-->

ಈ ಊರಿನಲ್ಲಿ ಒಂದೇ ದಿನ 18-21 ವಯಸ್ಸಿನ ಮೂವರು ಯುವತಿಯರು ನಾಪತ್ತೆ- ಕಾರಣ ನಿಗೂಢ!

ಈ ಊರಿನಲ್ಲಿ ಒಂದೇ ದಿನ 18-21 ವಯಸ್ಸಿನ ಮೂವರು ಯುವತಿಯರು ನಾಪತ್ತೆ- ಕಾರಣ ನಿಗೂಢ!


ಹೈದರಾಬಾದ್; ಹೈದರಾಬಾದ್ ನಲ್ಲಿ ಯುವತಿಯರ ನಾಪತ್ತೆ ಪ್ರಕರಣ ಆತಂಕ ಸೃಷ್ಟಿಸಿರುವ ನಡುವೆ ಒಂದೇ ದಿನ ಮೂರು ಯುವತಿಯರು ನಾಪತ್ತೆಯಾಗಿರುವುದು ವರದಿಯಾಗಿದೆ.

 ಸುನಿತಾ ಭವಾನಿ (21) ಎಂಬ ಯುವತಿ ವೆಂಕಟಗಿರಿ ವಾಟರ್​ ಟ್ಯಾಂಕ್​ ಬಳಿ ವಾಸವಿದ್ದು ಜೂನಿಯರ್​ ಆರ್ಟಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಳು. ಈಕೆ ತಾಯಿಗೆ ಕರೆ ಮಾಡಿ  ಜೂನಿಯರ್​ ಆರ್ಟಿಸ್ಟ್​ ಆಗಿ 1 ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಈಗಲೇ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಳು. ಮನೆಗೆ ಹಿಂದಿರುತ್ತೇನೆಂದು ಹೇಳಿದ ಮಗಳು ಬರದೆ  ಇರುವುದರಿಂದ  ಆಕೆಯ ತಾಯಿ ಇದೀಗ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ  ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ  ಕಮ್ಮೊಲ್ಲಾ ಸಿರಿಶಾ (21) ಎಂಬ ಯುವತಿ ನಾಪತ್ತೆಯಾಗಿದ್ದಾಳೆ. ಈಕೆ ಜುಬಿಲಿ ಹಿಲ್ಸ್​ ಠಾಣಾ ವ್ಯಾಪ್ತಿಯ ಅಂಬೇಡ್ಕರ್​ ನಗರದ ನಿವಾಸಿ. 27ರಂದು ದಿನಸಿ ತರಲು ಅಂಗಡಿಗೆ ಹೋದವಳು ಮರಳಿ ಬಂದಿಲ್ಲ. ಈಕೆ ನಾಪತ್ತೆಯಾಗಿರುವ ಬಗ್ಗೆ ತಂದೆ ಜುಬಿಲಿ ಹಿಲ್ಸ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಮತ್ತೊಂದು ನಾಪತ್ತೆ ಪ್ರಕರಣ ಮಲ್ಕಜ್​ಗಿರಿಯಲ್ಲಿ ನಡೆದಿದೆ. ಜಯಂತ್​ ಎಂಬವರು ತನ್ನ ಮಗಳು ಅನುಷ್ಕಾಳನ್ನು (18)  ಪೂರ್ವ ಗೋದಾವರಿ ಜಿಲ್ಲೆಯ ಗಂಗಾಧರ ಗ್ರಾಮದಿಂದ  ಮಲ್ಕಜ್​ಗಿರಿಯ ಮಾರುತಿನಗರದ ನೆಂಟರ ಮನೆಗೆ ಕರೆತಂದಿದ್ದ. ಮೇ 27ರಂದು ಬೆಳಗ್ಗೆ ಮನೆಯಿಂದ ಹೊರ ಹೋದ ಅನುಷ್ಕಾ ಮರಳಿ ಬಂದಿಲ್ಲ ಎಂದು ದೂರು ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99