BSNLನಿಂದ 1ರೂ.ಗೆ 1ಜಿಬಿ ಡೇಟಾ: 400ಜಿಬಿಯ ಬಿಗ್ ಆಫರ್ ವ್ಯಾಲಿಡಿಟಿ, ಎಷ್ಟು ಬೆಲೆ ಸಂಪೂರ್ಣ ಮಾಹಿತಿ ಇಲ್ಲಿದೆ
ನವದೆಹಲಿ: ಭಾರತದ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಅದ್ಭುತ ಆಫರ್ ಬಿಡುಗಡೆ ಮಾಡಿದೆ. 1 ರೂ.ಗೆ 1GBನಂತೆ 400GB ಡೇಟಾದ ಆಫರ್ ನೀಡಿದೆ.
ಬಿಎಸ್‌ಎನ್‌ಎಲ್ ಫ್ಲ್ಯಾಶ್ ಸೇಲ್ ಅಲರ್ಟ್ (BSNL FLASH SALE ALERT) ಅಡಿ ಈ ವಿಶೇಷ ಪ್ಲಾನ್ ಅನ್ನು ನೀಡಿಲಾಗಿದೆ. ಕಳೆದ ಮೂರು ತಿಂಗಳಿನಿಂದ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆಫರ್ ಬಿಡುಗಡೆ ಮಾಡಲಾಗಿದೆ. ಗ್ರಾಹಕರ ಸಂಖ್ಯೆ ಕುಸಿತದ ಬಳಿಕ 5G ಸೇವೆಗಳನ್ನು ಮತ್ತು ಮನೆ ಬಾಗಿಲಿಗೆ ಸಿಮ್ ಕಾರ್ಡ್ ವಿತರಣೆಯನ್ನು ಪರಿಚಯಿಸಲು ಬಿಎಸ್‌ಎನ್‌ಎಲ್ ಯೋಚಿಸುತ್ತಿದೆ. ಈಗಾಗಲೇ ನಂಬರ್ ಒನ್ ಮತ್ತು ಸೆಕೆಂಡ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಮತ್ತು ಭಾರ್ತಿ ಏರ್‌ಟೆಲ್ (Bharti Airtel) ಮನೆ ಬಾಗಿಲಿಗೆ ಸಿಮ್ ವಿತರಣೆಯ ಸೇವೆಯನ್ನು ಒದಗಿಸುತ್ತಿವೆ.
ಅದಕ್ಕಾಗಿ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಟಕ್ಕರ್ ನೀಡಲು ಮುಂದಾಗಿರುವ ಬಿಎಸ್‌ಎನ್‌ಎಲ್, ಇದೀಗ 400GBಯ ಬಿಗ್ ಆಫರ್ ತಂದಿದೆ. ಇದು ಡೇಟಾ ಪ್ಯಾಕ್ ಮಾತ್ರ ಆಗಿದೆ. 400GBಯ ಬಿಗ್ ಆಫರ್ ಬೆಲೆ ಮತ್ತು ವ್ಯಾಲಿಡಿಟಿ ಎಷ್ಟು ಎಂದು ನೋಡೋಣ ಬನ್ನಿ.
ಬಿಎಸ್‌ಎನ್ಎಲ್ ಫ್ಲ್ಯಾಶ್ ಅಲರ್ಟ್ ಪ್ಲಾನ್
ಆಫರ್ ವ್ಯಾಲಿಡಿಟಿ: 28ನೇ ಜೂನ್‌ನಿಂದ 1st ಜುಲೈವರೆಗೆ ಮಾತ್ರ ಇರಲಿದೆ. ಈ ಸಮಯದಲ್ಲಿ ಗ್ರಾಹಕರು ಈ ಆಫರ್ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.
ಎರಡು ಡೇಟಾ ಆಫರ್
ಬಿಎಸ್‌ಎನ್ಎಲ್ 400GB ಡೇಟಾದೊಂದಿಗೆ ಇನ್ನು ಎರಡು ಆಫರ್‌ಗಳನ್ನು ನೀಡುತ್ತಿರುತ್ತದೆ. 1 ದಿನ ವ್ಯಾಲಿಡಿಟಿ ಹೊಂದಿರುವ 16 ರೂ. ಪ್ಲಾನ್‌ನಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಡೇಟಾ ಲಭ್ಯವಾಗುತ್ತದೆ. ಬಿಎಸ್‌ಎನ್‌ಎಲ್ ಮತ್ತೊಂದು ಡೇಟಾ ಪ್ಲಾನ್ ಹೊಂದಿದೆ. ಇದು 40 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸಿಗಲಿದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಲು 198 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.
ಬಿಎಸ್‌ಎನ್‌ಎಲ್ ವಾರ್ಷಿಕ ಪ್ಲಾನ್‌ಗಳು ಹೀಗಿವೆ
2399 ರೂ. ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ದೇಶದಾದ್ಯಂತ ಅನಿಯಮಿತವಾಗಿ ಕರೆ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಈ ಪ್ಯಾಕ್ 395 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು.
1999ರೂ. ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಒಟ್ಟು 600GB ಡೇಟಾ ಸಿಗುತ್ತದೆ. ಇದು 365 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಯಾವುದೇ ನೆಟ್‌ವರ್ಕ್‌ಗೆ ದೇಶದಾದ್ಯಂತ ಅನಿಯಮಿತವಾಗಿ ಕರೆ ಮಾಡಬಹುದು. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು.
1499ರೂ. ಪ್ರಿಪೇಯ್ಡ್ ಪ್ಲಾನ್
ಈ ಪ್ರಿಪೇಯ್ಡ್ ಪ್ಲಾನ್ 336 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ಇಂಟರ್‌ನೆಟ್ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ದೇಶದಾದ್ಯಂತ ಅನಿಯಮಿತವಾಗಿ ಕರೆ ಮಾಡಬಹುದು. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು.