-->

ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿ 12 ಯುವತಿಯರಿಗೆ ಲೈಂಗಿಕ ಕಿರುಕುಳ: ಕಾಮುಕ ಇಂಜಿನಿಯರ್ ಪೊಲೀಸ್ ಬಲೆಗೆ

ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿ 12 ಯುವತಿಯರಿಗೆ ಲೈಂಗಿಕ ಕಿರುಕುಳ: ಕಾಮುಕ ಇಂಜಿನಿಯರ್ ಪೊಲೀಸ್ ಬಲೆಗೆ


ಮುಂಬೈ: ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯ ಮಾಡಿಕೊಂಡ ಸುಮಾರು 12 ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ  ಮೆಕಾನಿಕಲ್​ ಇಂಜಿನಿಯರ್​ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮಹೇಶ್​ ಅಲಿಯಾಸ್​ ಕರಣ್​ ಗುಪ್ತಾ(32) ಮುಂಬೈ ಮಲಾಡ್​ ಏರಿಯಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಕರಣ್ ಗುಪ್ತಾ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಸುಶಿಕ್ಷಿತ ಯುವತಿಯರನ್ನೇ ಟಾರ್ಗೆಟ್​ ಮಾಡುತ್ತಿದ್ದ.‌ ಹಾಗೆ ಯುವತಿಯರನ್ನು ಪರಿಚಯಿಸಿಕೊಂಡು ಬಳಿಕ ಫೋನ್​ ನಂಬರ್ ಪಡೆದು ಅವರನ್ನು ಪಬ್​, ರೆಸ್ಟೋರೆಂಟ್​ ಅಥವಾ ಮಾಲ್​ಗಳಲ್ಲಿ ಭೇಟಿ ಮಾಡುತ್ತಿದ್ದ. ಇಂತಹ ಭೇಟಿಯ ಸಂದರ್ಭದಲ್ಲಿಯೇ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಡೆಪ್ಯೂಟಿ ಕಮಿಷನರ್​ ಆಫ್​ ಪೊಲೀಸ್​ ಸುರೇಶ್​ ಮೆಂಗಡೆ ಮಾಹಿತಿ ನೀಡಿದ್ದಾರೆ.

ಆರೋಪಿ‌ ಕರಣ್ ಗುಪ್ತಾ ಭಾರೀ ಚಾಲಾಕಿಯಾಗಿದ್ದು, ಪ್ರತಿ ಅಪರಾಧ ಮಾಡುವಾಗಲು ಬೇರೆ ಬೇರೆ ದೂರವಾಣಿ ಸಂಖ್ಯೆಯನ್ನು​ ಬಳಸುತ್ತಿದ್ದ. ಸಿಮ್​ ಕಾರ್ಡ್​ ಗಳನ್ನು ಬದಲಾಯಿಸುವುದೇ ಈತನ ಕಾಯಕವಾಗಿತ್ತು. ಅಲ್ಲದೆ ಆತ ತನ್ನ ಹೆಸರಿನಲ್ಲಿ ನೋಂದಣುಯಾಗದ ಫೋನ್​ ನಂಬರ್​ ಅನ್ನೇ ಬಳಸುತ್ತಿದ್ದ. ಸ್ವಂತ ವಾಹನಗಳನ್ನು ಬಳಸದೇ ಓಲಾ, ಊಬರ್​ ಕ್ಯಾಬ್​ ಮೂಲಕವೇ ಸಂಚಾರ ಮಾಡುತ್ತಿದ್ದ. ಕಂಪ್ಯೂಟರ್​ ಮೇಲೆ ಉತ್ತಮ ಜ್ಞಾನ ಹೊಂದಿರುವ ಆರೋಪಿ ಕೆಲ ಸಮಯ ಹ್ಯಾಕರ್​ ಆಗಿ ಕೆಲಸ ಮಾಡಿದ್ದ. ಆದರೆ, ಇದನ್ನು ಕೆಟ್ಟ ಕೆಲಸಕ್ಕಾಗಿ ಬಳಸಿದ್ದ ಎಂದು ಮೆಂಗಾಡೆ ತಿಳಿಸಿದರು.

ಗೌರವಾನ್ವಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಆರೋಪಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದಾನೆ. ಇಲ್ಲಿಯವರಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈತ 12 ಯುವತಿಯರ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ತಿಂಗಳಿಂದ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಪೊಲೀಸ್​ ಬಲೆಗೆ ನಯವಂಚಕ ಬಿದ್ದಿದ್ದಾನೆ. ಇದೀಗ ಆತನನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99