7 ಲಕ್ಷ ಖರ್ಚು ಮಾಡಿ ಯುವತಿಯನ್ನು ಕರೆತಂದರೂ ಉದ್ಯಮಿ ಮಗನಿಗೆ ಆಕೆ ಜೊತೆ ಕಾಮದಾಟ ನಡೆಸಲು ಸಾಧ್ಯವಾಗಿಲ್ಲ - ಏನಾಯಿತು ಗೊತ್ತಾ?
Sunday, May 9, 2021
ಲಕ್ನೋ: ಲೈಂಗಿಕ ಚಟುವಟಿಕೆ ನಡೆಸಲೆಂದು ಥೈಲ್ಯಾಂಡ್ ನಿಂದ ಯುವತಿಯನ್ನು ಕರೆಸಿಕೊಂಡಿದ್ದ ಉದ್ಯಮಿಯ ಪುತ್ರನೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಲಕ್ನೋ ನ ಉದ್ಯಮಿಯ ಪುತ್ರ ಯುವತಿಯರ ಮೇಲೆ ಅತಿಯಾದ ಆಸಕ್ತಿ ಹೊಂದಿದ್ದ. ಈ ನಿಟ್ಟಿನಲ್ಲಿ ಆತ ಲೈಂಗಿಕ ಚಟುವಟಿಕೆ ನಡೆಸಲೆಂದೇ ಥೈಲ್ಯಾಂಡ್ ಮೂಲದ ಯುವತಿಯನ್ನು ಭಾರತಕ್ಕೆ ಕರೆತಂದಿದ್ದ.
ಇದಕ್ಕಾಗಿ ಆತ ಬರೋಬ್ಬರಿ 7 ಲಕ್ಷ ರೂ ಖರ್ಚು ಮಾಡಿದ್ದ. ಈ ಹೈಪ್ರೊಫೈಲ್ ಯುವತಿಯಾದ ಈಕೆ ಭಾರತಕ್ಕೆ ಕಾಲಿಡುತ್ತಿಂದೇ ಕೊರೋನಾ ಪಾಸಿಟಿವ್ ಕಾಣಿಕೊಂಡಿತ್ತು. ಈ ನಿಟ್ಟಿನಲ್ಲಿ ಆಕೆಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಯುವತಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.
ಈ ವಿಚಾರ ರಾಯಭಾರಿ ಕಚೇರಿ ಮೂಲಕ ಆಕೆಯ ಮನೆಯವರಿಗೆ ತಿಳಿಸಲಾಯಿತಾದರೂ, ಮೃತದೇಹ ಕೊಂಡೊಯ್ಯಲು ಮನೆಯವರಾರೂ ಬಂದಿರಲಿಲ್ಲ. ಹಾಗಾಗಿ ಲಕ್ನೋದಲ್ಲೇ ಆಕೆಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.