
ವಿವಾಹವಾದ ನಾಲ್ಕು ದಿನದಲ್ಲಿ ನವವಿವಾಹಿತೆ ಕೊರೊನಾಗೆ ಬಲಿ
Saturday, May 29, 2021
ಶಿವಮೊಗ್ಗ: ಮದುವೆಯಾದ ನಾಲ್ಕೇ ದಿನಕ್ಕೆ ಕೊರೊನಾ ಸೋಂಕಿಗೆ ನವವಿವಾಹಿತೆಯೊಬ್ಬಳು ಕೊರೊನಾಗೆ ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ನಿದಿಗೆ ಎಂಬ ಗ್ರಾಮದಲ್ಲಿ ನಡೆದಿದೆ .
ಪೂಜಾ (24) ಎಂಬ ವಿವಾಹಿತೆ ಮೃತಪಟ್ಟವರು.ಮದುವೆ ಕಾರ್ಯಕ್ರಮ ಮುಗಿಸಿ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಇದೀಗ ದುಃಖ ಮಡುಗಟ್ಟಿದೆ.
ನಿದಿಗೆಯ ಪೂಜಾ ಮತ್ತು ಹರಿಗೆಯ ಮಹೇಶ್ ಅವರ ವಿವಾಹ ( ಮೇ 24)ಸೋಮವಾರ ನಡೆದಿತ್ತು. ವಿವಾಹವಾದ ಎರಡೇ ದಿನಕ್ಕೆ ಪೂಜಾಗೆ ಮೈಕೈ ನೋವು ಕಾಣಿಸಿಕೊಂಡಿದೆ. ಮಲವಗೊಪ್ಪದ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗಿರಲಿಲ್ಲ. ಗುರುವಾರ ಸಂಜೆ ನವವಿವಾಹಿತೆ ಸಾವನ್ನಪ್ಪಿದ್ದಾರೆ
ಮೃತ ನವವಿವಾಹಿತೆಯ ಕೊರೊನಾ ಪರೀಕ್ಷೆ ನಡೆಸಿದಾಗ ಆಕೆಗೆ ಕೊರೊನಾ ಸೋಂಕು ಇರುವುದು ಗೊತ್ತಾಗಿದೆ.ಮದುವೆಯಾದ ನಾಲ್ಕೆ ದಿನಕ್ಕೆ ನಡೆದಿರುವ ಈ ಘಟನೆಯಿಂದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಶೋಕ ಮಡುಗಟ್ಟಿದೆ.