ಈ ಬೆಟ್ಟದಲ್ಲಿ ಅಪರಿಚಿತ ಯಾರ ಜೊತೆಗೂ ಲೈಂಗಿಕ ಕ್ರಿಯೆ ಮಾಡಬಹುದಂತೆ- ಬೆಟ್ಟದಲ್ಲಿ ಕಾಮ ಉತ್ಸವಕ್ಕೆ ಕಾರಣವೇನು ಗೊತ್ತಾ?
Friday, May 7, 2021
ಜಕಾರ್ತ: ಇಂಡೋನೇಷ್ಯಾದ ಜಾವಾ ದ್ವೀಪದ ಕೆಮುಕಸ್ ಬೆಟ್ಟದ ದೇಗುಲದಲ್ಲಿ ವಿಶಿಷ್ಟ ಆಚರಣೆ ಇದೆ.
ಈ ಬೆಟ್ಟದಲ್ಲಿರುವ ದೇಗುಲದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಭಕ್ತರು ಇಲ್ಲಿ ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ಹೊಂದಬೇಕಂತೆ. ಇಲ್ಲಿ ನಿರಂತರ ಒಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಅವರಿಗೆ ಒಳಿತಾಗುತ್ತದೆ ಎಂಬ ನಂಬಿಕೆಯೂ ಇದೆ.
ಇಲ್ಲಿನ ಉತ್ಸವದ ಸಂದರ್ಭದಲ್ಲಿ ಈ ಬೆಟ್ಟಕ್ಕೆ ಭಕ್ತರು ಬರಿಗಾಲಲ್ಲಿ ಬಂದು, ಬಳಿಕ ಇಲ್ಲಿ ಸಿಕ್ಕ ಯಾರಾದರೂ ಅಪರಿಚತ ಜೋಡಿಯೊಂದಿಗೆ ಸಂಪರ್ಕ ನಡೆಸುತ್ತಾರೆ.
ಇಲ್ಲಿನ ಈ ಆಚರಣೆಗೂ ಒಂದು ಹಿನ್ನೆಲೆ ಇದೆ. ಜಾವಾ ರಾಜನ ಮಗ ತನ್ನ ಮಲತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ರಾಜ ಅವರಿಬ್ಬರನ್ನು ಅರಮನೆಯಿಂದ ಬಹಿಷ್ಕರಿಸುತ್ತಾನೆ. ಈ ಹಿನ್ನೆಲೆಯಲ್ಲಿ ಬೆಟ್ಟದ ಮೇಲೇರಿ ಬಂದ ಮಗ ಮತ್ತು ಆತನ ಮಲತಾಯಿ ಇಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಇದನ್ನು ಗಮನಿಸಿದ ರಾಜನ ಭಟರು ಇಬ್ಬರನ್ನೂ ಖಡ್ಗದಿಂದ ಖಡಿದು ಕೊಲೆ ಮಾಡುತ್ತಾರೆ. ಇವರಿಬ್ಬರ ಸ್ಮರಣಾರ್ಥ ಈ ಬೆಟ್ಟದಲ್ಲಿ ಊರವರು ಒಂದು ದೇವಸ್ಥಾನ ನಿರ್ಮಿಸುತ್ತಾರೆ. ಇವರಿಬ್ಬರ ಸ್ಮರಣಾರ್ಥ ಇಲ್ಲಿ ವರ್ಷದಲ್ಲಿ 35 ದಿನಗಳ ಉತ್ಸವ ನಡೆಯುತ್ತದೆ