
ಇವನೆಂತಾ ಮಗ?: 'ಹೆಣ ನೀವೇ ಸುಟ್ಟುಬಿಡಿ, ಅವರ ಬಳಿ ಇದ್ದ ದುಡ್ಡು ದಾಖಲೆ ತಂದು ಕೊಡಿ': ಸಂಸ್ಕಾರ ಹೀನ ಘಟನೆ ನಡೆದದ್ದು ಎಲ್ಲಿ ಗೊತ್ತಾ? (Video ನೋಡಿ)
ಮೈಸೂರು: ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಕೊಂಡು ಹೋಗಲು ಆತನ ಮಗನಿಗೆ ಕರೆ ಮಾಡಿದಾಗ ಮಗ ಮೃತದೇಹ ಪಡೆಯಲು ನಿರಾಕರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
55 ವರ್ಷದ ವ್ಯಕ್ತಿಯೋರ್ವರು ಇಲ್ಲಿ ಮೃತಪಟ್ಟಿದ್ದು, ಮೃತದೇಹ ಕೊಂಡುಹೋಗಲು ಅಲ್ಲಿನ ಕಾರ್ಪೋರೇಟರ್ ಶ್ರೀಧರ್ ಮಗನಿಗೆ ಕರೆ ಮಾಡಿದ್ದರು. ಆದರೆ ಆತ ಇದಕ್ಕೆ ನಿರಾಕರಿಸಿದಾಗ ಇಲ್ಲಿ ನಿಮ್ಮ ಅಪ್ಪನಿಗೆ ಸಂಬಂಧಿಸಿದ 6 ಲಕ್ಷ ರೂ. ನಗದು ಎರಡು ಎಟಿಎಂ ಕಾರ್ಡ್, ಮೂರು ಮೊಬೈಲ್ ಗಳು ಇವೆ ಏನ್ ಮಾಡಬೇಕು ಎಂದು ಕೇಳಿದ್ದರು. ಅದನ್ನು ಮನೆಗೆ ತಲುಪಿಸಿ ಕೊಡಿ ಎಂದು ಮಗ ಹೇಳಿದ್ದು, ಇದರಿಂದ ಕೋಪಗೊಂಡ ಕಾರ್ಪೋರೇಟರ್ 'ಇದೇನಾ ನಿಮ್ಮ ಸಂಸ್ಕಾರ. ನಿಮಗೆ ನಿಮ್ಮ ಅಪ್ಪನ ಮೃಯದೇಹ ಬೇಡವಂತೆ ಅವರ ಹಣ, ಆಸ್ತಿ ಬೇಕಾ? ನಾಚಿಕೆಯಾಗೋದಿಲ್ವ ನಿಮಗೆ' ಎಂದು ಗದರಿಸಿದ್ದಾರೆ.