ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ
Sunday, August 17, 2025
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ಮತ್ತು ಪತ್ನಿ ಸ್ವಪ್ನಾ ರಾವ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು, ಇಬ್ಬರೂ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅಜಯ್ ರಾವ್ ಮತ್ತು ಸ್ವಪ್ನಾ ರಾವ್ ಪ್ರೀತಿಸಿ ವಿವಾಹವಾಗಿರು ಜೋಡಿ. ಹಲವು ವರ್ಷಗಳ ದಾಂಪತ್ಯ ಜೀವನದ ಬಳಿಕ, ಅಸಮಾಧಾನಗಳು ಹಾಗೂ ಭಿನ್ನಾಭಿಪ್ರಾಯಗಳು ಹೆಚ್ಚಾಗಿ, ದಾಂಪತ್ಯ ಮುಂದುವರಿಸುವುದು ಕಷ್ಟಕರವಾಗಿದೆ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಪರಸ್ಪರ ಪ್ರೀತಿಸಿ ವಿವಾಹವಾಗಿ ಹಲವು ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವುದು ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
*ಸಿನಿಮಾ ನಿರ್ಮಾಣಕ್ಕೆ ಇಳಿದದ್ದೇ ದಾಂಪತ್ಯದಲ್ಲಿ ಬಿರುಗಾಳಿ*
ನಟ ಅಜಯ್ ರಾವ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರುವುದೇ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗುತ್ತಿದೆ. ಮದುವೆಯಾದ ಬಳಿಕ ಅಜಯ್ ರಾವ್ 'ಶ್ರೀ ಕೃಷ್ಣ ಆರ್ಟ್ ಆ್ಯಂಡ್ ಕ್ರಿಯೇಷನ್' ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು. ಆದರೆ, ಪತ್ನಿ ಸ್ವಪ್ನಾ ಅವರು ಸಿನಿಮಾ ನಿರ್ಮಾಣಕ್ಕೆ ಇಳಿಯಬೇಡಿ ಎಂದು ಪದೇಪದೇ ಎಚ್ಚರಿಸುತ್ತಿದ್ದರು. ಹೀಗಿದ್ದರೂ, ಅಜಯ್ ರಾವ್ ಕೃಷ್ಣಲೀಲಾ, ಯುದ್ಧಕಾಂಡ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದರು.
ವಿಶೇಷವಾಗಿ ಯುದ್ಧಕಾಂಡ ಸಿನಿಮಾಗಾಗಿ ಅಜಯ್ ರಾವ್ ಭಾರೀ ಸಾಲ ಮಾಡಿಕೊಂಡಿದ್ದರು. ಇಷ್ಟೇ ಅಲ್ಲದೆ, ಈ ಚಿತ್ರಕ್ಕಾಗಿ ತಮ್ಮ ನೆಚ್ಚಿನ ದುಬಾರಿ ಕಾರನ್ನೂ ಮಾರಾಟ ಮಾಡಿದ್ದರು.
ಸಿನಿಮಾ ಬಿಡುಗಡೆಯಾದ ಬಳಿಕ ದಾಂಪತ್ಯದಲ್ಲಿ ಪದೇ ಪದೇ ಕಲಹಗಳು ನಡೆಯುತ್ತಿತ್ತು. ವಿಪರೀತ ಸಾಲದ ಒತ್ತಡವೇ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಅಂತಿಮವಾಗಿ ಕಲಹಕ್ಕೆ ಬೇಸತ್ತು, ಪತ್ನಿ ಸ್ವಪ್ನಾ ರಾವ್ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ.
ಯುದ್ಧಕಾಂಡ ಸಮಯದಲ್ಲಿ ಅಜಯ್ ರಾವ್ ತಮ್ಮ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಿದ್ದರು. ಆ ವೇಳೆ ಅವರ ಪುತ್ರಿ “ಕಾರನ್ನು ಮಾರಾಟ ಮಾಡಬೇಡಿ” ಎಂದು ಅಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡಿತ್ತು.
*ಡೈವೋರ್ಸ್ ಬಗ್ಗೆ ಅಜಯ್ ರಾವ್ ರಿಯಾಕ್ಷನ್*
ಈ ಕುರಿತು ಪ್ರತಿಕ್ರಿಯಿಸಿದ ಅಜಯ್ ರಾವ್, “ನನಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪತ್ನಿಯೊಂದಿಗೆ ಮಾತನಾಡಿ ವ
ಬಳಿಕ ಹೇಳುತ್ತೇನೆ” ಎಂದು ತಿಳಿಸಿದ್ದಾರೆ.
ಆದರೆ ಸ್ವಪ್ನಾ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಅವರಿಂದ ಪ್ರತಿಕ್ರಿಯೆ ದೊರಕಿಲ್ಲ. ಜೊತೆಗೆ, ಸ್ವಪ್ನಾ ತಮ್ಮ ಹೆಸರಿನ ಮುಂದಿದ್ದ 'ಅಜಯ್ ರಾವ್' ಹೆಸರನ್ನು ತೆಗೆದು ಹಾಕಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಡಿವೋರ್ಸ್‌ಗೆ ನಿಜವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ.