George Fernandes Road- ಮಂಗಳೂರಿನ ಪ್ರಮುಖ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಹೆಸರು: ಮೇಯರ್ ಸುಧೀರ್ ಶೆಟ್ಟಿ
Thursday, July 4, 2024
George Fernandes Road- ಮಂಗಳೂರಿನ ಪ್ರಮುಖ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಹೆಸರು: ಮೇಯರ್ ಸುಧೀರ್ ಶೆಟ್ಟಿ
ದೇಶದ ರೈಲ್ವೇ ಸಚಿವರಾಗಿ, ರಕ್ಷಣಾ ಸಚಿವರಾಗಿ ಕಾರ್ಮಿಕ ಮುಖಂಡರಾಗಿ ಪ್ರಖ್ಯಾತರಾಗಿದ್ದ ಮಂಗಳೂರು ಮೂಲದ ರಾಜಕಾರಣಿ ಜಾರ್ಜ್ ಫರ್ನಾಂಡಿಸ್ ಅವರ ಹೆಸರನ್ನು ಮಂಗಳೂರಿನ ಪ್ರಮುಖ ರಸ್ತೆಗೆ ನೀಡಲು ಮುಂದಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕಣ್ಣೂರು ಸುಧೀರ್ ಶೆಟ್ಟಿ ಈ ವಿಷಯ ಪ್ರಕಟಿಸಿದ್ದು, ಜುಲೈ 6ರಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಈ ರಸ್ತೆಯ ನಾಮಕರಣವನ್ನು ಅಧಿಕೃತವಾಗಿ ಮಾಡಲಾಗುವುದು ಎಂದು ತಿಳಿಸಿದರು.