಖಲು ಮಾಡಿದರು. ಇದು ನನ್ನನ್ನು ಕರೆದುಕೊಂಡು ಬಂದ ಸಮಯ ಡಕ್ಟರ್ ಜಯಪ್ರಕಾಶ್‌ರವರು ಬಂದಿದ್ದರು. ಸದರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರುಗಳಿಬರು...ಬಹಳ ಮುತುವರ್ಜಿ ವಹಿಸಿ ಶಸ್ತ್ರಚಿಕಿತ್ಸೆ ಯ  ಮೂಲಕ ಹೆರಿಗೆ ಮಾಡಿಸಿದರು. ಅವರ ಹೆಸರುಗಳು ಡಾಕ್ಟರ್ ಶರಣ್ ಮತ್ತು ಡಾಕ್ಟ್ ಶ್ರದ್ಧಾ ಎಂದು ನನ ನೆನಪು, ಸದರಿ ಆಸ್ಪತ್ರೆಯಲ್ಲಿ ನನಗೆ ಹೆಣ್ಣು ಮಗು ಜನಿಸಿತು. ನನಗೆ ಕೋವಿಡ್ ಖಾಯಿಲೆ ಇದ್ದುದರಿಂದ ನನ್ನ ಹೆರಿಗೆಯ ಬಳಿಕ ಮಧ್ಯರಾತ್ರಿ ಸುಮಾರು 2-3 ಗಂಟೆ ಹೊತ್ತಿಗೆ ನನ್ನನ್ನು ವೆನ್‌ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಿದರು.

6. ನಾನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯ ದಿನಾಂಕ 21-05 2021 ರಂದು ಬೆಳಿಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಯಾರೋ ಒಬ್ಬ ಡಾಕ್ಟರ್ ನನ್ನಲ್ಲಿಗೆ ಬಂದು ನನ್ನ ಮುಖಕ್ಕೆ ಹಾಕಿದ್ದ ಆಕ್ಸಿಜನ್‌ನ ಮಾಸ್ಟನ್ನು ತೆಗೆದುಹಾಕಿ ನನ್ನನ್ನು ಉದ್ದೇಶಿಸಿ “ನೀನು ಇಲ್ಲಿದ್ದೀಯಾ ನೀನು ಎಲ್ಲೆಲ್ಲಿ ಸುತ್ತಾಡುಕೊಂಡು ಇಲ್ಲಿಗೆ ಬಂದಿದ್ದೀಯಲ್ವಾ ನೀನು ಹೆಚ್ಚು ಸಮಯ ಬದುಕುವುದಿಲ್ಲ, ನೀನು ಮೂರೇ ದಿವಸ ಬದುಕುವುದು ಎಂದು ನನಗೆ ಬೆದರಿಸಿ ಹೇಳಿ ಬಳಿಕ ಅಲ್ಲಿದ್ದ ದಾದಿಯರಿಗೆ ನೋಡಿ ಇವರು ಎಲ್ಲೆಲ್ಲಿಂದ ಸುತ್ತಾಡಿಕೊಂಡು ಬಂದಿದ್ದಾರೆ ಎಂದು ಹೇಳುತ್ತಾ ಅವರಲ್ಲಿ ಮಾತನಾಡುತ್ತಾ ಹೋದರು. ಇದರಿಂದ ನಾನು ಭಯಭೀತಿಗೊಂಡು ಅಲ್ಲಿಯ ಎಮ್ ವೈ ಸಿ ಅವರಲ್ಲಿ ಇದ್ದ 9019916146 ನ ಮುಖಾಂತರ ನನ್ನ ಸೋದರ ಸಂಬಂದಿ ಶಿಯಾಬ್  ಇವರ 9620417622 ವೀಡಿಯೋ ಕಾಲ್ ಮಾಡಿ ನನ್ನನ್ನು ಸದ್ರಿ ಆಸ್ಪತ್ರೆಯಿಂದ ಹೊರತೆಗೆಯುವಂತೆ ಮತ್ತು ಅಲ್ಲಿ ನನ್ನನ್ನು ಕೊಲ್ಲಲು ಏನೋ ಉಪಾಯ ಮಾಡಿರುವುದೆಂದು ತಿಳಿಸಿದೆ. ಸದರಿ ವಿಚಾರವನ್ನು ತಿಳಿದು ನನ್ನ ಸಂಬಂದಿಕರೆಲ್ಲಾ ಆಸ್ಪತ್ರೆಗೆ ಬಂದು ಯಾರು ಬಂದಿದ್ದು ಎಂದು ವಿಚಾರಿಸಿದಾಗ ಡಾಕ್ಟರ್ ಮುರಳೀಧರ್ ಎಂಬ ಹೆಸರಿನ ವೈದ್ಯರು ಆ ಸಮಯ ಒಂದು ಹೋಗಿದ್ದರು ಎಂದು ವಿಚಾರ ತಿಳಿಯಿತು. ನಮ್ಮ ಕುಟುಂಬದವರಿಗೆ ಕೂಡಾ ಈ ಬಗ್ಗೆ ಭಯವುಂಟಾಗಿ ಕೂಡಲೇ ನನ್ನನ್ನು ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಡಾಕ್ಟರ್ ಶಿಯಾಬ್ ಎಂಬವರ ಜೊತೆ ಮಾತನಾಡಿ ಅವರ ಸಲಹೆಯ ಮೇರೆಗೆ ಅಥೇನಾ ಆಸ್ಪತ್ರೆಗೆ ಕೊಂಡು ಹೋದರು. ಸದರಿ ಆಸ್ಪತ್ರೆಯಲ್ಲಿ ದಿನಾಂಕ 21-05-2021 ರಂದು ಸುಮಾರು 2 ಗಂಟೆಯ ಹೊತ್ತಿಗೆ ನನ್ನನ್ನು  ಒಳರೋಗಿಯಾಗಿ ದಾಖಲಿಸಿದರು. ಈ ಸಂದರ್ಭ ನಾನು ರೂಮ್ ನಂಬ್ರ 501 ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಸದರಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಭಯಭೀತರಾಗಿದ್ದ ನನ್ನ ಕುಟುಂಬಸ್ಥರೆಲ್ಲರೂ ಆಸ್ಪತ್ರೆಯ ಹೊರಾಂಗಣದಲ್ಲಿ ಗುಂಪುಗೂಡಿದ್ದರು. ಈ ಸಂದರ್ಭ ಮಂಗಳಾ ಆಸ್ಪತ್ರೆಯ ಡಾಕ್ಟರ್ ಜಯಪ್ರಕಾಶ್‌ರವರು ನಾನು ಚಿಕಿತ್ಸೆ ಪಡೆಯುತ್ತಿದ್ದ ರೂಮ್ ಹತ್ತಿರ ಬಂದಿದ್ದರು. ಇದನ್ನು ನೋಡಿದ ನನ್ನ ಕುಟುಂಬದವರು ಭಯಪಟ್ಟು ನನ್ನ ಕುಟುಂಬದವರು ಸದರಿಯವರು ಅಲ್ಲಿ ಬಂದಂತಹ ಕಾರಣವನ್ನು ಕೇಳಿ ಪ್ರಶ್ನಿಸಿದರು. ಆಗ ಸದರಿ ಜಯಪ್ರಕಾಶ್‌ರವರು ನಮ್ಮ ಕುಟುಂಬಸ್ಥರಿಂದ ತಪ್ಪಿಸಿಕೊಂಡು ಕಟ್ಟಡದ ಕೆಳಭಾಗಕ್ಕೆ ಹೋದರು. ಇದೇ ಸಂದರ್ಭದಲ್ಲಿ ಕಟ್ಟಡದ ಕೆಳಭಾಗದಲ್ಲಿ ಬರುತ್ತಿದ್ದ ವ್ಯಕ್ತಿಯ ಫೋಟೋ ಮತ್ತು ವೀಡಿಯೋವನ್ನು ನನ್ನ ಚಿಕ್ಕಪ್ಪ ಸಂಶೀರ್‌ರವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ತಂದು ತೋರಿಸಿದರು. ಸದರಿ ಫೋಟೋದಲ್ಲಿದ್ದ ವ್ಯಕ್ತಿಯೇ ವೆನ್ಸಾಕ್ ಆಸ್ಪತ್ರೆಯಲ್ಲಿ ಬೆದರಿಕೆಯೊಡ್ಡಿ ಹೋದ ವ್ಯಕ್ತಿಯೆಂದು ನಾನು ಗುರುತಿಸಿದೆ. ಹೀಗಾಗಿ ಅವರೆಲ್ಲರು ಸದರಿ ಜಯಪ್ರಕಾಶ್ ಮತ್ತು ರತ್ನಾಕರ್ ಇವರನ್ನು ಪ್ರಶ್ನಿಸಲು ಹೊರಹೋದರು. ಸದರಿ ಆಸ್ಪತ್ರೆಯ ಆವರಣದಲ್ಲಿ ಸದರಿ ಜಯಪ್ರಕಾಶ್ ಮತ್ತು ಡಾಕ್ಟರ್ ಮುರಳಿದರೆ ಇವರನ್ನು ನನ್ನ ಕುಟುಂಬದವರೆಲ್ಲರೂ ಸೇರಿ ನಿಲ್ಲಿಸಿ ಪ್ರಶ್ನಿಸಿದರು. ಡಾಕ್ಟರ್ ಮುರಳಿಧರ್ ಇವರು ಅವರನ್ನು ಪ್ರಶ್ನಿಸುವ ಸಮಯದಲ್ಲಿ ನನ್ನನ್ನು ಡಾಕ್ಟರ್ ಪ್ರಿಯಾ ಬಳಾಲ್ ರವರು ಬೆದರಿಕೆ ಹಾಕಲು ಕಳುಹಿಸಿಕೊಟ್ಟಿದ್ದಾಗಿ ಒಪ್ಪಿಕೊಂಡರು. ಇದನ್ನು ಖಾತರಿಪಡಿಸಿಕೊಳ್ಳಲಿಕ್ಕಾಗಿ ನಮ್ಮ ಕುಟುಂಬವರು ಸದರಿ ಮುರಳೀಧರ ರವರ ಮೊಬೈಲ್ ಮೂಲಕವೇ ಡಾಕ್ಟರ್ ಪ್ರಿಯಾ ಬಳ್ಳಾಲ್‌ಗೆ ಕರೆ ಮಾಡುವಂತೆ ತಿಳಿಸಿದರು. ಅದೇ ರೀತಿ ಡಾಕ್ಟರ್ ಮುರಳೀಧರ್‌ರವರು ಡಾಕ್ಟರ್ ಪ್ರಿಯಾ ಬಳ್ಳಾಲ್ ಇವರಿಗೆ ಕರೆ ಮಾಡಿ ಓಪನ್ ಸ್ಪೀಕರ್ ಇಟ್ಟು ಎಲ್ಲರಿಗೂ ಕೇಳಿಸುವ ರೀತಿಯಲ್ಲಿ ಮಾತನಾಡಿದರು. ಸದರಿ ಸಮಯ ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರು ಡಾಕ್ಟರ್ ಮುರಳೀಧರ್‌ರವರನ್ನು ವೆಬ್ಲಾಕ್ ಆಸ್ಪತ್ರೆಗೆ ಮತ್ತು ಅಥವಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದನ್ನು ಒಪ್ಪಿಕೊಂಡಿರುತ್ತಾರೆ. ಸದರಿ ಸಮಯ ಘಟನೆಯ ಚಿತ್ರೀಕರಣವನ್ನು ಮೊಬೈಲ್ ಮೂಲಕ ನಮ್ಮ ಸಂಬಂಧಿಕರು ಮಾಡಿರುತ್ತಾರೆ. ಈ ಘಟನೆಗಳಿಂದ ನಮ್ಮ ಕುಟುಂಬಸ್ಥರೆಲ್ಲರೂ ನನ್ನ ರಕ್ಷಣೆಯ ಬಗ್ಗೆ ಆತಂಕಗೊಂಡು ಇದರ ಹಿಂದೆ ಯಾರದೋ ಕೈವಾಡವಿರಬಹುದೆಂದೂ ಅನುಮಾನಗೊಂಡರು. ಹಾಗಾಗಿ ಸದರಿ ನನ್ನ ರಕ್ಷಣೆಗೋಸ್ಕರ ಸದರಿ ಅಥವಾ ಆಸ್ಪತ್ರೆಯಿಂದ ದಿನಾಂಕ: 23-05-2021 ರಂದು ನನ್ನನ್ನು ಬಿಡುಗಡೆಗೊಳಿಸಿ ಯುನಿಟಿ ಆಸ್ಪತ್ರೆಗೆ ದಾಖಲುಗೊಳಿಸಿದರು.

7. ಸದರಿ ಪ್ರಿಯಾ ಬಳ್ಳಾಲ್ ಇವರು ನನ್ನನ್ನು ಚಿಕಿತ್ಸೆ ಮಾಡುವುದಿಲ್ಲ ಎಂದು ಹೇಳಿದ ಮೇಲೆ ನಾವು ಮರಳಿ ಅವರನ್ನು ಸಂಪರ್ಕಿಸಿರುವುದಿಲ್ಲ. ಅಥವಾ ಅವರ ಆಸ್ಪತ್ರೆಗೆ ಬರುವುದಾಗಿಯೂ ಹೇಳಿರುವುದಿಲ್ಲ. ಅವರಲ್ಲಿ ನಮ್ಮ ಸಂಕಷ್ಟ ಕಾಲದಲ್ಲಿ ನಮಗೆ ವೈದ್ಯಕೀಯ ನೆರವು ನೀಡದಿದ್ದಕ್ಕಾಗಿ ಕುಟುಂಬಸ್ಥರೆಲ್ಲರೂ ಬೇಸರಗೊಂಡಿದ್ದರು.

ಮೇಲಿನ ಘಟನೆಯ ಬಳಿಕ ನಾನು ಮತ್ತು ನನ್ನ ಕುಟುಂಬಸ್ಥರು ಈ ರೀತಿಯಾಗಿ ಎಲ್ಲಾ ಆಸ್ಪತ್ರೆಗಳು ಅಲ್ಲಿ ಉತ್ತಮ ಸವಲತ್ತುಗಳು ಇದ್ದರೂ ಕೂಡ ಯಾವ ಕಾರಣಕ್ಕಾಗಿ ನಿರಾಕರಿಸಿರುತ್ತಾರೆ ಎಂಬ ಬಗ್ಗೆ ವಿಚಾರ ವಿಮರ್ಷ ಮಾಡಿಕೊಂಡೆವು. ಆಗ ತಿಳಿದು ಬಂದ ವಿಚಾರವೇನೆಂದರೆ, ನಾವು ಸದರಿ ಡಾಕ್ಟರ್ ಪ್ರಿಯಾ ಬಳ್ಳಾಳರು ನನ್ನನ್ನು ಪರೀಕ್ಷಿಸಲು ನಿರಾಕರಿಸಿದ ಮೇಲೆ ಬೇರೆ ಆಸ್ಪತ್ರೆಗೆ ಹೋಗಿದ್ದೇವೆ ಎಂಬ ವಿಚಾರ ತಿಳಿದುಕೊಂಡಂತಹ ಡಾಕ್ಟರ್ ಪ್ರಿಯಾ ಬಳ್ಳಾಲ್ ರವರು ನನ್ನ ದೊಡ್ಡಪ್ಪನ ಮಗಳಾದ ಬೆಂಗಳೂರಿನಲ್ಲಿರುವ ತಂದೆಲ್ಲಾ ಇವಳಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ನನ್ನ ಕುಟುಂಬಸ್ಥರು ಪ್ರತೀ ಕ್ಷಣದಲ್ಲಿ ಏನೆಲ್ಲಾ ನಡೆಯುತ್ತದೆ ಎಂದೂ ನಾವು ಯಾವ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಸದರಿ ತಂಜೀಲರಿಗೆ ಮತ್ತು ಇತರ ಕುಟುಂಬಸ್ತರಿಗೆ ಹೇಳುತ್ತಿದ್ದರು. ಸದರಿ ಡಾಕ್ಟರ್ ಪ್ರಿಯಾ ಬಳ್ಳಾಲ್ ಇವರು ನಾನು ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಗುತ್ತಿದ್ದ ಸಮಯದ ಕ್ಷಣ ಕ್ಷಣ ದ ಮಾಹಿತಿಯನ್ನೂ ಮತ್ತು ಯಾವ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂಬ ಮಾಹಿತಿಯನ್ನು ತಾವ ಸ್ವತಹ ತಂಜೀಲಳಿಗೆ ಕರೆ ಮಾಡಿ ತಿಳಿದುಕೊಳ್ಳುತ್ತಿದ್ದರು. ಸದರಿ ತಂಜೀಕರು ಡಾಕ್ಟರ್ ಪ್ರಿಯಾ ಬಳ್ಳಾಲ್ ಕುಟುಂಬದ ಡಾಕ್ಟರ್ ಆಗಿದ್ದರಿಂದ ಮುಕ್ತವಾಗಿ ಎಲ್ಲಾ ಮಾಹಿತಿಗಳನ್ನು ನೀಡುತ್ತಿದ್ದರು. ಅದರ ಪೂರ್ವದಲ್ಲಿ ಡಾಕ್ಟರ್ ಪ್ರಿಯಾ ಬಳ್ಳಾರವರು ಯಾವತ್ತೂ ಕೂಡ ಸ್ವತಹ ತಂಜೀಲಳಿಗೆ ಫೋನ್ ಮಾಡಿರಲಿಲ್ಲ. ಆದರೆ ಆ ದಿವಸ ನಿರಂತರವಾಗಿ ಅವಳಲ್ಲಿ ಸಂಪರ್ಕದಲ್ಲಿದ್ದು ಮಾಹಿತಿ ಪಡೆದುಕೊಂಡಿದ್ದರು.
9. ನನಗೆ ಸಮಸ್ಯೆ ಉಂಟಾದಾಗ ಚಿಕಿತ್ಸೆಗಾಗಿ ಹೋಗಿರುವ ಎಲ್ಲಾ ಆಸ್ಪತ್ರೆಗಳು ಆಧುನಿಕ ತಾಂತ್ರಿಕತೆಯನ್ನು, ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳಾಗಿವೆ. ನಾನು ಪ್ರಥಮತಃ ಐಲ್ಯಾಂಡ್, ಕೆ.ಎಂ.ಸಿ, ಅಭಿಸಾ, ಲೇಡಿಕೋಶನ್ ಮತ್ತು ಮಂಗಳಾ ಆಸ್ಪತ್ರೆಗೆ ಹೋಗಿರುವ ಸಂದರ್ಭದಲ್ಲಿ ಹೊಟ್ಟೆನೋವು ಹೊರತಾಗಿ ಉಳಿದಂತೆ ಉಸಿರಾಟ ಮತ್ತು ಇತರ ಯಾವುದೇ ತೊಂದರೆ ಇರಲಿಲ್ಲ. ಮಂಗಳಾ ಆಸ್ಪತ್ರೆಗೆ ಹೋಗಿ ಸದರಿ ಜಯಪ್ರಕಾಶ್‌ರವರು ಯಾವುದೋ ಇಂಜಕ್ಷನ್ ಕೊಟ್ಟ ಬಳಿಕ ನನಗೆ ಸಹಿಸಲಾರದ ನೋವು ಮತ್ತು ಉಸಿರಾಟದ ತೊಂದರೆ ಉಂಟಾಯಿತು. ನನಗೆ ಕೋವಿಡ್ ಬಾಯಿಲೆ ಬಂದಿದ್ದರೂ ಆಸ್ಪತ್ರೆಗಳು ತಿರಸ್ಕರಿಸುವಂತಹ ಗಂಭೀರವಾದ ಖಾಯಿಲೆ ಇದ್ದಿರಲಿಲ್ಲ. ನನ್ನ ಮಗು ಅವಧಿಗೆ ಮುನ್ನ ಜನಿಸಿದ್ದ ಕಾರಣ ಅದನ್ನು ತೀವ್ರ ನಿಘಾ ಘಟಕದಲ್ಲಿ ಲೇಡಿಘೋಷನ್ ಆಸ್ಪತ್ರೆಯಲ್ಲಿ ಇಡಲಾಗಿದೆ ಆದರೆ ಮಗು ಆರೋಗ್ಯವಾಗಿದೆ. ನಾನು ದಿನಾಂಕ 28-05-2021 ರಂದು ಸಂಪೂರ್ಣ ಗುಣಮುಖಳಾಗಿ ಯುನಿಟಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವನು. ಮತ್ತು ಈಗ ಆರೋಗ್ಯದಿಂದಿರುವೆನು.

10. ಎಲ್ಲಾ ಆಸ್ಪತ್ರೆಗಳು ಅದರಲ್ಲಿ ನುರಿತ ವೈದ್ಯರಿದ್ದರೂ ನನಗೆ ಚಿಕಿತ್ಸೆ ನೀಡಲು ನಿರಾಕರಿಸಿರುತ್ತಾರೆ. ಆದರೆ ದಿನಾಂಕ 21-05-2021 ರ ಮುಂಜಾವು 12-45 ಕ್ಕೆ ನನಗೆ ಕೋಪಿಡ್ ಇದ್ದರೂ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ ವೈದ್ಯರುಗಳಿಬ್ಬರೂ ಕೂಡ ಬಹಳ ಕಿರಿಯ ವಯಸ್ಸಿನ ಯುವ ವೈದ್ಯರುಗಳಾಗಿರುತ್ತಾರೆ. ಅಲ್ಲದೇ ಸರಕಾರಿ ಆಸ್ಪತ್ರೆಯಾಗಿರುತ್ತದೆ. ಮೇಲಿನ ಎಲ್ಲಾ ಆಸ್ಪತ್ರೆಗಳು ಕಾರ್ಪೊರೇಟರ್ ಸೆಕ್ಟರ್‌ಗೆ ಚಿಕಿತ್ಸೆ ನೀಡಲು ಗುರಸಿರುವಂತಹ ಮತ್ತು ದೇಶದ ಇತರ ಆಸ್ಪತ್ರೆಗೆ ಸ್ಪರ್ಧೆಯನ್ನು ನೀಡಬಲ್ಲ ಉನ್ನತ ತಾಂತ್ರಿಕತೆಯನ್ನು ಹೊಂದಿರುವ, ಪ್ರಸಿದ್ಧ ವೈದ್ಯರುಗಳನ್ನು ಹೊಂದಿರುವ ಹೊರ ಜಿಲ್ಲೆ ಹೊರ ರಾಜ್ಯಗಳಿಂದಲೂ ಕ್ಲಿಷ್ಟಕರ ಚಿಕಿತ್ಸೆಗಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ಚಿಕಿತ್ಸಾ ಕೇಂದ್ರಗಳಾಗಿವೆ.
11. ಹೀಗಿದ್ದರೂ ಕೇವಲ ಕೋವಿಡ್ ಕಾಯಿಲೆ ಹೊಂದಿರುವ ನನಗೆ ಸದರಿ ಆಸ್ಪತ್ರೆಗಳು ಉದ್ದೇಶಪೋರಕವಾಗಿ ಚಿಕಿತ್ಸೆಯನ್ನು ನೀಡಲು ತಿರಸ್ಕರಿಸಿವೆ. ನನಗೆ ಈಗ ತಿಳಿದು ಬಂದ ವಿಚಾರವೇನೆಂದರೆ, ಸದರಿ ಪ್ರಿಯಾ ಬಳ್ಳಾಲ್' ಇವರು ಜಿಲ್ಲೆಯ ಪ್ರಭಾವಿಯೊಬ್ಬರ ಮಗಳಾಗಿದ್ದು, ಸ್ವತಹ ವಿಜಯ ಕ್ಲಿನಿಕ್ ಎಂಬ ಆಸ್ಪತ್ರೆಯನ್ನು ಹೊಂದಿದ್ದು ಹೆರಿಗೆ ವಿಭಾಗದ ಮುಖ್ಯಸ್ಥರಾಗಿದ್ದು, ಅದೇ ರೀತಿ ಕೆ.ಎಂ.ಸಿ ಮತ್ತು ಲೇಡಿಘೋಶನ್ ನ ಒಪ್ಪ೦ದದ ಹಿನ್ನಲೆಯಲ್ಲಿ, ಲೇಡಿಘೋಶನ್ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗದಲ್ಲೂ ಮುಖ್ಯಸ್ಥರಾಗಿದ್ದು, ಉಳಿದಂತೆ ಇತರ ಆಸ್ಪತ್ರೆಗಳಲ್ಲಿ ಸಂದರ್ಶಕ ವೈದ್ಯರುಗಳಾಗಿ ಕೆಲಸ ಮಾಡುವವರಾಗಿರುತ್ತಾರೆ. ಹೀಗಾಗಿ ಡಾಕ್ಟರ್ ಪ್ರಿಯಾ ಬಳ್ಳಾಲ್ ಈ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರಭಾವ ಮತ್ತು ಹಿಡಿತವಿರುತ್ತದೆ. ಸದರಿ ಡಾಕ್ಟರ್ ಪ್ರಿಯಾ ಬಳ್ಳಾಲ್ ರವರು ತನ್ನ ವೈಧ್ಯಕೀಯ ಕರ್ತವ್ಯ ನೆಲೆಯಲ್ಲಿ ಕೆಲಸ ಮಾಡಿದ್ದರೆ ನಾನು ಕೆ ಎಮ್ ಸಿ ಲೇಡಿಘೋಶನ್ ಮತ್ತು ಇತರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದಂತಹ ಸಂದರ್ಭದಲ್ಲಿಯೇ ಅಲ್ಲಿಗೆ ಬಂದು ನನಗೆ ವೈದ್ಯಕೀಯ ನೆರವು ನೀಡಬಹುದಿತ್ತು. ನನಗೆ ಅಥವಾ ನನ್ನ ಕುಟುಂಬಸ್ಥರಿಗೆ ಆ ಆಸ್ಪತ್ರೆಗಳಲ್ಲಿ ಹೋಗಿ ದಾಖಲಾಗಲು ಮತ್ತು ಸ್ವತಹ ಒಂದು ಚಿಕಿತ್ಸೆ ನೀಡಲು ಅಥವಾ ಅಲ್ಲಿನ ವೈದ್ಯರಿಗೆ ಸಲಹೆ ನೀಡಲು ಅವಕಾಶಗಳಿದ್ದವು. ಇತರ ಆಸ್ಪತ್ರೆಗಳ ವೈದ್ಯರು ಸಂಪರ್ಕಿಸಿದಾಗಲೂ ತನ್ನ ನುರಿತ ಅನುಭವವನ್ನು ಕರ್ತವ್ಯದ ಹಿನ್ನಲೆಯಲ್ಲಿ ಹಂಚಿಕೊಳ್ಳಬಹುದಿತ್ತು.

ಮೇಲಿನ ಹಿನ್ನಲೆಯಲ್ಲಿ ತಿಳಿದು ಬರುವ ಅಂಶವೇನೆಂದರೆ ಡಾಕ್ಟರ್ ಪ್ರಿಯಾ ಬಳಾಲ್ ಅವರು ಯಾವುದೋ ದುರುದ್ದೇಶವನ್ನಿಟ್ಟುಕೊಂಡು ನನ್ನ ಜೀವನ್ಮರಣದ ಹೋರಾಟದ ಸಂದರ್ಭದಲ್ಲಿ ಉದ್ದೇಶ ಪೋರಕವಾಗಿ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದು, ಇತರ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿಯೂ ಕೂಡ ವೈದ್ಯಕೀಯ ನೆರವು ನೀಡದಂತೆ ತಡೆಯೊಡ್ಡಿದ್ದು ಡಾಕ್ಟರ್ ಜಯಪ್ರಕಾಶ್, ಡಾಕ್ಟರ್‌ ವಿಜಯ್, ಡಾಕ್ಟರ್ ಮುರಳೀಧರ್ ಇವರುಗಳ ಮುಖಾಂತರ ನನ್ನನ್ನು ಚಿಕಿತ್ಸೆ ನೀಡದೆ ಅಥವಾ ಪರೋಕ್ಷವಾಗಿ ಯಾವುದೋ ರೀತಿಯಲ್ಲಿ ಕೊಲ್ಲುವ ಯತ್ನವನ್ನು ಮಾಡಿರುತ್ತಾರೆ. ತನ್ನ ಕಾರ್ಯ ಸಾಧನೆಯಲ್ಲಿ ಸದರಿ ಡಾಕ್ಟರ್ ಪ್ರಿಯಾ ಬಳ್ಳಾಲ ಇವರು ನಾನು ನನ್ನ ಮತ್ತು ಅಥನಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಲೆ ಬೆದರಿಕೆಯೊಡ್ಡಿದ್ದು ಮತ್ತು ಕೊಲೆಯತ್ನಕ್ಕೆ ಪ್ರಯತ್ನಿಸಿರುತ್ತಾರೆ. ಅಲ್ಲದೇ ವೈದ್ಯಕೀಯ ನೈತಿಕತೆಯನ್ನು ಮತ್ತು ಕಾನೂನನ್ನು ಮೀರಿ  ವರ್ತಿಸಿರುತ್ತಾರೆ. ಸದರಿಯವರ ಕೃತ್ಯದಿಂದ ನಾನು ದಿನಾಂಕ 19-05-2021 ರಿಂದ 21 05-2021 ರ ಹೆರಿಗೆಯಾಗುವ ತನಕ ತೀವ್ರ ಮಾನಸಿಕ ಹಿಂಸೆ, ನೋವು ಮತ್ತು ನನ್ನ ಕುಟುಂಬದವರನ್ನು ಕೂಡಾ ಆತಂಕಕ್ಕೀಡು ಮಾಡಿರುತ್ತಾರೆ. ಆದುದರಿಂದ ಸದರಿಯವರ -೯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

ಖತೀಜ ಜಾಸ್ಮಿನ್,













.





Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99