ಸೇವೆಗೆ ಬಂದ ಮಹಿಳೆಯರನ್ನು ಆಶ್ರಮದಲ್ಲೇ ಅತ್ಯಾಚಾರಗೈದ ದೇವ ಮಾನವ.....
Saturday, May 8, 2021
ಜೈಪುರ: ಸೇವೆಯ ಹಿನ್ನೆಲೆಯಲ್ಲಿ ಆಶ್ರಯದಲ್ಲಿ ತಂಗಿದ್ದ ಬರೋಬ್ಬರಿ ನಾಲ್ವರು ಮಹಿಳೆಯರ ಮೇಲೆ ಸ್ವಯಂಘೋಷಿತ ದೇವ ಮಾನವನೊಬ್ಬ ಅತ್ಯಾಚಾರ ನಡೆಸಿದ್ದಾನೆ. ಘಟನೆ ನಡೆದಿರುವುದು ಜೈಪುರದ ತಪಸ್ವೀ ಆಶ್ರಮದಲ್ಲಿ.
ಶೈಲೇಂದ್ರ ಗುಪ್ತಾ ಅತ್ಯಾಚಾರ ನಡೆಸಿರುವ ದೇವ ಮಾನವ. ಈತನ ಆಶ್ರಮಕ್ಕೆ ಸತ್ಸಂಗ ಸೇವೆಗೆಂದು ನಾಲ್ವರು ಮಹಿಳೆಯರು ಬಂದಿದ್ದರು. ಸೇವೆಯ ಹಿನ್ನೆಲೆಯಲ್ಲಿ ಮಹಿಳೆಯರು ಆಶ್ರಮದಲ್ಲೇ ತಂಗಿದ್ದರು. ಈ ವೇಳೆ ಶೈಲೇಂದ್ರ ಗುಪ್ತಾ ಅವರನ್ನು ಅತ್ಯಾಚಾರ ಮಾಡಿದ್ದಾನೆ. ನಾಲ್ವರು ಮಹಿಳೆಯರ ಪೈಕಿ ಮೂವರೂ ಒಂದೇ ಕುಟುಂಬದವರಾಗಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ದೂರು ನೀಡಿದ್ದಾರೆ.