-->
ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ "ಸಿಂಹ ಘರ್ಜನೆ": ಸರ್ವ ಧರ್ಮದ ಗುಣಗಾನ, ಶಿವನ ಭಾವಚಿತ್ರ ತೋರಿಸಿ ಮೋದಿ ವಿರುದ್ಧ ತೊಡೆ ತಟ್ಟಿದ ರಾಹುಲ್

ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ "ಸಿಂಹ ಘರ್ಜನೆ": ಸರ್ವ ಧರ್ಮದ ಗುಣಗಾನ, ಶಿವನ ಭಾವಚಿತ್ರ ತೋರಿಸಿ ಮೋದಿ ವಿರುದ್ಧ ತೊಡೆ ತಟ್ಟಿದ ರಾಹುಲ್

ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ "ಸಿಂಹ ಘರ್ಜನೆ": ಸರ್ವ ಧರ್ಮದ ಗುಣಗಾನ, ಶಿವನ ಭಾವಚಿತ್ರ ತೋರಿಸಿ ಮೋದಿ ವಿರುದ್ಧ ತೊಡೆ ತಟ್ಟಿದ ರಾಹುಲ್


ರಾಹುಲ್ ಭಾಷಣದ ಫುಲ್ ವೀಡಿಯೋ ಇಲ್ಲಿದೆ...





  • ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ "ಸಿಂಹ ಘರ್ಜನೆ"
  • ಸರ್ವ ಧರ್ಮದ ಗುಣಗಾನ, ಶಿವನ ಭಾವಚಿತ್ರ ತೋರಿಸಿ ತೊಡೆ ತಟ್ಟಿದ ರಾಹುಲ್
  • ಹಿಂದೂ ವಿರೋಧಿ ಎಂದು ಮೋದಿ ವಿರುದ್ಧ ಹೂಂಕರಿಸಿದ ರಾಗಾ
  • ಸ್ಪೀಕರ್ ಚಾಲಾಕಿತನ; ರಾಗಾ ಭಾಷಣಕ್ಕೆ ಮೈಕ್ ಆಫ್
  • ಶಿವನ ಚಿತ್ರ ಪ್ರದರ್ಶನ ವೇಳೆ ಕ್ಯಾಮಾರ ಕಣ್ಣಿಂದ ರಾಹುಲ್ ಆಫ್‌!!!
  • ಮೋದಿ ಬಯಲಾಜಿಕಲ್ ಸಂಬಂಧದ ಮಾತಿಗೆ ಲೋಕಸಭೆಯಲ್ಲಿ ನಗುವೋ ನಗು

10 ವರ್ಷಗಳ ಬಳಿಕ ಪ್ರತಿಪಕ್ಷ ತನ್ನ ನೈಜ ಪ್ರತಿಪಕ್ಷತನವನ್ನು ತೋರಿಸಿದೆ. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿಯವರ "ಸಿಂಹ ಘರ್ಜನೆ" ಆಡಳಿತ ಪಕ್ಷದ ಸದಸ್ಯರಲ್ಲಿ ಮಂಕು ಕವಿಯುವಂತೆ ಮಾಡಿದೆ.




ರಾಹುಲ್‌ ಗಾಂಧಿಯವರ ಒಂದು ಗಂಟೆಗೂ ಹೆಚ್ಚಿನ ಅವಧಿಯ ಭಾಷಣವು ಆಡಳಿತ ಪಕ್ಷವನ್ನು ಎಷ್ಟು ಚುಚ್ಚಿತ್ತೆಂದರೆ, ಸ್ವತಃ ಸಭಾಧ್ಯಕ್ಷ ಓಂ ಬಿರ್ಲಾ ರವರೇ ರಕ್ಷಣೆಗೆ ಬರಬೇಕಾಯಿತು.


ಸ್ವತಃ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಹಿತ ಎಲ್ಲ ಸಚಿವರೂ ಎದ್ದು ನಿಂತು ಕುಳಿತು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.


ಒಂದು ಹಂತದಲ್ಲಿ ಮೋದಿ "ಹಿಂದೂಗಳಿಗೆ ಅವಮಾನವಾಗುತ್ತಿದೆ" ಎಂದು ಆರೋಪಿಸಿದರು. ಇದಕ್ಕೆ ಖಡಕ್ ಪ್ರತ್ಯುತ್ತರ ನೀಡಿದ ರಾಹುಲ್, ಮೋದಿ ಹಿಂದೂವಲ್ಲ, ಮೋದಿ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ. ಆರ್‌ಎಸ್‌ಎಸ್ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ, ಬಿಜೆಪಿ ಹಿಂದೂಗಳ ಪ್ರತಿನಿಧಿಯಲ್ಲ ಎಂದು ಹೇಳುವ ಮೂಲಕ ಇಡೀ ಲೋಕಸಭೆಯಲ್ಲಿ ಮಾರ್ಧನಿಸಿದರು.




Ads on article

Advertise in articles 1

advertising articles 2

Advertise under the article