
ಆತನಿಗೆ ಅದೊಂದು ಆಶೆಯಿತ್ತು..'ಆ' ಕಾರಣಕ್ಕಾಗಿ ಮದುವೆಯಾದ ಬ್ರಹ್ಮಚಾರಿ: ಆದರೂ ಅದು ನೆರವೇರಲಿಲ್ಲ
Friday, May 7, 2021
ಲಖ್‌ನೌ: ಗ್ರಾಮಪಂಚಾಯತ್ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಕ್ಷೇತ್ರದಿಂದ ಕಣಕ್ಕಿಳಿಸುವ ಸಲುವಾಗಿಯೇ 45 ವರ್ಷದ ಬ್ರಹ್ಮಚಾರಿಯೋರ್ವ ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಬಲ್ಲಿಯಾ ಜಿಲ್ಲೆಯ ಚಪ್ರಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 45 ವರ್ಷದ ಹಾಥಿ ಸಿಂಗ್ ತಯಾರಿ ನಡೆಸಿದ್ದರು. ಆದರೆ ಈ ವಾರ್ಡ್ ಮಹಿಳಾ ಮೀಸಲಾತಿ ಆಗಿದ್ದರಿಂದ ಆತನ ಆಸೆಗೆ ತಣ್ಣೀರು ಬಿದ್ದಿತ್ತು. ಆದರೂ ಹಠ ಬಿಡದ ಹಾಥಿ ಸಿಂಗ್ ಚುನಾವಣೆಯಲ್ಲಿ ಕಣಕ್ಕಿಳಿಸಲೆಂದೇ ಓರ್ವ ಮಹಿಳೆಯನ್ನು ಮದುವೆಯಾಗಿದ್ದ. ಬಳಿಕ ಆಕೆಯನ್ನು ಆ ವಾರ್ಡ್ ನಿಂದ ಕಣಕ್ಕೆ ಇಳಿಸಿದ್ದ. ಆದರೆ ಫಲಿತಾಂಶದ ದಿನ ಮಾತ್ರ ಹಾಥಿ ಸಿಂಗ್ ಗೆ ನಿರಾಸೆ ಕಾದಿತ್ತು. ಯಾಕೆಂದರೆ ಆತನ ಪತ್ನಿ ಚುನಾವಣೆಯಲ್ಲಿ ಸೋತಿದ್ದಳು.
ಒಟ್ಟಿನಲ್ಲಿ ಚುನಾವಣೆಗೆಂದೇ ಮದುವೆಯಾಗಿದ್ದ ಬ್ರಹ್ಮಚಾರಿಗೆ ಸದ್ಯ ನಿರಾಸೆ ಕಾದಿದೆ.