-->

ಹಡಗಿನ ಮುಂದೆ ನಿಂತು ಫೋಟೋ ತೆಗೆದುಕೊಳ್ಳುವುದು ದೊಡ್ಡ ಸಾಧನೆಯೆ? - ಬಿಜೆಪಿ ಜನಪ್ರತಿನಿಧಿಗಳನ್ನು ಕುಟುಕಿದ ಖಾದರ್

ಹಡಗಿನ ಮುಂದೆ ನಿಂತು ಫೋಟೋ ತೆಗೆದುಕೊಳ್ಳುವುದು ದೊಡ್ಡ ಸಾಧನೆಯೆ? - ಬಿಜೆಪಿ ಜನಪ್ರತಿನಿಧಿಗಳನ್ನು ಕುಟುಕಿದ ಖಾದರ್

ಮಂಗಳೂರು: ಕೋವಿಡ್ ನಿಂದಾಗಿ ರಾಜ್ಯದ ಆರೋಗ್ಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಜಿಲ್ಲೆಯಿಂದ ಆಯ್ಕೆಯಾದ ಜನ ಪ್ರತಿನಿಧಿಗಳು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವ ರೀತಿ ಜಿಲ್ಲೆಯ ಜನತೆಗೆ ನೆರವಾಗಿದ್ದಾರೆ ಎಂದು ಪ್ರಶ್ನಿಸಿರುವ ಮಾಜಿ ಆರೋಗ್ಯ ಸಚಿವ ಯುಟಿ ಖಾದರ್, ಆಕ್ಸಿಜನ್ ಹೊತ್ತು ತಂದ ಹಡಗಿನ ಮುಂದೆ ನಿಂತು ಫೋಸ್ ಕೊಟ್ಟದ್ದೇ ಇವರ ಸಾಧನೆಯೇ ಎಂದು ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಾದರ್, ಜಿಲ್ಲೆಯಲ್ಲಿ ಹಲವು ವೈದ್ಯಕೀಯ ಸಮಸ್ಯೆಗಳಿವೆ. ಇದನ್ನು ಇಲ್ಲಿನ ಜನಪ್ರತಿನಿಧಿಗಳು ಹೇಗೆ ನಿಭಾಯಿಸಿದ್ದಾರೆ ಎಂದು ಪ್ರಶ್ನಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರು ನರ್ಸ್, ಆಶಾ ಕಾರ್ಯಕರ್ತೆಯರು, 108 ಆಂಬುಲೆನ್ಸ್ ಡ್ರೈವರ್‌ಗಳಿಗೆ ವೇತನವಾಗಿಲ್ಲ. ಅದನ್ನು ದೊರಕಿಸುವ ಪ್ರಯತ್ನ ಅವರು ಮಾಡಲಿ ಎಂದರು.

ಇನ್ನು 14 ದಿನಗಳ ಲಾಕ್‌ಡೌನ್ ಕುರಿತಂತೆ ಪ್ರತಿಕ್ರಯಿಸಿದ ಖಾದರ್, ಇದೊಂದು ಪುರ್ವ ಯೋಜನೆ ಇಲ್ಲದ ಲಾಕ್‌ಡೌನ್. ಇದರಿಂದ ಜನರಿಗೆ ಸಮಸ್ಯೆಯೇ ಹೊರತು ಯಾವುದೇ ಲಾಭವಿಲ್ಲ ಎಂದರು. ಲಾಕ್‌ಡೌನ್ ನಿಂದಾಗಿ ಜನ ಪರದಾಡುವಂತಾಗಿದ್ದು, ಜನರಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಸರಕಾರದ ಮೇಲಿದೆ ಎಂದು ಖಾದರ್ ಹೇಳಿದರು

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99