ಇನ್ನು ಹಿಂದುತ್ವಕ್ಕಾಗಿ ಅಲ್ಲ, ಬಂಧುತ್ವಕ್ಕಾಗಿ ಹೋರಾಟ- ಸಂಘಪರಿವಾರದ ಮುಖಂಡರ ಹತಾಷ ಸಂಭಾಷಣೆಯ Audio viral - ಇವರ ಮುಂದಿನ ಹೋರಾಟ ಯಾಕಾಗಿ ಗೊತ್ತಾ ( Full Audio ಕೇಳಿ)
Monday, May 24, 2021
ಮಂಗಳೂರು: ಸಂಘಪರಿವಾರದ ಮುಖಂಡರದ ಪ್ರವೀಣ್ ವಾಲ್ಕೆ ಮತ್ತು ಸುನಿಲ್ ಬಜಿಲಕೇರಿ ಅವರದ್ದು ಎನ್ನಲಾದ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ಒಂದು ಜಿಲ್ಲೆಯಾದ್ಯಂತ ಹರಿದಾಡ್ತಾ ಇದ್ದು, ಇದರಲ್ಲಿ ತಾವು ಈತನಕ ಹಿಂದುತ್ವಕ್ಕಾಗಿ ನಡೆಸಿಕೊಂಡು ಬಂದ ಹೋರಾಟದ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ.
ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ ನಡೆದ ನೇಮಕಾತಿಯಲ್ಲಿ ಸ್ಥಳೀಯರಿಗೆ ಯಾವುದೇ ಅವಕಾಶ ಇಲ್ಲದಿರುವ ಬಗ್ಗೆ ಹೋರಾಟ ನಡೆಸಲು ಸುನಿಲ್ ಬಜಿಲಕೇರಿ ತೀರ್ಮಾನಿಸಿದ್ದು, ಈ ವೇಳೆ ಅವರು ಆಶೀರ್ವಾದ ಪಡೆಯಲೆಂದು ಪ್ರವೀಣ್ ವಾಲ್ಕೆಗೆ ಕರೆ ಮಾಡಿದ್ದರು. ಈ ವೇಳೆ ಸುಮಾರು 6.50 ನಿಮಿಷಗಳ ಕಾಲ ಇಬ್ಬರು ಪೋನ್ ನಲ್ಲಿ ಸಂಭಾಷಣೆ ನಡೆಸಿದ್ದು, ಇದರಲ್ಲಿ ಈ ಹಿಂದೆ ಅವರು ಯುವಕರನ್ನು ಸಂಘಟಿಸಿ ಹೋರಾಟ ಮಾಡಿ ಅವರನ್ನು ಜೈಲು ಪಾಲು ಮಾಡಿದ್ದು, ಬಿಟ್ಟು ಬೇರೆ ಏನು ಮಾಡಿಲ್ಲ ಎಂದು ವಿಷಾದದಿಂದ ಮಾತನಾಡಿದ್ದಾರೆ.
ಇನ್ನಾದರೂ ಈ ಹಿಂದುತ್ವದ ಹೋರಾಟ ಬಿಟ್ಟು ಬಂಧುತ್ವದ ಹೋರಾಟ ಮಾಡುವ, ಯುವಕರನ್ನು ಜೈಲಿಗೆ ಕಳಿಸುವುದು ಬಿಟ್ಟು ಅವರಿಗೆ ಉದ್ಯೋಗ ದೊರಕಿಸುವ ಎಂದು ತೀರ್ಮಾನಿಸಿದಂತೆ ಸಂಭಾಷಣೆ ನಡೆಸಿದ್ದಾರೆ.
ನಮ್ಮ ಹೋರಾಟದ ಲಾಭ ಪಡೆದು ಹಲವರು ಅಧಿಕಾರ, ವೈಯಕ್ತಿಕ ಲಾಭ ಪಡೆದದ್ದು ಬಿಟ್ಟರೆ ನಮ್ಮ ಯುವಕರು ಏನೂ ಸಾಧಿಸಿಲ್ಲ ಎಂದು ಆಡಿಯೋದಲ್ಲಿ ಬಹಿರಂಗ ಪಡಿಸಿದ್ದಾರೆ.
ಆ ಆಡಿಯೋ ಸಂಪೂರ್ಣವಾಗಿ ನೀವೂ ಕೇಳಿ.