-->
ತಾಯಿಯಂತೆ ಸಲಹಿದಾಕೆಯನ್ನೇ ಅತ್ಯಾಚಾರಗೈದು ಕೊಲೆ ಮಾಡಿ ಎಸೆದ 17ವರ್ಷದ ಕಾಮುಕ ಬಾಲಕ

ತಾಯಿಯಂತೆ ಸಲಹಿದಾಕೆಯನ್ನೇ ಅತ್ಯಾಚಾರಗೈದು ಕೊಲೆ ಮಾಡಿ ಎಸೆದ 17ವರ್ಷದ ಕಾಮುಕ ಬಾಲಕ


ಹಾಸನ: ಇಲ್ಲಿನ ಅರಸೀಕೆರೆ ತಾಲ್ಲೂಕಿನ ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆತೋಟದಲ್ಲಿ ಇದೇ ಸೆಪ್ಟೆಂಬರ್ 15ರಂದು ನಡೆದ ಮಹಿಳೆಯೊಬ್ಬಳ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪ್ಪ ಅಮ್ಮನನ್ನು  ಕಳೆದುಕೊಂಡ ಹಸಗೂಸನ್ನು ತಾಯಿಯಂತೆ ಪ್ರೀತಿ ತೋರಿ ಅಕ್ಕರೆಯಿಂದ ಸಾಕಿ ಸಲಹಿದಾಕೆಯನ್ನೇ  ಅತ್ಯಾಚಾರಗೈದು 17 ವರ್ಷದ ಅಪ್ರಾಪ್ತ ಬಾಲಕ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

ಆಕೆ ಆತನಿಗೆ ಹೆತ್ತತಾಯಿ ನೀಡುವ ಪ್ರೀತಿ ವಂಚನೆಯಿಲ್ಲದಡ ನೀಡಿದ್ದಳು. ಆದರೆ ಆತ ಮಾತ್ರ ಮಗನಂತಿರದೆ ಕಾಮುಕನಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಸೆ.15ರಂದು ಕೂಲಿ ಕೆಲಸಕ್ಕೆ ಹೊಗಿದ್ದ 45 ವರ್ಷದ ಮಹಿಳೆ ಸಂಜೆಯಾದರೂ ಮನೆಗೆ ಬಂದಿಲ್ಲ. ಮನೆಮಂದಿ ಕರೆಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಗ್ರಾಮಸ್ಥರು ಆತಂಕದಲ್ಲೇ ಇರುವಾಗ ಮರುದಿನ ಪಕ್ಕದೂರಿನ ಬಾಳೆ ತೋಟದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೈ ಮೇಲೆ ಗಾಯದ ಗುರುತು ಇದ್ದಿದ್ದರಿಂದ ಸಹಜವಾಗಿಯೇ ಅನುಮಾನ ಮೂಡಿದ್ದು ಜಾವಗಲ್ ಪೊಲೀಸರು ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. 

ಇದೇ ಸಂದರ್ಭ ಗ್ರಾಮದ ವ್ಯಕ್ತಿಯೊಬ್ಬರು, ಮಹಿಳೆ ಹಾಗೂ ಆಕೆ ಮಗನಂತೆ ಸಾಕಿದ್ದ ಅಪ್ರಾಪ್ತ ಬಾಲಕ ಜಗಳವಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಇದೇ ಸುಳಿವು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಅಪ್ಪ ಅಮ್ಮನಿಲ್ಲದ ಆ ಪಾಪಿಗೆ ತಾಯಿಯಂತೆ ಸಾಕಿ ಸಲಹಿ, ಕೈತುತ್ತುನೀಡಿ ಪ್ರೀತಿ ಮಾಡಿದ್ದ ಅಮ್ಮನಂತೆ ಜೋಪಾನ ಮಾಡುತ್ತಿದ್ದ ಮಹಿಳೆ ಮೇಲೆಯೇ ಅತ್ಯಾಚಾರ ಎಸಗಿ ಕೊಲೆಮಾಡಿರೋದು ಬಯಲಾಗಿದೆ.

17 ವರ್ಷಗಳ ಹಿಂದೆ ತಮ್ಮ ಪಕ್ಕದೂರಿನ ವ್ಯಕ್ತಿಯೊಬ್ಬರು ಅನಾಥ ಮಗುವನ್ನ ತಂದು ಸಾಕಿದ್ದಾರೆ. ಆ ಮನೆಗೆ ಕೆಲಸಕ್ಕೆ ಹೋಗುತ್ತಿದ್ದ ಮೃತ ಮಹಿಳೆ ತನ್ನ ಮಗನಂತೆ ಆತನಿಗೂ ಪ್ರೀತಿ ತೋರಿಸುತ್ತಿದ್ದರು. ಅಮ್ಮನಿಲ್ಲ ಎನ್ನುವ ಕೊರಗು ಬಾರದಂತೆ ತಾನೇ ತಾಯಿಯಾಗಿ ಅಕ್ಕರೆ ತೋರಿದ್ದಳು. ಶಾಲೆಗೆ ಕಳಿಸೋದು, ಕೈತುತ್ತು ನೀಡೋದು ಎಲ್ಲವನ್ನು ಮಾಡಿ ಅಮ್ಮನಾಗಿದ್ದಳು. ಆದ್ರೆ ಈ ಪಾಪಿ ಸೆ.15ರಂದು ಏಕಾಂಗಿಯಾಗಿ ಸಿಕ್ಕ ಆಕೆಯನ್ನ ಹುರಿದು ಮುಕ್ಕಿದ್ದಾನೆ. ಚೀರಾಡಿದ್ರು ಬಿಡದೆ, ಪೈಶಾಚಿಕ ಕೃತ್ಯ ಎಸಗಿ ನೀಚತನ ಪ್ರದರ್ಶನ ಮಾಡಿದ್ದಾನೆ.

ಈ ಕೃತ್ಯವನ್ನ ಅವನೊಬ್ಬನೇ ಮಾಡಿಲ್ಲ ಅವನಿಗೆ ಯಾರೋ ಸಹಾಯ ಮಾಡಿದ್ದಾರೆ ತನಿಖೆಯಾಗಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ. ಕೂಲಿ ಮಾಡುತ್ತಿದ್ದರೂ ಕೂಡ ಸ್ವಾಭಿಮಾನದ ಜೀವನ ನಡೆಸುತ್ತಿದ್ದಳು. ಒಟ್ಟಿನಲ್ಲಿ ಅಪ್ರಾಪ್ತನ ಕೃತ್ಯ ಊರಿಗೆ ಊರನ್ನೆ ಬೆಚ್ಚಿಬೀಳಿಸಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article