ಹೊಸ ಕಾರು ಖರೀದಿಸಿದ ಕ್ರಿಕೆಟರ್ ಆಕಾಶ್ ದೀಪ್‌ಗೆ ಸಾರಿಗೆ ಸಂಸ್ಥೆಯಿಂದ ನೋಟಿಸ್ ಜಾರಿ- ಏಕೆ ಗೊತ್ತಾ?
ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆ ಆಕಾಶ್ ದೀಪ್ ಆಗಸ್ಟ್ 7 ರಂದು ಕಪ್ಪುಬಣ್ಣದ ಟೊಯೋಟಾ ಫಾರ್ಚೂನರ್ ಕಾರನ್ನು ಖರೀದಿಸಿದ್ದರು. ಆದರೆ, ಸದ್ಯಕ್ಕೆ ಅವರು ತಮ್ಮ ಹೊಸ ಕಾರನ್ನು ಚಲಾಯಿಸಲು ಆಗುವುದಿಲ್ಲ. ಏಕೆಂದರೆ ಸಾರಿಗೆ ಸಂಸ್ಥೆಯು ಆಕಾಶ್ ದೀಪ್‌ಗೆ ನೋಟಿಸ್ ಜಾರಿ ಮಾಡಿದೆ.
ಹೌದು... ನೋಂದಣಿ ಮತ್ತು ಹೆಚ್ಚಿನ ಭದ್ರತಾ ನಂಬರ್ ಪ್ಲೇಟ್‌ಯಿಲ್ಲದೆ ಐಷಾರಾಮಿ ಕಾರನ್ನು ಖರೀದಿಸಿದ ಆರೋಪ ಅವರ ಮೇಲಿದೆ. ಆದ್ದರಿಂದ ನೋಂದಣಿ ಆಗುವವರೆಗೆ ಕಾರನ್ನು ರಸ್ತೆಯಲ್ಲಿ ಓಡಿಸದಂತೆ ಆಕಾಶ್ ದೀಪ್‌ಗೆ ಸೂಚನೆ ನೀಡಲಾಗಿದೆ ಮತ್ತು ಕಾರು ರಸ್ತೆಯಲ್ಲಿ ಚಲಾಯಿಸುತ್ತಿರುವುದು ಕಂಡುಬಂದರೆ ಅದನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಆಕಾಶ್ ದೀಪ್ ಲಕ್ನೋದಲ್ಲಿ ಟೊಯೋಟಾ ಫಾರ್ಚೂನರ್ ಕಾರನ್ನು (ಚಾಸಿಸ್ ಸಂಖ್ಯೆ- MBJAA3GS000642625, ಎಂಜಿನ್ ಸಂಖ್ಯೆ- 1GDA896852) ಖರೀದಿಸಿದ್ದರು. ಆದರೆ ಅದರ ನೋಂದಣಿ ಪೂರ್ಣಗೊಂಡಿಲ್ಲ ಮತ್ತು ಅವರಿಗೆ ಹೆಚ್ಚಿನ ಭದ್ರತಾ ನಂಬರ್ ಪ್ಲೇಟ್ ಸಿಕ್ಕಿರಲಿಲ್ಲ.
ಮೋಟಾರು ವಾಹನ ಕಾಯ್ದೆಯ ಪ್ರಕಾರ, ನೋಂದಣಿ ಮತ್ತು ಹೆಚ್ಚಿನ ಭದ್ರತಾ ನಂಬರ್ ಪ್ಲೇಟ್ ಇಲ್ಲದೆ ಯಾವುದೇ ವಾಹನವನ್ನು ಓಡಿಸಕೂಡದು. ಕಾರನ್ನು ಮಾರಾಟ ಮಾಡಿದ ಶೋ ರೂಂಗೆ ಸಾರಿಗೆ ಇಲಾಖೆ ದಂಡ ವಿಧಿಸಿದೆ ಮತ್ತು ಕಾನೂನಿನ ಪ್ರಕಾರ, ಶೋ ರೂಂ ನೋಂದಣಿ ಮತ್ತು ಹೆಚ್ಚಿನ ಭದ್ರತಾ ನಂಬರ್ ಪ್ಲೇಟ್ ಇಲ್ಲದೆ ಗ್ರಾಹಕರಿಗೆ ಕಾರನ್ನು ನೀಡಲು ಸಾಧ್ಯವಿಲ್ಲದ ಕಾರಣ ಡೀಲರ್‌ಶಿಪ್ ಅನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ.