
ಮಂಗಳೂರು: ತೆಂಗಿನಕಾಯಿ ಕೀಳುವಾಗ ದುರ್ಘಟನೆ- ವಿದ್ಯುತ್ ತಗುಲಿ ಯುವಕ ಮೃತ್ಯು
ಕಡಬ: ಮನೆ ಮುಂದೆ ಇದ್ದ ತೆಂಗಿನ ಮರದಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಯುವಕನೋರ್ವ ಮೃತಪಟ್ಟ ಘಟನೆ ಇಲ್ಲಿನ ವಿಮಲಗಿರಿ ಎಂಬಲ್ಲಿ ನಡೆದಿದೆ.
ಬಡಗಬೆಟ್ಟು ನಿವಾಸಿ ತಂಗಚ್ಚನ್ ಎಂಬವರ ಪುತ್ರ ಲಿಜೋ (35) ಮೃತ ಯುವಕ.
ಲಿಜೋ ಕಬ್ಬಿಣದ ಕೊಕ್ಕೆ ಮೂಲಕ ತೆಂಗಿನಕಾಯಿ ಕೀಳುತ್ತಿದ್ದ. ಈ ವೇಳೆ ಕಬ್ಬಿಣದ ಕೊಕ್ಕೆಗೆ ವಿದ್ಯುತ್ ಪ್ರವಹಿಸಿ ಕುಸಿದು ಬಿದ್ದು ಅಲ್ಲೇ ಮೃತಪಟ್ಟಿದ್ದಾನೆ.