ಮತ್ತೆ ಸುದ್ದಿಯಾದ ಪಂಪ್ ವೆಲ್- ಮೇಲ್ಸೇತುವೆಯ ಕೆಳಭಾಗದಲ್ಲಿ ಕೃತಕ ನೆರೆ! (video)
Saturday, May 29, 2021
ಮಂಗಳೂರು: ಪಂಪ್ ವೆಲ್ ಪ್ಲೈ ಓವರ್ ಮತ್ತೊಮ್ಮೆ ಇಂದು ಸುದ್ದಿಯಾಗಿದೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಪಂಪ್ ವೆಲ್ ನ ಮೇಲ್ಸೇತುವೆಯ ಕೆಳಗೆ ಭಾರಿ ನೀರು ತುಂಬಿದೆ. ಸನಿಹದಲ್ಲಿದ್ದ ಚರಂಡಿ ನೀರು ಹರಿದುಹೋಗಲಾಗದೆ ನೀರು ಮೇಲೆ ಬಂದಿದೆ. ಇದರಿಂದಾಗಿ ಮುಂಜಾನೆ ವಾಹನಗಳು ಓಡಾಡಲಾಗದೆ ಸಮಸ್ಯೆ ಉದ್ಭವಿಸಿತ್ತು. ಇದಾದ ಬಳಿಕ ಚರಂಡಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದ ಪರಿಣಾಮ ಕೃತಕ ನೆರೆ ತಗ್ಗಿದೆ. ಆದರೆ ಪಂಪ್ ವೆಲ್ ಮೇಲ್ಸೇತುವೆಯ ಕೆಳಗಿನ ಸರ್ವಿಸ್ ರೋಡ್ ನಲ್ಲಿ ನೀರು ತುಂಬಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.