
ಮಂಗಳೂರು; ಕಡಬದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ- 14 ವರ್ಷದ ಹುಡುಗಿ ಈಗ ಗರ್ಭಿಣಿ!
Monday, May 10, 2021
ಮಂಗಳೂರು; ಕಡಬ ತಾಲೂಕಿನ ಆತೂರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಅತ್ಯಾಚಾರ ಇತ್ತೀಚಿಗೆ ನಡೆದಿದ್ದು ಬಾಲಕಿ ಇದೀಗ ಗರ್ಭಿಣಿ ಎಂದು ತಿಳಿದುಬಂದಿದೆ.
ಈಕೆ 14 ವರ್ಷ ಪ್ರಾಯದ ಬಾಲಕಿಯಾಗಿದ್ದಾಳೆ. ಈ ಬಾಲಕಿಗೆ ಆಕೆಯ ಸಂಬಂಧಿಕನಾದ ಶೇಖರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಆರೋಪ ಕೇಳಿಬಂದಿದೆ. ಈತ ಸಕಲೇಶಪುರ ನಿವಾಸಿಯಾಗಿದ್ದಾನೆ.
ಬಾಲಕಿಯನ್ನು ಕಡಬ ತಾಲೂಕಿನ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿದಾಗ ಏಳು ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದ್ದು ಈ ಬಗ್ಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಯವರು ಕಡಬ ಠಾಣೆಗೆ ದೂರು ನೀಡಿದ್ದಾರೆ.ಕಡಬ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.