CCTV VIDEO; ಮಂಗಳೂರಿನಲ್ಲಿ ನಡೆಯಿತು ಭೀಕರ ಅಪಘಾತ- ಕೆಟಿಎಂ ಬೈಕ್ ಸವಾರ ಸಾವು
Friday, May 7, 2021
ಮಂಗಳೂರು; ಮಂಗಳೂರಿನ ಪದವಿನಂಗಡಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕೆಟಿಎಂ ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಇಂದು ಮುಂಜಾನೆ ಈ ಅಪಘಾತ ನಡೆದಿದೆ. ನೀರುಮಾರ್ಗದಲ್ಲಿ ಕೆಲಸದಲ್ಲಿರುವ ಪ್ರಶಾಂತ್ ಕೆಟಿಎಂ ಬೈಕ್ ನಲ್ಲಿ ವೇಗದಲ್ಲಿ ಬರುತ್ತಿದ್ದ ವೇಳೆ ನಿಂತಿದ್ದ ಸ್ಕೂಟರ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಪಕ್ಕದ ಅಂಗಡಿಯ ಎದುರಿನಲ್ಲಿದ್ದ ಕೂಲ್ ಡ್ರಿಂಕ್ಸ್ ಬಾಟಲಿ ಬಾಕ್ಸ್ ಗೆ ಗುದ್ದಿದ್ದಾರೆ.
ಈ ವೇಳೆ ಬೈಕ್ ನಿಂದ ಎಸೆಯಲ್ಪಟ್ಟು ಆತ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಇದೇ ವೇಳೆ ಅಪಘಾತದಿಂದ ಬಿದ್ದ ಕೆಟಿಎಂ ಬೈಕ್ ಗೆ ಚಲಿಸುತ್ತಿದ್ದ ಬೈಕ್ ಡಿಕ್ಕಿಯಾಗಿದ್ದು ಅವರಿಗೆ ಸಣ್ಣ ಪುಟ್ಟ ಗಾಯವಾಗಿದೆ.