-->

ನಿಮಗೆ 18 ವಯಸ್ಸಾಗಿದ್ದು ಈಗಾಗಲೆ ನೊಂದಾಯಿಸಿದ್ದರೆ ನಾಳೆಯಿಂದಲೆ ಸಿಗುತ್ತೆ ಲಸಿಕೆ

ನಿಮಗೆ 18 ವಯಸ್ಸಾಗಿದ್ದು ಈಗಾಗಲೆ ನೊಂದಾಯಿಸಿದ್ದರೆ ನಾಳೆಯಿಂದಲೆ ಸಿಗುತ್ತೆ ಲಸಿಕೆ

 
ಬೆಂಗಳೂರು: ಈಗಾಗಲೇ ಕೊರೊನಾ ಲಸಿಕೆಗಾಗಿ ನೊಂದಾಯಿಸಿರುವ 18 -44 ವರ್ಷದ ವಯಸ್ಸಿನವರಿಗೆ ನಾಳೆಯಿಂದಲೆ ಕೊರೊನಾ ಲಸಿಕೆ ನೀಡಲು ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 18 -44 ವರ್ಷದ ವಯಸ್ಸಿನವರಿಗೆ ನಾಳೆಯಿಂದ ಬೆಂಗಳೂರಿನ ಜಯನಗರ ಜನರಲ್, ಕೆ ಸಿ ಜನರಲ್, ಸರ್ ಸಿ ವಿ ರಾಮನ್ ಜನರಲ್. ಇಎಸ್ ಐ , ನಿಮ್ಹಾನ್ಸ್ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ಲಸಿಕೆ ನೀಡಲಾಗುವುದು . ಉಳಿದ ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಲಸಿಕೆ ನೀಡಲಾಗುವುದು. ಲಸಿಕೆ ಪೂರೈಕೆ ಹೆಚ್ಚಾದ ಬಳಿಕ ಇನ್ನಷ್ಟು ಲಸಿಕೆ ಕೇಂದ್ರಗಳಲ್ಲಿ ವಿತರಣೆ ಆರಂಭಿಸಲಾಗುವುದು ಎಂದರು.


18 -44 ವರ್ಷದ ವಯಸ್ಸಿನವರಿಗೆ ಲಸಿಕೆ ನೀಡುವಾಗ ಲಸಿಕಾ ಕೇಂದ್ರಗಳಲ್ಲಿ ಪ್ರತ್ಯೇಕ ಸ್ಥಳ ಗುರುತಿಸಲಾಗುವುದು. ಕೋವಿಡ್ , ಆರೋಗ್ಯ ಸೇತು app ಮೂಲಕ ನೊಂದಾಣಿ ಮಾಡಿಸಿ ಸಮಯ ನಿಗದಿ ಮಾಡಿಕೊಂಡವರಿಗೆ ಮಾತ್ರ ಲಸಿಕೆ ನೀಡಲಾಗುವುದು. ನೊಂದಾಣಿ ಇಲ್ಲದೆ ನೇರವಾಗಿ ಬರುವವರಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು . ಪ್ರತಿ ವ್ಯಕ್ತಿಗೂ ಲಸಿಕೆ ನೀಡಲು ಸರಕಾರ ಬದ್ದವಾಗಿದ್ದು ಯುವಮಿತ್ರರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯಬೇಕು ಎಂದು ತಿಳಿಸಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99