ಮಂಗಳೂರು: ಹೆದ್ದಾರಿ ಹೊಂಡಕ್ಕೆ ತಿರುಗಿ ನಿಂತ ದ್ವಿಚಕ್ರ ವಾಹನ- ಅದೃಷ್ಟವಶಾತ್ ಜೀವ ಪಾರು
Sunday, September 21, 2025
ಮಂಗಳೂರು: ಇತ್ತೀಚೆಗೆ ನಗರದ ಕೂಳೂರು ಬಳಿ ರಾಷ್ಟ್ರೀಯ ಹೆದ್ದಾರಿ ಗುಂಡಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಗೆ ತೇಪೆ ಹಚ್ಚುವ ಕಾರ್ಯ ಮಾಡಿತ್ತು ಆದರೂ ಅಲ್ಲಲ್ಲಿ ಹೊಂಡಗಳು ಬಾಯ್ದೆರೆದು ನಿಂತಿದೆ.
ಇದೀಗ ಹೆದ್ದಾರಿ ಗುಂಡಿ ಅವಾಂತರದ ಮತ್ತೊಂದು ವೀಡಿಯೋ ವೈರಲ್ ಆಗಿದೆ. ರವಿವಾರ 11.30ಸುಮಾರಿಗೆ ನಂತೂರಿನಿಂದ ಕೆಪಿಟಿ ಕಡೆಗೆ ಸಾಗುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನವೊಂದು ಹೆದ್ದಾರಿ ಗುಂಡಿಯಿಂದ ಸಂಪೂರ್ಣ ತಿರುಗಿ ನಿಂತಿದೆ. ಅದೃಷ್ಟವಶಾತ್ ಹಿಂಬದಿಯಲ್ಲಿ ವಾಹನವಿರದಿದ್ದರಿಂದ ಭಾರೀ ಅಪಾಯ ತಪ್ಪಿದಂತಾಗಿದೆ. ಘಟನೆಯ ದೃಶ್ಯ ಅಲ್ಲಿಯೇ ಸಂಚರಿಸುತ್ತಿದ್ದ ಕಾರೊಂದರ ಡ್ಯಾಶ್ ಬೋರ್ಡ್‌ನಲ್ಲಿ ಸೆರೆಯಾಗಿದೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.