ಸೌದಿಯಲ್ಲಿ ಐವರು ವಿದೇಶಿಗರಿಗೆ ಮರಣದಂಡನೆ
Sunday, June 29, 2025
ಸೌದಿ ಅರೇಬಿಯಾ: ಮಾದಕದ್ರವ್ಯ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಐವರು ವಿದೇಶಿಗರಿಗೆ ಸೌದಿಯಲ್ಲಿ ಮರಣದಂಡನೆ ವಿಧಿಸಲಾಗಿದೆ.
ನಜ್ರಾನ್ ಮತ್ತು ತಬೂಕ್‌ನಲ್ಲಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾ ದೇಶದ ಗೃಹಸಚಿವಾಲಯ ತಿಳಿಸಿದೆ. ಸೊಮಾಲಿಯಾದ ಇರ್ಷಾದ್ ಅಲಿ ಮೂಸಾ ಅರಾಲಿ, ಸಿಯಾದ್ ಫಾರಿಹ್ ಜಾಮಿಯಾ ಉಮರ್, ಇಬ್ರಾಹಿಂ ಅಬ್ದು ವರ್ಸಮಿ ಜಾಮಿಯಾ ಎಂಬವರನ್ನು ನಜ್ರಾನ್‌ನಲ್ಲಿ ಗಲ್ಲಿಗೇರಿಸಲಾಗಿದೆ. ಈಜಿಪ್ಟ್ ದೇಶದ ಮೊಹಮ್ಮದ್ ಅನ್ವರ್ ಮೊಹಮ್ಮದ್ ಅಬ್ದುರಹ್ಮಾನ್ ಮತ್ತು ಮುಹಮ್ಮದ್ ಕಾಮಿಲ್ ಸ್ವಲಾಹ್ ಕಾಮಿಲ್ ಎಂಬಿಬ್ಬರಿಗೆ ತಬೂಕ್‌ನಲ್ಲಿ ಮರಣ ದಂಡನೆ ವಿಧಿಸಲಾಗಿದೆ.
ಇವರು ಎರಡು ಬಾರಿ ಮಾದಕದ್ರವ್ಯಗಳನ್ನು ಸೌದಿಗೆ ಕಳ್ಳ ಸಾಗಣೆ ಮಾಡಿದ್ದಾರೆ. ಆದ್ದರಿಂದ ಈ ಕಠಿಣ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಲಾಗಿದೆ.