ನೆರೆಮನೆಯ ವಿವಾಹಿತನೊಂದಿಗೆ ಒಂದೇ ಮನೆಯ ಸೊಸೆಯರಿಬ್ಬರು ಪರಾರಿ- ಒಬ್ಬನೊಂದಿಗೆ ಇಬ್ಬರ ಲವ್
Wednesday, September 3, 2025
ಕೊಲ್ಕತ್ತಾ: ವಿವಾಹಿತನೂ ಇಬ್ಬರು ಮಕ್ಕಳೂ ಇರುವ ನೆರೆಮನೆಯ ಯುವಕನೊಂದಿಗೆ ಒಂದೇ ಮನೆಯ ಇಬ್ಬರು ಸೊಸೆಯಂದಿರು ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಪಶ್ಚಿಮ ಬಂಗಾಳದ 24 ಪರಗಣದ ಬಾಗ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕುಲ್ಚನ್ ಮಲ್ಲಿಕ್ ಮತ್ತು ನಜ್ಮಾ ಮಂಡಲ್ ಎಂಬ ಒಂದೇ ಮನೆಯ ಇಬ್ಬರು ಸೊಸೆಯಂದಿರಿಗೆ ನೆರೆಮನೆಯ ವಿವಾಹಿತ, ಇಬ್ಬರು ಮಕ್ಕಳಿರುವ ಯುವಕ ಆರಿಫ್ ಮೊಲ್ಲಾ ಎಂಬಾತನೊಂದಿಗೆ ಕಳ್ಳ ಪ್ರೀತಿಯಿತ್ತು. ಸೆಪ್ಟೆಂಬರ್ 1ರಂದು ಮೂವರು ಮನೆ ಬಿಟ್ಟು ಪರಾರಿಯಾಗಿದ್ದಾರೆ.
ಮಲಿಡಾ ಗ್ರಾಮದ ಸಹೋದರರಾದ ಯಾಸಿನ್ ಶೇಖ್ ಮತ್ತು ಅನಿಸೂರ್ ಶೇಖ್‌ರ ಪತ್ನಿಯರಾದ ಕುಲ್ಚನ್ ಮಲ್ಲಿಕ್ ಮತ್ತು ನಜ್ಮಾ ಮಂಡಲ್ ತಮ್ಮ ಪಕ್ಕದ ಮನೆಯ ಆರೀಫ್‌ನೊಂದಿಗೆ ಪ್ರೇಮದ ನಂಟು ಬೆಳೆಸಿಕೊಂಡಿದ್ದಾರೆ. ಆದ್ದರಿಂದ ಇಬ್ಬರೂ ಸೊಸೆಯಂದಿರು ಆರೀಫ್‌ನೊಂದಿಗೆ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾರೆ.
ಅನಿಸೂರ್ ಅಲ್ಲೇ ಗ್ರಾಮದಲ್ಲಿಯೇ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ. ಯಾಸಿನ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ. ಸೆಪ್ಟೆಂಬರ್ 1ರಂದು ಅನಿಸೂರ್ ಮನೆಯಲ್ಲಿ ಇಲ್ಲದಿರುವಾಗ ಕುಲ್ಚನ್ ಮಲ್ಲಿಕ್ ಮತ್ತು ನಜ್ಮಾ ಮಂಡಲ್ ಇಬ್ಬರೂ ಸೇರಿ ಅತ್ತೆ, ಮಾವ ಹಾಗೂ ಮೂವರು ಮಕ್ಕಳಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಮನೆಯಿಂದ ಪರಾರಿಯಾಗಿದ್ದಾರೆ. ಕೆಲಕೆಲ ಹೊತ್ತಿನ ಬಳಿಕ ಅನಿಸೂರ್ ಮನೆಗೆ ಬಂದು ನೋಡಿದಾಗ ಅರೆಪ್ರಜ್ಞಾವಸ್ಥೆಯಲ್ಲಿದ್ದ ಪೋಷಕರು ಹಾಗೂ ಮಕ್ಕಳನ್ನು ನೋಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಮಕ್ಕಳಿಗೆ ಪ್ರಜ್ಞೆ ಬಂದ ನಂತರ ನಡೆದ ವಿಷಯ ಗೊತ್ತಾಗಿದೆ.
ಈ ಬಗ್ಗೆ ಅನಿಸೂರ್ ಅವರು ಬಾಗ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಈ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿಯಿದೆ.