ಕೊನೆಗೂ ಕ್ಷಮೆ ಯಾಚಿಸಿದ ತೇಜಸ್ವೀ ಸೂರ್ಯ- ನನಗೆ ನಿಮ್ಮ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದ ಬಿಜೆಪಿ ಮುಖಂಡ
Friday, May 7, 2021
ಬೆಂಗಳೂರು: ಬೆಡ್ ಬ್ಲಾಕಿಂಗ್ ಪ್ರಕರಣ ಸಂಬಂಧ ವಾರ್ ರೂಂ ಗೆ ಅಲ್ಲಿನ ಮುಸ್ಲಿಂ ಸಿಬ್ಬಂದಿಗಳ ಹೆಸರನ್ನು ಮಾತ್ರ ಕೂಗಿರುವ ಪ್ರಕರಣ ಸಂಬಂಧ ಕೊನೆಗೂ ಸಂಸದ ತೇಜಸ್ವಿ ಸೂರ್ಯ ಕ್ಷಮೆ ಯಾಚಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೊಟೋ ಆದರಿಸಿ ಬಿಟಿವಿ ವರದಿ ಮಾಡಿದೆ.
ಈ ಕುರಿತಾಗಿ ನಿನ್ನೆ ಸಂಜೆ ಖುದ್ದು ವಾರ್ ರೂಂ ಗೆ ತೆರಳಿದ ಸಂಸದರು, ಅಲ್ಲಿನ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ್ದು, 'ನನಗೆ ನೀಡಲಾಗಿರುವ ಲಿಸ್ಟ್ ನ್ನು ಓದಿದ್ದೇನೆಯೇ ಹೊರತು ನನಗೆ ನಿಮ್ಮ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ನನ್ನ ವರ್ತನೆಯಿಂದ ನಿಮಗೆ ಅಥವಾ ನಿಮ್ಮ ಸಮುದಾಯಕ್ಕೆ ನೋವಾಗಿದ್ದಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದವರು ಹೇಳಿದ್ದಾರೆ.
ನಾನು ಉದ್ದೇಶ ಪೂರ್ವಕವಾಗಿ ಏನನ್ನೂ ಮಾಡಿಲ್ಲ. ಬೆಡ್ ಬ್ಲಾಕಿಂಗ್ ಕುರಿತ ತನಿಖೆಯಷ್ಟೇ ನನ್ನ ಗುರಿಯಾಗಿತ್ತು ಎಂದು ತೇಜಸ್ವೀ ಸೂರ್ಯ ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಎರಡು ದಿನಗಳ ಹಿಂದೆ ಬೆಂಗಳೂರಿನ ಬಿಬಿಎಂಪಿ ವಾರ್ ರೂಂಗೆ ತೆರಳಿ ಅಕ್ರಮ ಬೆಡ್ ಹಂಚಿಕೆ ಕುರಿತು ಗುಡುಗಿದ್ದರು. ಈ ವೇಳೆ ಅಲ್ಲಿನ ಕೆಲ ಮುಸ್ಲಿಂ ಸಿಬ್ಬಂದಿಗಳ ಹೆಸರನ್ನು ಕೂಗಿ ಇದೇನು ಮದ್ರಸವಾ ಎಂದು ಪ್ರಶ್ನಿಸಿ ವಿವಾದಕ್ಕೀಡಾಗಿದ್ದರು.