ಹೈದರಾಬಾದ್ ನಲ್ಲಿ ಹೆಚ್ಚುತ್ತಿರುವ ಯುವತಿಯರ ನಾಪತ್ತೆ ಪ್ರಕರಣ: ಮತ್ತೆರಡು ಯುವತಿಯರು ನಾಪತ್ತೆ
Wednesday, June 9, 2021
ಮಲ್ಕಜ್ಗಿರಿ: ಹೈದರಾಬಾದ್ನಲ್ಲಿ ಪದೇ ಪದೇ ಯುವತಿಯ ನಾಪತ್ತೆ ಪ್ರಕರಣಗಳು ನಡೆಯುತ್ತಲೇ ಇದ್ದು ಇದೀಗ ಮತ್ತೆ ಇಬ್ಬರು ಯುವತಿಯರು ದಿಢೀರ್ ಕಾಣೆಯಾಗಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಮಲ್ಕಜ್ಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮನ್ಪೇಟೆ ನಿವಾಸಿ ಅಶ್ವಿನಿ (19), ಪೆಟ್ಬಶಿರಾಬಾದ್ ನಿವಾಸಿ ರಿಶಿದಾ (21) ನಾಪತ್ತೆಯಾಗಿರುವರೆಂದು ಪ್ರಕರಣ ದಾಖಲಾಗಿದೆ.
ಅಶ್ವಿನಿ ಡಿಗ್ರಿ ಓದುತ್ತಿದ್ದು, ಕಳೆದ ಕೆಲವು ದಿನಗಳಿಂದ ಮೊಬೈಲ್ ನಲ್ಲೇ ಹೆಚ್ಚಕಾಲ ಕಳೆಯುತ್ತಿರುವುದನ್ನು ಆಕೆಯ ತಾಯಿ ಗಮನಿಸಿತ್ತಿದ್ದರಂತೆ. ಅದೇ ರೀತಿ ಮೂವರು ಯುವತಿಯರೂ ಬಂದು ತಾಯಿಯಲ್ಲಿ ಅಶ್ವಿನಿ ಯಾರೋ ಓರ್ವ ಯುವಕನೊಬ್ಬನ್ನು ಪ್ರೀತಿಸುತ್ತಿದ್ದಾಳೆ. ಆತನನ್ನೇ ಮದುವೆ ಆಗಬೇಕೆಂದುಕೊಂಡಿದ್ದಾಳೆಂದು ಹೇಳಿದ್ದರು. ಇದರಿಂದ ಕುಪಿತಗೊಂಡ ತಾಯಿ, ಅಶ್ವಿನಿಗೆ ಬೈದು ಬುದ್ಧಿವಾದ ಹೇಳಿದ್ದರು. ಅದೇ ದಿನ ಸೂಪರ್ ಬಜಾರ್ಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಅಶ್ವಿನಿ ಮರಳಿ ಮನೆಗೆ ಬರಲೇ ಇಲ್ಲ. ಈ ಬಗ್ಗೆ ಅಶ್ವಿನಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ರಿಶಿದಾ (21) ಎಂಬಾಕೆ ಪೆಟ್ಬಶಿರಾಬಾದ್ನಿಂದ ನಾಪತ್ತೆಯಾಗಿದ್ದಾಳೆ. ಶ್ರೀಕೃಷ್ಣನಗರದ ಕಾಲೇಜು ವಿದ್ಯಾರ್ಥಿನಿಯಾಗಿದ್ದ ರಿಶಿದಾ ಜೂನ್ 5ರಂದು ಬೆಳಗ್ಗೆ 8.30ರಿಂದ ಮನೆಯಿಂದ ಕಾಣೆಯಾಗಿದ್ದಾಳೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಸಂಬಂಧಿಕರು ಮತ್ತು ಸ್ನೇಹಿತರನ್ನೆಲ್ಲ ವಿಚಾರಿಸಿದ್ದಾರೆ. ಆದರೆ, ಏನು ಪ್ರಯೋಜನವಾಗಲಿಲ್ಲ. ಆದ್ದರಿಂದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ಎರಡು ಪ್ರಕರಣಗಳ ಸಂಬಂಧ ತನಿಖೆ ನಡೆಯುತ್ತಿದೆ.