ಮಂಗಳೂರು; ಲಾಡ್ಜ್ ಗೆ ಕೊಂಡೋಯ್ದು 17 ವರ್ಷದ ಯುವತಿಯ ಅತ್ಯಾಚಾರ
Saturday, May 8, 2021
ಮಂಗಳೂರು; 17 ವರ್ಷದ ಯುವತಿಯೊಬ್ಬಳನ್ನು ಲಾಡ್ಜ್ ಗೆ ಕೊಂಡೊಯ್ದು ಅತ್ಯಾಚಾರ ವೆಸಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಕಡಬ ತಾಲೂಕಿನ ಏನೆಕಲ್ಲಿನ 17 ವರ್ಷದ ಯುವತಿಯೊಬ್ಬಳನ್ನು ಕಡಬದ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ . ಅತ್ಯಾಚಾರವೆಸಗಿದ ಗುತ್ತಿಗಾರಿನ ಯುವಕನ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಸುಬ್ರಹ್ಮಣ್ಯ ಪೋಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಗುತ್ತಿಗಾರು ಮೆಟ್ಟಿನಡ್ಕದ ಅರುಣ್ ಗೌಡ ಎಂಬ 22 ವರ್ಷದ ಯುವಕ ಈ ಕೃತ್ಯ ಎಸಗಿದ್ದಾನೆ. ಈತ ಏನೆಕಲ್ಲು ಗ್ರಾಮದ 17 ವರ್ಷದ ದಲಿತ ಯುವತಿಯನ್ನು ಕಳೆದ ಮಾರ್ಚ್ ತಿಂಗಳಲ್ಲಿ ಕಡಬದ ಲಾಡ್ಜ್ ಒಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆಂದು ಆರೋಪಿಸಲಾಗಿದೆ.ಈಗ ಯುವತಿ ಗರ್ಭಿಣಿ ಎಂದು ತಿಳಿದುಬಂದಿದ್ದು ಸುಬ್ರಹ್ಮಣ್ಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.