ಮಂಗಳೂರು: ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ತಾಯಿ ಸಾವು; ಹುಟ್ಟುತ್ತಲೆ ಅಮ್ಮನನ್ನು ಕಳೆದುಕೊಂಡ ಕಂದಮ್ಮಗಳು
Monday, May 10, 2021
ಮಂಗಳೂರು; ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮಹಿಳೆಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟ ದಾರುಣ ಘಟನೆ ಸುಳ್ಯದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಮೂಲೆಮನೆ ನಿವಾಸಿ ವಿಶ್ವನಾಥ ಗೌಡರ ಪುತ್ರಿ ಸಾವನ್ಮಪ್ಪಿದವರು. ಈಶ್ವರಮಂಗಲದ ಮುಂಡ್ಯ ಕೆಮ್ಮತ್ತಡ್ಕ ಮನೋಜ್ ರನ್ನು ಅವರು ವಿವಾಹವಾಗಿದ್ದರು.
ಪೂಜಿತಾರವರು ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಬೆಳಿಗ್ಗೆ ಅವರಿಗೆ ನಾರ್ಮಲ್ ಡೆಲಿವರಿ ಆಗಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆರೋಗ್ಯವಾಗಿಯೇ ಇದ್ದ ಅವರಿಗೆ ಮಧ್ಯಾಹ್ನ ವೇಳೆಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು. ಸಂಜೆಯ ವೇಳೆಗೆ ಪೂಜಿತಾ ಸ್ವಲ್ಪ ಚೇತರಿಸಿಕೊಂಡರಾದರೂ ತಡರಾತ್ರಿಯ ವೇಳೆ ಮತ್ತೆ ರಕ್ತಸ್ರಾವ ಉಂಟಾಗಿ ಅವರು ಮೃತಪಟ್ಟಿದ್ದಾರೆ.
ಇನ್ನು ಅವಳಿ ಮಕ್ಕಳು ಆರೋಗ್ಯವಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿದ್ದಾರೆ. ಇಬ್ಬರು ಕಂದಮ್ಮಗಳು ಹುಟ್ಟುತ್ತಲೆ ತಾಯಿಯನ್ನು ಕಳೆದುಕೊಂಡಿದೆ.