ಕರೀನಾಗೆ ಶಾರೂಕ್‌ನ ಅದರ ಮೇಲೆ ಕಣ್ಣು- ಆಕೆಗೆ ಮತ್ತೂ ಏನೆಲ್ಲಾ ಆಸೆ ಇದೆ ಗೊತ್ತಾ.....
Friday, May 7, 2021
ಮುಂಬೈ: ಆಸೆಗಳು ಎಲ್ಲರಿಗೂ ಇರುತ್ತೆ ಇದರಿಂದ ಸೆಲೆಬ್ರಿಟಿಗಳೂ ಹೊರತಲ್ಲ. ಆದರೆ ಸಂದರ್ಶನವೊಂದರಲ್ಲಿ ನಟಿ ಕರೀನಾಳ ಬಳಿ ಆಕೆಯ ಆಸೆಯ ಬಗ್ಗೆ ಕೇಳಿದಾಗ ಭಿನ್ನ ಅಭಿರುಚಿಯನ್ನೇ ವ್ಯಕ್ತಪಡಿಸಿದ್ದಾಳೆ.
ಬಾಲಿವುಡ್ ಸೆಲೆಬ್ರಿಟಿಗಳಿಂದ ನೀವು ಏನನ್ನು ಬಯಸುತ್ತೀರಿ ಎಂದು ಕೆಲವರ ಹೆಸರನ್ನು ಕೇಳಿದಾಗ ಆಕೆ ಒಂದು ಉದ್ದದ ಪಟ್ಟಿಯನ್ನೇ ಮುಂದಿಟ್ಟಿದ್ದಾಳೆ.
ನಟ ಶಾರೂಖ್ ಖಾನ್ ಲಂಡನ್ ನ ಬಂಗಲೆ ಮೇಲೆ ಕಣ್ಣಿಟ್ಟಿರುವ ಕರೀನಾ ಸಲ್ಮಾನ್ ಖಾನ್ ನಂತೆ ಅಭಿಮಾನಿಗಳಿರಬೇಕೆಂಬ ಆಸೆಯನ್ನು ಹೊಂದಿದ್ದಾರೆ.
ಇನ್ನು ಪ್ರಿಯಾಂಕ ಛೋಪ್ರಾ ಅವರ ಧ್ವನಿ, ದೀಪಿಕಾ ಪಡುಕೋಣೆಯ ನಗು, ಆಲಿಯಾ ಭಟ್ ಪ್ರತಿಭೆ ನನಗೂ ಬೇಕೆಂಬ ಆಸೆ ಇದೆ ಎಂದು ಕರೀನಾ ಸಂದರ್ಶನದಲ್ಲಿ ವಿವರಿಸಿದ್ದಾರೆ.
ತನ್ನ ಪತಿ ಸೈಫ್ ಅಲೀ ಖಾನ್ ಭಾರೀ ಪ್ರತಿಭಾವಂತರಾಗಿದ್ದು ಅವರ ಮೆದುಳು ನನಗೆ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದು ಕರೀನಾ ಆಸೆ ವ್ಯಕ್ತಪಡಿಸಿದ್ದಾಳೆ.