-->

ಇಂದು (ಗುರುವಾರ) ಸಂಭವಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ: ಭಾರತದಲ್ಲಿ ಎಲ್ಲೆಲ್ಲಿ ಗೋಚರ?

ಇಂದು (ಗುರುವಾರ) ಸಂಭವಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ: ಭಾರತದಲ್ಲಿ ಎಲ್ಲೆಲ್ಲಿ ಗೋಚರ?ಕೋಲ್ಕತ: ಈ ವರ್ಷದ ಮೊದಲ ಖಗ್ರಾಸ ಸೂರ್ಯಗ್ರಹಣವು ಇಂದು (ಗುರುವಾರ) ಸಂಭವಿಸಲಿದೆ. ಈ ಸೂರ್ಯಗ್ರಹಣವು ಉತ್ತರ ಅಮೆರಿಕಾ, ಯುರೋಪ್, ಏಷ್ಯಾದ ಭಾಗಗಳಲ್ಲಿ ಕಾಣಲಿದ್ದು, ಭಾರತದ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವು ಪ್ರದೇಶಗಳಲ್ಲಿಯೂ ಗೋಚರವಾಗಲಿದೆ.

ಅಮೆರಿಕಾ, ಯುರೋಪ್, ಏಷ್ಯಾದ ಪ್ರದೇಶಗಳಲ್ಲಿ ಬೆಳಗ್ಗೆ 11.42ಕ್ಕೆ ಸೂರ್ಯಗ್ರಹಣ ಆರಂಭವಾಗಲಿದೆ. ಅಪರಾಹ್ನ 3.30ರ ಹೊತ್ತಿಗೆ ಖಗ್ರಾಸವಾಗಲಿದ್ದು, 4.52ರ ತನಕ ಮುಂದುವರಿಯಲಿದೆ. 6.41ಕ್ಕೆ ಗ್ರಹಣ ಮುಕ್ತಾಯವಾಗಲಿದೆ ಎಂದು ಕೋಲ್ಕತದ ಎಂಪಿ ಬಿರ್ಲಾ ಪ್ಲಾನೆಟೋರಿಯಂನ ನಿರ್ದೇಶಕ ದೇವಿಪ್ರಸಾದ್ ದುರೈ ಹೇಳಿದ್ದಾರೆ.

ಭಾರತದಲ್ಲಿ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವು ಭಾಗಗಳಲ್ಲಿ ಸೂರ್ಯಾಸ್ತಕ್ಕೆ ಮುನ್ನ 3ರಿಂದ 4 ನಿಮಿಷ ಕಾಲ ಗೋಚರಿಸಲಿದೆ. ಲಡಾಖ್‌ನ ಉತ್ತರ ಭಾಗದಲ್ಲಿ ಸಂಜೆ 6ರ ಹೊತ್ತಿಗೆ ಮತ್ತು ಅರುಣಾಚಲ ಪ್ರದೇಶದ ದಿಬಂಗ್ ವೈಲ್ಡ್​​ಲೈಫ್​ ಸ್ಯಾಂಕ್ಚುರಿಯಲ್ಲಿ ಸಂಜೆ 5.52ರ ಹೊತ್ತಿಗೆ ಗ್ರಹಣ ಗೋಚರವಾಗಲಿದೆ ಎಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99