Mangalore- ಹಿಂದುತ್ವದಿಂದ ಬಂಧುತ್ವ ಎಂದು ಸುದ್ದಿಯಾಗಿದ್ದ ಸುನಿಲ್ ಬಜಿಲಕೇರಿ ಬಂಧನ- ಏನಿದು ಪ್ರಕರಣ?
Wednesday, June 9, 2021
ಮಂಗಳೂರು; ಇತ್ತೀಚಿಗೆ ಎಂ ಆರ್ ಪಿ ಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದುತ್ವದಿಂದ ಬಂಧುತ್ವದೆಡೆಗೆ ಹೋರಾಟ ಮಾಡುವೆ ಎಂದು ಸುದ್ದಿಯಾಗಿದ್ದ ಸುನಿಲ್ ಬಜಿಲಕೇರಿ ಅವರನ್ನು ಖಾಸಗಿ ಚಾನೆಲ್ ವೊಂದರ ಆಡಿಯೋ ತಿರುಚಿದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಸುನಿಲ್ ಬಜಿಲಕೇರಿ ಸಂಘಪರಿವಾರದಲ್ಲಿ ದುಡಿದು ಇತ್ತೀಚೆಗೆ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಬಿಜೆಪಿ ನಾಯಕರ ಕಾರ್ಯಚಟುವಟಿಕೆಗಳ ಬಗ್ಗೆ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದರು. ಆದರೆ ಮಂಗಳೂರಿನ ಸ್ಥಳೀಯ ಚಾನೆಲ್ ವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂದರ್ಶನದ ಭಾಗವನ್ನು ಆಡಿಯೋ ತಿರುಚಿ ಅಪಪ್ರಚಾರ ಮಾಡಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
(ಅಸಲಿ ಮತ್ತು ನಕಲಿ ವಿಡಿಯೋ ನೋಡಿ)
ಚಿಕ್ಕಮಗಳೂರು ಜಿಲ್ಲೆಯ ಸುಪ್ರಿತಾ ಗೌಡ ಎಂಬ ಹಿಂದೂ ಪರ ಕಾರ್ಯಕರ್ತೆ ಸುನಿಲ್ ಬಜಿಲಕೇರಿಗೆ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಳು.ಇದೇ ಯುವತಿ ಸ್ಥಳೀಯ ಚಾನೆಲ್ ನ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನದಲ್ಲಿ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಹೊಗಳಿ ಮಾತಾಡಿದ್ದರು. ಆದರೆ ಸುನಿಲ್ ಬಜಿಲಕೇರಿ ಅವರಿಗೆ ತರಾಟೆಗೆ ತೆಗೆದುಕೊಂಡ ಆಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಸಂದರ್ಶನದ ಭಾಗಕ್ಕೆ ಜೋಡಿಸಿ ನಳಿನ್ ಕುಮಾರ್ ಕಟೀಲ್ ಗೆ ಯುವತಿ ತರಾಟೆಗೆ ತೆಗೆದುಕೊಂಡಂತೆ ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿತ್ತು.ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸುನಿಲ್ ಬಜಿಲಕೇರಿ ಯನ್ನು ಬಂಧಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ