-->

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಮಾಡಿದ್ದ ಪ್ರಧಾನ ಅರ್ಚಕ ನಿಧನ

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಮಾಡಿದ್ದ ಪ್ರಧಾನ ಅರ್ಚಕ ನಿಧನ

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಮಾಡಿದ್ದ ಪ್ರಧಾನ ಅರ್ಚಕ ನಿಧನ





ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ವಿಧಿಗಳನ್ನು ನೆರವೇರಿಸಿದ್ದ ಪ್ರಧಾನ ಅರ್ಚಕ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.


ಕೆಲ ದಿನಗಳಿಂದ ಅವರು ಅನಾರೋಗ್ಯ ಪೀಡಿತರಾಗಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು.


ಪ್ರಧಾನ ಅರ್ಚಕ ದೀಕ್ಷಿತ್ ಅವರು ವೇದಗಳಲ್ಲಿ ಅಪಾರ ಪಾಂಡಿತ್ಯವುಳ್ಳವರಾಗಿದ್ದರು. ಜನವರಿ 22ರಂದು ಬಾಲರಾಮನ ಮೂರ್ತಿಯನ್ನು ಪ್ರಾಣಪ್ರತಿಷ್ಠೆ ಧಾರ್ಮಿಕ ವಿಧಿಯಲ್ಲಿದ್ದ 12 ಅರ್ಚಕರಿದ್ದ ತಂಡವನ್ನು ಇವರು ಮುನ್ನಡೆಸಿದ್ದರು.


ಪ್ರಧಾನಿ ನರೇಂದ್ರ ಮೋದಿ ಅವರು ಯಜಮಾನ ಸ್ಥಾನದಲ್ಲಿದ್ದು, ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿಯನ್ನು ನೆರವೇರಿಸಲಾಗಿತ್ತು. ಆಚಾರ್ಯ ಅವರು ಮೀರ್ ಘಾಟ್‌ ಇರುವ ಸಂಗದೇವ ಮಹಾ ವಿದ್ಯಾಲಯದಲ್ಲಿ ಹಿರಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.


ಲಕ್ಷ್ಮೀಕಾಂತ ದೀಕ್ಷಿತ್ ಅವರ ಹಿರಿಯರು ಮಹಾರಾಷ್ಟ್ರದ ಸೊಲ್ಲಾಪುರದವರು. ಹಲವು ತಲೆಮಾರುಗಳಿಂದ ಅವರು ಕುಟುಂಬ ವಾರಣಾಸಿಯಲ್ಲಿಯೇ ನೆಲೆಸಿದೆ. ಇವರ ಪೂರ್ವಜರು ಆಗಿನ ನಾಗಪುರ ಮತ್ತು ನಾಸಿಕ್ ರಾಜಸಂಸ್ಥಾನಗಳಲ್ಲಿ ಅರ್ಚಕರಾಗಿದ್ದರು.



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99