ಕಾಮೋತ್ತೇಜಕ ಚುಚ್ಚುಮದ್ದು ನೀಡಿ 16ರ ಬಾಲಕಿಯನ್ನು ನಿರಂತರ ಅತ್ಯಾಚಾರ ಮಾಡಿದ ಕಾಮುಕ ಸೇರಿ ನಾಲ್ವರು ಪೊಲೀಸ್ ಬಲೆಗೆ!
Wednesday, June 9, 2021
ಮುಂಬೈ: ಕಾಮೋತ್ತೇಜಕ ಚುಚ್ಚುಮದ್ದು ಮತ್ತು ಮಾತ್ರೆಗಳನ್ನು ನೀಡುತ್ತಾ ಕಾಮುಕನೋರ್ವ 16 ವರ್ಷದ ಬಾಲಕಿಯನ್ನು ನಿರಂತರ ಅತ್ಯಾಚಾರ ನಡೆಸುತ್ತಿದ್ದ ಘಟನೆ ಮಹಾರಾಷ್ಟ್ರದ ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಬಾಲಕಿಯ ನೆರೆಮನೆಯ ವ್ಯಕ್ತಿಯೇ ಈ ಕೃತ್ಯ ಮಾಡಿರುವುದಾಗಿ ತಿಳಿದು ಬಂದಿದೆ. ಈತ ಬಾಲಕಿಗೆ ಕಾಮೋತ್ತೇಜಕ ಮಾತ್ರೆ ಅಥವಾ ಇಂಜೆಕ್ಷನ್ ಅನ್ನು ನೀಡಿ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ. ಬಾಲಕಿ ಇದನ್ನು ವಿರೋಧಿಸಿದರೆ ಆಕೆಯ ಅಶ್ಲೀಲ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಈ ವಿಚಾರ ಆರೋಪಿಯ ಹೆಂಡತಿಗೂ ತಿಳಿದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಈ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಜತೆಗೆ ಬಾಲಕಿಯ ಚಿಕ್ಕಪ್ಪ ಮತ್ತು ಆತನ 19 ವರ್ಷದ ಮಗನನ್ನೂ ಬಂಧಿಸಲಾಗಿದೆ. ಬಾಲಕಿಯ ಚಿಕ್ಕಪ್ಪ ಅತ್ಯಾಚಾರ ನಡೆಸುತ್ತಿದ್ದ ಕಾಮುಕನ ಊರಿಗೆ ಕರೆದುಕೊಂಡು ಹೋಗಿ ಹಣಕ್ಕಾಗಿ ಮದುವೆ ಮಾಡಲು ಹೊರಟಿದ್ದ ಎಂದು ತಿಳಿಸಲಾಗಿದೆ. ಇದೇ ಸಮಯದಲ್ಲಿ ಆತನ ಮಗ ಕೂಡಾ ಬಾಲಕಿಯೊಂದಿಗೆ ಸಂಬಂಧ ಬೆಳೆಸಿದ್ದಾಗಿಯೂ ದೂರಿನಲ್ಲಿ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟಯ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.