
ಕಾಸರಗೋಡಿನಲ್ಲಿ ಟಿಕ್ಕಾ ಪಾರ್ಟಿ ನಡೆಯುತ್ತಿದ್ದಲ್ಲಿಗೆ ಪೊಲೀಸ್ ರೈಡ್- ಮುಂದೇನಾಯಿತು ? ( ವೈರಲ್ video)
ಕಾಸರಗೋಡು: ಕಾಸರಗೋಡಿನಲ್ಲಿ ಲಾಕ್ ಡೌನ್ ವೇಳೆ ಟಿಕ್ಕಾ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಪೊಲೀಸರು ದಾಳಿ ನಡೆಸಿದ ವೇಳೆ ಯುವಕರು ಪರಾರಿಯಾದ ಘಟನೆ ನಡೆದಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಏನೂ ಮಾಡಲಾಗದೆ ಟಿಕ್ಕಾ ಪಾರ್ಟಿ ಮಾಡಲು ಯುವಕರು ಯೋಜಿಸಿದ್ದರು. ಇದಕ್ಕಾಗಿ ಯುವಕರ ತಂಡವೊಂದು ಟಿಕ್ಕಾ ಪಾರ್ಟಿ ಆಯೋಜಿಸಿದೆ. ಆದಿತ್ಯವಾರದಂದು ಪಾರ್ಟಿ ನಡೆಸಲು ಫಿಕ್ಸ್ ಮಾಡಿ ಟಿಕ್ಕಾ ಮಾಡಲು ಆರಂಭಿಸಿದ್ದರು. ಟಿಕ್ಕಾ ರೆಡಿಯಾಗಿ ಇನ್ನು ಗಮ್ಮತ್ತು ಮಾಡಿಕೊಳ್ಳಬೇಕು ಎಂಬಷ್ಟರಲ್ಲಿ ಈ ಮಾಹಿತಿಯನ್ನು ಪಡೆದ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.
ಪೊಲೀಸರನ್ನು ಕಂಡ ಯುವಕರ ಗುಂಪು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ ತಪ್ಪಿಸಿಕೊಳ್ಳುವ ಅವಸರದಲ್ಲಿ ತಾವು ತಂದ ಬೈಕನ್ನೆ ಬಿಟ್ಟು ಹೋಗಿದ್ದಾರೆ. ರೈಡ್ ಗೆ ಬಂದ ಪೊಲೀಸರು ಟಿಕ್ಕಾ ಸಮೇತ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ