-->
ಉಡುಪಿ: ಅಪ್ರಾಪ್ತನ ಅಪಹರಣ- ಕೊಲ್ಲೂರಿನಲ್ಲಿ ಮಹಿಳೆ ಅರೆಸ್ಟ್

ಉಡುಪಿ: ಅಪ್ರಾಪ್ತನ ಅಪಹರಣ- ಕೊಲ್ಲೂರಿನಲ್ಲಿ ಮಹಿಳೆ ಅರೆಸ್ಟ್



ಉಡುಪಿ: ಕೇರಳದ 17 ವರ್ಷದ ಬಾಲಕನನ್ನು ಕೊಲ್ಲೂರಿಗೆ ಕರೆದುಕೊಂಡು ಬಂದು ವಸತಿಗೃಹದಲ್ಲಿ ಆತನೊಂದಿಗೆ ತಂಗಿದ್ದ ಮಹಿಳೆಯನ್ನು ಕೇರಳದ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಚೇರ್ತಲ ನಿವಾಸಿ ವಿವಾಹಿತೆ ಸನೂಷ(27) ಬಂಧಿತ ಮಹಿಳೆ. ಈಕೆ ಲೈಂಗಿಕ ತೃಷೆಯಿಂದ 17 ವರ್ಷದ ಬಾಲಕನನ್ನು ಅಪಹರಿಸಿದ್ದಾಳೆ ಎಂದು ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಮಹಿಳೆಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ.

ಎರಡು ದಿನಗಳ ಹಿಂದೆ ಆಕೆ ಮತ್ತು ಬಾಲಕ ನಾಪತ್ತೆಯಾಗಿದ್ದರು. ಬಾಲಕನ ಮನೆಯವರು ಹಾಗೂ ಯುವತಿಯ ಮನೆಯವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಕೊಲ್ಲೂರಿಗೆ ಪ್ರಯಾಣಿಸುತ್ತಿರುವಾಗ ಎಲ್ಲಿಯೂ ಅವರು ತಮ್ಮ ಮೊಬೈಲ್ ಬಳಸಿರದ ಕಾರಣ ಪೊಲೀಸರಿಗೆ ಅವರ ಸುಳಿವು ಪತ್ತೆ ಹಚ್ಚಲು ತಡವಾಗಿತ್ತು. ಕೊಲ್ಲೂರು ತಲುಪಿದ ಬಳಿಕ ಮಹಿಳೆ ತನ್ನ ಫೋನಿನಿಂದ ಗೆಳತಿಗೆ ಸಂದೇಶ ಕಳುಹಿಸಿದ್ದಳು. ಈ ಸುಳಿವಿನ ಆಧಾರದಲ್ಲಿ ಕೊಲ್ಲೂರು ವಸತಿ ಗೃಹದಲ್ಲಿ ಪೊಲೀಸರು ಅವರನ್ನು ಪತ್ತೆ ಹಚ್ಚಿ ಮಹಿಳೆಯನ್ನು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article