
ಹೊಸವೆಬ್ ಸರಣಿಯಲ್ಲಿ ನಟಿ ಸಮಂತಾರ ಬೋಲ್ಡ್ ಪಾತ್ರ ನೋಡಿ ಹುಬ್ವೇರಿಸಿದ ನೆಟ್ಟಿಗರು (Video)
Wednesday, June 9, 2021
ಹೈದರಾಬಾದ್: ಬಾಲಿವುಡ್ ನಟ ಮನೋಜ್ ಬಾಜ್ಪೆಯಿ ಮುಖ್ಯ ಪಾತ್ರದಲ್ಲಿ ನಟಿಸಿರುವ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ 2ನೇ ಸೀಸನ್ನಲ್ಲಿ ನಟಿ ಸಮಂತಾ ಅಕ್ಕಿನೇನಿ ನಟಿಸಿದ್ದು, ಇನ್ನು ಸಮಂತಾ ಅವರು ನಟನೆಯ ಬಗ್ಗೆಯೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಅವರ ದೈಹಿಕ ಭಾಷೆ ಮತ್ತು ನಟನಾ ಕೌಶಲ್ಯವನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಸಮಂತಾರ ಬೋಲ್ಡ್ನೆಸ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಲೈಂಗಿಕ ಕಿರುಕುಳ ದೃಶ್ಯ ಹಾಗೂ ಬೆಡ್ ಸೀನ್ ಗಳಲ್ಲಿ ಅವರ ಬೋಲ್ಡ್ ನೆಸ್ ಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಅವರ ಪಾತ್ರವನ್ನು ಲೈಂಗಿಕ ಕಿರುಕುಳದ ವಿರುದ್ಧ ಹೋರಾಡಲು ಸಾಕಷ್ಟು ಶಕ್ತಿ ಇಲ್ಲದಿರುವ ಪಾತ್ರಧಾರಿಯಾಗಿ ತೋರಿಸಲಾಗಿತ್ತು.
ಅಂದ ಹಾಗೆ ಅವರು, ಶ್ರೀಲಂಕಾದ ತಮಿಳು ಕ್ರಾಂತಿಕಾರಿ ರಾಜಿ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಸಮಂತಾ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಜೂನ್ 4ರಂದು ಬಿಡುಗಡೆಯಾಗಿದ್ದು, ಈ ಚಿತ್ರವು ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗುವ ಮೂಲಕ ಇದು ಸಮಂತಾರ ಮೊದಲ ಡಿಜಿಟಲ್ ವೇದಿಕೆಯ ಚಿತ್ರವಾಗಿದೆ.
ಆದರೆ ಟ್ರೈಲರ್ ಬಿಡುಗಡೆಯಾದಾಗಲೇ ನೆಟ್ಟಿಗರು ಸಮಂತಾ ಆಯ್ಕೆ ಮಾಡಿಕೊಂಡ ಪಾತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಮಿಳಿಗರ ಮೇಲೆ ಕೆಟ್ಟ ಪರಿಣಾಮ ಬೀರುವ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಸಮಂತಾ ವಿರುದ್ಧ #ShameOnSamantha ಎಂಬ ಹ್ಯಾಶ್ಟ್ಯಾಗ್ ಸೃಷ್ಟಿಸಿ ಟ್ರೆಂಡ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯನ್ನು ಬ್ಯಾನ್ ಮಾಡುವಂತೆಯೂ ಆಗ್ರಹಿಸಿದ್ದಾರೆ.