ಕೊರೊನಾಗೆ ಭಾರತದಲ್ಲೆ ಸಿದ್ದವಾಯ್ತು ಔಷಧ: ಇದು ಕೆಲಸ ಮಾಡುವುದು ಹೇಗೆ ಗೊತ್ತಾ?
ನವದೆಹಲಿ: ಕೊರೊನಾ ವೈರಸ್ ನಿಂದ ಆತಂಕಗೊಂಡಿರುವ ಜನತೆಗೆ ನೆಮ್ಮದಿ ನೀಡುವ ಸುದ್ದಿಯಿದು. ನಮ್ಮ ದೇಶದಲ್ಲಿ ಕೊರೊನಾ ಮಹಾಮಾರಿಯಿಂದ ಆಕ್ಷಿಜನ್ ಗಾಗಿ ಸಂಕಷ್ಟಪಡುವವರ ನೆರವಿಗೆ ಬರುವಂತಹ ಔಷಧಿಯನ್ನು ನಮ್ಮ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಅಭಿವೃದ್ದಿಪಡಿಸಿದೆ.
ಈ ಕೊರೊನಾ ನಿರೋಧಕ ಔಷಧಿಯನ್ನು ತುರ್ತು ಬಳಕೆಗೆ ಅವಕಾಶವನ್ನು ನೀಡಲಾಗಿದ್ದು ಇದರಿಂದ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. DRDO ಪ್ರಯೋಗಾಲಯದ ಇನ್ಸಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ ಮತ್ತು ಹೈದರಾಬಾದಿನ ಡಾ. ರೆಡ್ಡಿ ಲ್ಯಾಬ್ ರೋಟಿರೀಸ್ ಸಹಭಾಗಿತ್ವದಲ್ಲಿ ಈ ಔಷಧವನ್ನು ಅಭಿವೃದ್ದಿಪಡಿಸಲಾಗಿದೆ. ಇದನ್ನು 2- ಡಿಯೋಕ್ಷಿ- ಡಿ- ಗ್ಲುಕೋಸ್ ಎಂದು ಕರೆಯಲಾಗಿದೆ. ಈಗಾಗಲೆ ಕೊರೊನಾ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಗೆ ಪೂರಕವಾಗಿ ಇದನ್ನು ನೀಡಬಹುದಾಗಿದೆ.
ಈ ಔಷಧ ಕೆಲಸ ಮಾಡುವುದು ಹೀಗೆ...
DRDO ತಯಾರಿಸಿದ ಈ ಔಷಧವು ಪೌಡರ್ ರೂಪದಲ್ಲಿ ಇರಲಿದೆ. ನೀರಿನಲ್ಲಿ ಸುಲಭವಾಗಿ ಕರಗುವ ಈ ಪೌಡರನ್ನು ನೀರಿಗೆ ಹಾಕಿ ಕೊರೊನಾ ಸೋಂಕಿತರು ಸೇವಿಸಬಹುದಾಗಿದೆ. ಈ ಔಷಧ ದೇಹ ಸೇರಿದ ಕೂಡಲೇ ಈ ಔಷಧವು ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ಈ ಔಷಧ ದೇಹ ಸೇರಿದ ಕೂಡಲೇ ಕೊರೊನಾ ವೈರಸ್ ಭಾಧಿತವಾಗಿರುವ ದೇಹದ ಕೋಶ ಪತ್ತೆ ಮಾಡಿ ವೈರಸ್ ಹೆಚ್ಚಳವಾಗದಂತೆ ತಡೆಯುತ್ತದೆ. ಕೊರೊನಾ ವೈರಸ್ ಸಂತಾನೋತ್ಪತ್ತಿ ಮಾಡದಂತೆ ತಡೆಯುವ ಇದು ದೇಹದ ಇತರ ಭಾಗಗಳಿಗೆ ಹಬ್ಬದಂತೆ ರಕ್ಷಾ ಕವಚ ನಿರ್ಮಿಸುತ್ತದೆ. ದೇಹದೊಳಗೆ ವೈರಸ್ ಬೆಳವಣಿಗೆಯಾಗದಂತೆ ತಡೆಯುವ ಕಾರ್ಯ ಮಾಡಲಿದೆ. ಇದು ಕೊರೊನಾದಿಂದ ಆರೋಗ್ಯ ಹದೆಗೆಟ್ಟು ಆಸ್ಪತ್ರೆಗೆ ದಾಖಲಾಗಿರುವ ಕೊರೊನಾ ಸೋಂಕಿತರ ಶೀಘ್ರ ಚೇತರಿಕೆಗೆ ಅನುಕೂಲವಾಗಲಿದೆ.ಪ್ರಮುಖವಾಗಿ ಆಕ್ಷಿಜನ್ ಬೇಕಾದವರಿಗೆ ಸ್ವತಂತ್ರ ಉಸಿರಾಟ ನಡೆಸಲು ಅನುಕೂಲ ಮಾಡಿಕೊಡಲಿದೆ.
An anti-COVID-19 therapeutic application of the drug 2-deoxy-D-glucose (2-DG) has been developed by INMAS, a lab of DRDO, in collaboration with Dr Reddy’s Laboratories, Hyderabad. The drug will help in faster recovery of Covid-19 patients. https://t.co/HBKdAnZCCP pic.twitter.com/8D6TDdcoI7
— DRDO (@DRDO_India) May 8, 2021
ಭಾರತದಲ್ಲೆ ತಯಾರಿಸಬಹುದು:
ಈ ಔಷಧಿಯನ್ನು ಭಾರತದಲ್ಲೆ ತಯಾರಿಸಲು ಬೇಕಾದ ಕಚ್ಚಾವಸ್ತುಗಳು ನಮ್ಮಲೆ ಲಭ್ಯವಿದೆ. ಸಾಮಾನ್ಯ ಅಣುಗಳು ಮತ್ತು ಗ್ಲುಕೋಸ್ ನ ಧಾತುವಿನಿಂದ ಇದನ್ನು ಸಿದ್ದಪಡಿಸಲಾಗಿದ್ದು ಭಾರತದಲ್ಲೆ ಇದನ್ನು ಭಾರಿ ಪ್ರಮಾಣದಲ್ಲಿ ತಯಾರಿಸಲು ಯಾವುದೇ ತೊಡಕಿಲ್ಲ.
ಕರ್ನಾಟಕದಲ್ಲಿಯೂ ಪ್ರಯೋಗ ಮಾಡಲಾಗಿತ್ತು..
DRDO ಇದರ ಮೊದಲ ಹಂತದ ಕ್ಲಿನಿಕಲ್ ಪ್ರಯೋಗವನ್ನು 2020 ಡಿಸೆಂಬರ್ ನಲ್ಲಿ ಆರಂಭಿಸಲಾಗಿತ್ತು. ಎರಡನೇ ಹಂತದ ಪ್ರಯೋಗವನ್ನು ಅಕ್ಟೋಬರ್ ನಲ್ಲಿ ದೇಶದ 11 ಆಸ್ಪತ್ರೆಯಲ್ಲಿ ಮಾಡಿ ಪೂರ್ಣಗೊಳಿಸಲಾಗಿತ್ತು. ಮೂರನೇ ಹಂತದ ಪ್ರಯೋಗವನ್ನು 2020 ಡಿಸೆಂಬರ್ ನಿಂದ 2021 ಮಾರ್ಚ್ ವರೆಗೆ ದೇಶಾದಾದ್ಯಂತ 27 ಕೊರೊನಾ ಆಸ್ಪತ್ರೆಗಳಲ್ಲಿ ನಡೆಸಲಾಗಿತ್ತು. ಕರ್ನಾಟಕ, ಆಂದ್ರಪ್ರದೇಶ, ಉತ್ತರಪ್ರದೇಶ ಸೇರಿ 10 ರಾಜ್ಯಗಳಲ್ಲಿ ಇದನ್ನು ಪ್ರಯೋಗ ನಡೆಸಲಾಗಿತ್ತು.