ಏಕಕಾಲದಲ್ಲಿ ಬರೋಬ್ಬರಿ 10 ಮಕ್ಕಳಿಗೆ ಜನ್ಮನೀಡಿದ ಮಹಿಳೆ!
Wednesday, June 9, 2021
ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯೊಬ್ಬರು ಏಕಕಾಲದಲ್ಲಿ 10 ಶಿಶುಗಳಿಗೆ ಜನ್ಮ ನೀಡಿ ಅಚ್ಚರಿಗೆ ಕಾರಣರಾಗಿದ್ದಾರೆ. ಈ ಮೂಲಕ ಅವರು, ಕಳೆದ ತಿಂಗಳು ಮೊರಾಕ್ಕೊದಲ್ಲಿ ಒಂಬತ್ತು ಮಕ್ಕಳಿಗೆ ಜನ್ಮ ನೀಡಿದ ಮಾಲಿಯನ್ ಹಲೀಮಾ ಸಿಸ್ಸೆ ಅವರ ಗಿನ್ನೆಸ್ ದಾಖಲೆಯನ್ನು ಮುರಿದಿದ್ದಾರೆ.
37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಎಂಬ ಈ ಮಹಿಳೆ ಎಂಟು ಮಕ್ಕಳಿಗೆ ಜನ್ಮ ನೀಡಲಿದ್ದಾರೆಂದು ಭಾವಿಸಲಾಗಿತ್ತು. ಆದರೆ, ಸೋಮವಾರ ರಾತ್ರಿ ಅವರು ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ.
ಗೋಸಿಯಮ್ ತಮಾರಾ ಸಿಥೋಲ್ಗೆ ಸಹಜ ಹೆರಿಗೆಯಾಗಿದೆ. ಅವರಿಗೆ ಈಗಾಗಲೇ ಆರು ವರ್ಷದ ಅವಳಿ-ಜವಳಿ ಮಕ್ಕಳಿದ್ದಾರೆ. ಈ ಮೂಲಕ ಅವರಿಗ 12 ಮಕ್ಕಳ ತಾಯಿಯಾಗಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೋಸಿಯಮ್ ತಮಾರಾ ಸಿಥೋಲ್ ಅವರ ಪತಿ ಟೆಬೊಹೊ ತ್ಸೊಟೆಟ್ಸಿ, 'ನನ್ನ ಪತ್ನಿ ಏಳು ತಿಂಗಳು ಏಳು ದಿನದ ಗರ್ಭಿಣಿಯಾಗಿದ್ದಳು. ಸೋಮವಾರ ಆಕೆ ಏಳು ಗಂಡು ಹಾಗೂ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಾನು ಸಂತೋಷ ಮತ್ತು ಭಾವುಕನಾಗಿದ್ದೇನೆ ಎಂದಿದ್ದಾರೆ.