ಯುವತಿ ಜೊತೆ ಶರಣ್ ಪಂಪ್ ವೆಲ್ ವಾಟ್ಸಪ್ ಚಾಟ್ ಸೃಷ್ಟಿಸಿ ಅಪಪ್ರಚಾರ- ವಿಹಿಂಪ ಖಂಡನೆ, ಕಠಿಣ ಕ್ರಮಕ್ಕೆ ಆಗ್ರಹ
Friday, May 28, 2021
ಮಂಗಳೂರು; ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪುವೆಲ್ ಅವರು ಯುವತಿ ಜೊತೆಗೆ ವಾಟ್ಸಪ್ ಚಾಟ್ ಮಾಡಿದಂತೆ ಸೃಷ್ಟಿ ಮಾಡಿ ಅಪಪ್ರಚಾರ ಮಾಡುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ.
ಯುವತಿ ಜೊತೆಗೆ ಚಾಟ್ ಮಾಡುತ್ತಾ ಆಕೆಯನ್ನು ಲಾಡ್ಜ್ ಗೆ ಕರೆಯುವುದು, ಹಣ ಕೊಡ್ತೇನೆ ಎಂದು ಹೇಳುವುದು, ಅದಕ್ಕೆ ಹುಡುಗಿ ನಿರಾಕರಿಸುವುದು ಈ ಚಾಟ್ ನಲ್ಲಿದೆ. ಇದು ಶರಣ್ ಪಂಪ್ ವೆಲ್ ಅವರೆ ಚಾಟ್ ಮಾಡಿದ್ದಾರೆ ಎಂಬಂತೆ ಸೃಷ್ಟಿಸಲಾಗಿದೆ.ಈ ಮೂಲಕ ಶರಣ್ ಪಂಪ್ ವೆಲ್ ಅವರ ತೇಜೋವಧೆಗೆ ಯತ್ನಿಸಲಾಗಿದೆ.
ಶರಣ್ ಪಂಪ್ ವೆಲ್ ಮೇಲೆ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವುದಕ್ಕೆ ವಿಹಿಂಪ
ಖಂಡನೆ ವ್ಯಕ್ತಪಡಿಸಿದ್ದು ತಕ್ಷಣ ಕಠಿಣ ಕ್ರಮಕ್ಕೆ ಆಗ್ರಹ ಆಗ್ರಹಿಸಿದೆ.
ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ನಡೆಸುತ್ತಿರುವವರ ಬಗ್ಗೆ ತಕ್ಷಣ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸ್ ಕಮಿಷನರಿಗೆ ಮನವಿ ಮಾಡಲಾಗುವುದು
ಮತ್ತು ಅಪಪ್ರಚಾರ ಮಾಡಿದವರ ಹಾಗು ವೈರಲ್ ಮಾಡುತ್ತಿರುವವರ ಮೇಲೆ ಎಲ್ಲಾ ಠಾಣೆಗಳಲ್ಲಿ ದೂರು ದಾಖಲಿಸುವಂತೆ ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಕರೆ ನೀಡಿದ್ದಾರೆ.