ಪ್ರೇಯಸಿಯ ಒತ್ತಡಕ್ಕೆ ಪತ್ನಿಯನ್ನೇ ಕೊಲೆಗೈದು ಬಿಜೆಪಿ ಮುಖಂಡ ರೋಹಿತ್ ಸೈನಿ
ಅಜ್ಮೀರ್: ಪ್ರೇಯಸಿ ಒತ್ತಡಕ್ಕೆ ಮಣಿದು ಬಿಜೆಪಿ ಮುಖಂಡ ರೋಹಿತ್ ಸೈನಿ ಪತ್ನಿಯನ್ನೇ ಕೊಲೆಗೈದಿರುವ ಘಟನೆ ಅಜ್ಮೀರ್‌ನಲ್ಲಿ ನಡೆದಿದೆ.
ರೋಹಿತ್ ಸೈನಿ ತನ್ನ ಪ್ರೇಯಸಿ ರಿತು ಸೈನಿಯ ಮಾತು ಕೇಳಿ ಪತ್ನಿಯನ್ನು ಹತ್ಯೆ ಮಾಡಿ ಈಗ ಜೈಲು ಸೇರಿದ್ದಾನೆ. ಆಗಸ್ಟ್ 10ರಂದು ರಾಜಸ್ಥಾನದ ಅಜ್ಮೀರ್‌ನಲ್ಲಿ ಈ ಹತ್ಯೆ ನಡೆದಿತ್ತು. ಆರಂಭದಲ್ಲಿ ದರೋಡೆ ಎಂದು ಬಿಂಬಿಸಲಾಗಿತ್ತು, ಆದರೆ ಪೊಲೀಸರು ಒಂದು ದಿನದೊಳಗೆ ಪಿತೂರಿಯನ್ನು ಬಯಲು ಮಾಡಿದ್ದಾರೆ. ಆಗಸ್ಟ್ 10ರಂದು ಸಂಜು ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ.
ರೋಹಿತ್ ಸೈನಿ ತನ್ನ ಮೊದಲ ಹೇಳಿಕೆಯಲ್ಲಿ, ದರೋಡೆಕೋರರು ತನ್ನ ಪತ್ನಿಯನ್ನು ಕೊಂದು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸ್ ತನಿಖೆಯಲ್ಲಿ ಇಂತಹ ಘಟನೆ ಯಾವುದೂ ನಡೆದಂತಿರಲಿಲ್ಲ. ಬಳಿಕ ತನಿಖೆಯಲ್ಲಿ ರೋಹಿತ್ ಸೈನಿ ಮೇಲೆಯೇ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ಪೊಲೀಸರು ರೋಹಿತ್ ಸೈನಿ ಹಾಗೂ ಗೆಳತಿ ರಿತು ಸೈನಿಯನ್ನೂ ಬಂಧಿಸಿದ್ದಾರೆ.
ರೋಹಿತ್ ಸ್ವತಃ ತನ್ನ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕೃತ್ಯ ಆಕಸ್ಮಿಕವಲ್ಲ. ಆದರೆ ತನ್ನ ಸ್ನೇಹಿತೆಯ ಪ್ರಭಾವದಿಂದ ಪೂರ್ವಯೋಜಿತ ಕೊಲೆ ಎಂದು ಹೇಳಿದ್ದಾರೆ. ರೋಹಿತ್ ಮತ್ತು ರಿತು ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೋಹಿತ್ ಸೈನಿ ಪತ್ನಿ ಸಂಜು ಅವರಿಬ್ಬರ ಮಧ್ಯೆ ಗೋಡೆಯಂತಿದ್ದರು. ಆದ್ದರಿಂದ ಹೇಗಾದರೂ ಮಾಡಿ ಆಕೆಯನ್ನು ತನ್ನ ಜೀವನದಿಂದ ದೂರವಾಗುವಂತೆ ಮಾಡಬೇಕು ಎಂದು ರೋಹಿತ್ಗೆ ಒತ್ತಡ ಹಾಕಿ ರಿತು ಈ ಕೊಲೆ ಮಾಡಿಸಿದ್ದಾಳೆ. ಪ್ರಕರಣವನ್ನು 24 ಗಂಟೆಗಳೊಳಗೆ ಭೇದಿಸಲಾಯಿತು.