ಲೀವ್ ಇನ್ ಸಂಗಾತಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದು ಶರಣಾದ CRPF ಕಾನ್‌ಸ್ಟೇಬಲ್
Sunday, July 20, 2025
ಗಾಂಧಿನಗರ: ಸಹಾಯಕ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಕೆಯ ಲಿವ್ ಇನ್ ಸಂಗಾತಿ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಕಾನ್‌ಸ್ಟೇಬಲ್ ಕತ್ತು ಹಿಸುಕಿ ಹತ್ಯೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಅರುಣಾಬೆನ್ ನಟುಭಾಯಿ ಜಾದವ್ ಹತ್ಯೆಯಾದ ಎಎಸ್‌ಐ. ಈಕೆ ಕಛ್ ಜಿಲ್ಲೆಯ ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಅರುಣಾಬೆನ್ ಮತ್ತು ಆಕೆಯ ಲಿವ್ ಇನ್ ಸಂಗಾತಿ ದಿಲೀಪ್ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಆತ ಅರುಣಾಬೆನ್‌ರನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಆಕೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಅಂಜರ್ ವಿಭಾಗದ ಡಿವೈಎಸ್‌ಪಿ ಮುಖೇಶ್ ಚೌಧರಿ ಹೇಳಿದ್ದಾರೆ.
ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ನಿಯೋಜನೆಗೊಂಡಿರುವ ಆರೋಪಿ ದಿಲೀಪ್ ಮಹಿಳಾ ಪೊಲೀಸ್ ಅಧಿಕಾರಿ ಅರುಣಾಬೆನ್‌ನೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದ. ಇಬ್ಬರೂ ವಿವಾಹವಾಗಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.