
ಮಂಗಳೂರು: ಭಾರತದ ನೆರವಿಗೆ ಬಂದ ಕತಾರ್, ಕುವೈಟ್: ಕುಡ್ಲ ಪೋರ್ಟಿಗೆ ಬಂತು ಆಕ್ಷಿಜನ್
ಮಂಗಳೂರು: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಂಕಷ್ಟಕ್ಕೊಳಗಾಗಿ ಆಕ್ಷಿಜನ್ ಕೊರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕತಾರ್ ಮತ್ತು ಕುವೈಟ್ ದೇಶಗಳು ನೆರವಿಗೆ ಬಂದಿದ್ದು ಇಂದು 54 ಟನ್ ಆಕ್ಷಿಜನ್ ನ್ನು ಮಂಗಳೂರಿಗೆ ಕಳುಹಿಸಿಕೊಟ್ಟಿದೆ.
ಮಂಗಳೂರು ಎನ್ ಎಂ ಪಿ ಟಿ ಗೆ ಇಂದು ಮಧ್ಯಾಹ್ನ ಎರಡು ಗಂಟೆಗೆ ಹಡಗಿನ ಮೂಲಕ ಆಕ್ಷಿಜನ್ ತಲುಪಿದೆ. ಐ ಎನ್ ಎಸ್ ಕೋಲ್ಕತ್ತ ಎಂಬ ಹಡಗಿನ ಮೂಲಕ 54 ಟನ್ ಆಕ್ಷಿಜನನ್ನು ಕತಾರ್ ಮತ್ತು ಕುವೈಟ್ ಕಳುಹಿಸಿಕೊಟ್ಟಿದೆ. ತಲಾ 27 ಮೆಟ್ರಿಕ್ ಟನ್ ನ್ನು ಎರಡು ಕಂಟೈನರ್ ಗಳಲ್ಲಿ ತುಂಬಿಸಿ ಕಳುಹಿಸಲಾಗಿದ್ದು , ಇದರ ಜೊತೆಗೆ 400 ಆಕ್ಷಿಜನ್ ಸಿಲಿಂಡರ್ , 47 ಆಕ್ಷಿಜನ್ ಕಾನ್ಸಂಟ್ರೇಟರ್ ಗಳನ್ನು ಕಳಹಿಸಿಕೊಟ್ಟಿದೆ.