ಲಾಕ್ ಡೌನ್ ನಲ್ಲಿ ವಾಹನ ಕೊಂಡೋಗಬಹುದ?- ಜನರ ಗೊಂದಲಕ್ಕೆ ಸೃಷ್ಟೀಕರಣ ನೀಡಿದ್ದಾರೆ ಮಂಗಳೂರು ಪೊಲೀಸ್ ಕಮೀಷನರ್
Sunday, May 9, 2021
ಮಂಗಳೂರು: ರಾಜ್ಯಾದ್ಯಂತ ಕೊರೊನಾ ಲಾಕ್ ಡೌನ್ ಆರಂಭವಾಗಲಿದ್ದು ಜನರು ಸಾಕಷ್ಟು ಗೊಂದಲದಲ್ಲಿದ್ದಾರೆ. ಜನರು ದಿನಸಿ ವಸ್ತುಗಳ ಖರೀದಿಗೆ ವಾಹನ ಕೊಂಡೋಗಬಹುದ ಅಥವಾ ನಡೆದುಕೊಂಡು ಹೋಗಬೇಕ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ವಿಡಿಯೋ ಮೂಲಕ ಸೃಷ್ಟೀಕರಣ ನೀಡಿದ್ದಾರೆ.
ದಿನಸಿ ಸಾಮಾಗ್ರಿಗಳನ್ನು ಸ್ಥಳೀಯವಾಗಿ ಖರೀದಿಸಬೇಕು. ಅವಶ್ಯಕತೆ ಇದ್ದರೆ ಖರೀದಿಗೆ 6-9 ಗಂಟೆ ವರೆಗೆ ವಾಹನ ಬಳಸಬಹುದು. ಹತ್ತು ಗಂಟೆಯೊಳಗೆ ಹಿಂತಿರುಗಬೇಕು ಎಂದು ತಿಳಿಸಿದ್ದಾರೆ. ಆದರೆ ಆಹಾರ ಪಾರ್ಸೆಲ್ ತರಲು ವಾಹನ ಉಪಯೋಗಿಸುವಂತಿಲ್ಲ ಎ ತಿಳಿಸಿದ್ದಾರೆ.